ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ರಾಯಲ್ಪಾಡು 1 : ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳು ಸೌಲಭ್ಯಗಳನ್ನು ಪರಿಚಯಿಸಿ, ಅನುಕೂಲಮಾಡಿಕೊಡುವುದೇ ವಾರ್ಡ್ ಸಭೆ ಮತ್ತು ಗ್ರಾಮಸಭೆಯ ಉದ್ದೇಶ ಎಂದು ಅಧ್ಯಕ್ಷ ಆರ್.ವಿಶ್ವನಾಥರೆಡ್ಡಿ ಹೇಳೀದರು.
ಕೂರಿಗೇಪಲ್ಲಿ ಗ್ರಾಮಪಂಚಾಯಿತಿ ವತಿಯಿಂದ ಗುರುವಾರ ನಡೆದ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಪಂಚಾಯಿತಿವತಿಯಿಂದ ಪಂಚಾಯಿತಿಗೆ ಸಂಬಂದಿಸಿದ ಪ್ರತಿ ಗ್ರಾಮದಲ್ಲಿಯೂ ಕುಡಿಯುವ ನೀರು,ಬೀದಿದೀಪಗಳು,ಚರಂಡಿಗಳ ಸ್ವಚ್ಚತೆ,ಗ್ರಾಮನೈರ್ಲಮ್ಯ, ಸ್ವಚ್ಚತೆಯ ಬಗ್ಗೆ ಹೆಚ್ಚಿನ ಆಧ್ಯತೆ ನೀಡಲಾಗುದು. ನರೇಗಾ ಯೋಜನೆಗಳ ಮೂಲಕ ಸಿಮೆಂಟ್‍ರಸ್ತೆ, ಚರಂಡಿಗಳ ಅಭಿವೃದ್ಧಿ, ಕೆರೆಗಳ ಅಭಿವೃದ್ದಿ,ಕೃಷಿ ಹೊಂಡ,ಬದಿ ನಿರ್ಮಾಣ ಹಾಗು ಇತರೆ ಕೆಲಸ ಕಾರ್ಯಗಳ ಮೂಲಕ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಗ್ರಾಮಗಳಲ್ಲಿನ ಸ್ಥಳೀಯ ನಾಗರೀಕರು ತಮ್ಮ ಗ್ರಾಮಗಳಲ್ಲಿ ಪಂಚಾಯಿತಿವತಿಯಿಂದ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಗಮನಹರಿಸಿ ಸರ್ಕಾರದ ಯೋಜನೆಗಳು ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಸಿಆರ್‍ಪಿ ವೇಣುಗೋಪಾಲ್ ಮಾತನಾಡಿ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಲು, ಶಾಲೆಗಳಿಗೆ ಸಂಬಂದಿದಂತೆ ಬೇಕಾದ ಮೂಲಭೂತ ಸೌಲಭ್ಯಗಳ ಚರ್ಚಿಸಿದರು. ಉಪಾಧ್ಯಕ್ಷೆ ಬಿ.ಆರ್.ವಿಜಯಲಕ್ಷ್ಮಿ, ಸದಸ್ಯರಾದ ಜಿ.ಎ.ರಂಗಪ್ಪ, ಶ್ರೀರಾಮಿರೆಡ್ಡಿ,ಯಲ್ಲಮ್ಮ,ವೆಂಕಟಲಕ್ಷ್ಮಮ್ಮ,ಲಕ್ಷ್ಮಿದೇವಿ, ನಾಗರಾಜ,ಆರ್.ಶ್ರೀನಿವಾಸ,ಕೆ.ಆರ್.ವಿಶ್ವನಾಥರೆಡ್ಡಿ,ಆದಿಲಕ್ಷ್ಮಮ್ಮ,ಅನಿತಮ್ಮ, ಮುಖಂಡರಾದ ವೈ.ಬಿ.ದೊರೆಸ್ವಾಮಿರೆಡ್ಡಿ,ಪಿ.ವಿ.ನಾಗರಾಜ್,ಗಂದೋಡಿ ಕೃಷ್ಣಮೂರ್ತಿ , ಪಿಡಿಒ ಎಲ್.ಕೆ.ರಮೇಶ್‍ಕುಮಾರ್ ,ಕಾರ್ಯದರ್ಶಿ ಎಂ.ಸಿ.ವಿಶ್ವನಾಥರೆಡ್ಡಿ ಇತರರಿದ್ದರು.