ಕುಂದಾಪುರ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬೆಳಿಗ್ಗಿನ ವಿಭಾಗದಲ್ಲಿ ಕಾಲೇಜಿನ ಎನ್ ಎಸ್ ಎಸ್ ಘಟಕ ಹಾಗೂ ವೈ ಆರ್ ಸಿ ಘಟಕದ ವತಿಯಿಂದ ಯೋಗ ತರಭೇತಿ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಯೋಗ ಶಿಕ್ಷಕರಾದ ಶ್ರೀ ಮಂಜುನಾಥ ಬಿಜೂರು ಆಗಮಿಸಿದ್ದರು. ಯೋಗ ಎಂದರೆ ಕೇವಲ ಆಸನಗಳಲ್ಲ, ಅದಕ್ಕೂ ಹೊರತಾಗಿ ನಾವು ಪಾಲಿಸಬೇಕಾದ ನಿಯಮಗಳನ್ನು ವಿವರವಾಗಿ ತಿಳಿಸಿಕೊಟ್ಟಿದ್ದಲ್ಲದೆ ದಿನನಿತ್ಯ ಮಾಡಬಹುದಾದ ಕೆಲವು ಸರಳ ಆಸನಗಳನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು. ಮಧ್ಯಾಹ್ನದ ವಿಭಾಗದಲ್ಲಿ ಮಂಗಳೂರಿನ ಇಶಾ ಹಟ ಯೋಗ ಶಿಕ್ಷಕರಾದ ಶ್ರೀ ಪ್ರವೀಣ ಕುಮಾರ್ ಇವರು ಯೋಗದ ಬಗ್ಗೆ ತಮ್ಮ ಅನುಭವದ ಜೊತೆಗೆ ಹೇಗೆ ಒಬ್ಬ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಅಭಿವೃದ್ಧಿಗೆ ಕಾರಣ ಎಂದು ವಿವರಿಸಿದ್ದಲ್ಲದೆ ಓಂಕಾರದ ಪ್ರಾತ್ಯಕ್ಷಿಕೆ ವಿಧ್ಯಾರ್ಥಿಗಳಿಗೆ ನೀಡಿದರು. ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದರು. ಕಾರ್ಯಕ್ರಮ ಸಂಯೋಜಕರಾದ ಪ್ರೊಫೆಸರ್ ಬಾಲನಾಗೇಶ್ವರ್ ಸ್ವಾಗತಿಸಿ, ಡಾ|ರಾಮಕೃಷ್ಣ ಹೆಗ್ಡೆ ವಂದಿಸಿದರು. ಪ್ರೊಫೆಸರ್ ಸೂಕ್ಷ್ಮ ಅಡಿಗ ಕಾರ್ಯಕ್ರಮ ನಿರ್ವಹಿಸಿದರು.
International Yoga Day Celebration at Moodlekatte Engineering College
Kundapura: Special programs were organized at MIT Kundapura as part of the International Day of Yoga. In the morning session, yoga training was organised by NSS unit and YRC unit ofMITK. Sri Manjunath Bijuru, a renowned Yoga teacher, was present as a resource person. He explained in detail the rules that we should follow while doing Yogasanas and also taught the students some simple asanas that can be done on a daily basis.In the afternoon session, Mr. Praveen Kumar, Isha Hata Yoga teacher from Mangalore explained his experience about yoga and how it is the cause of mental and physical development of a person and also gave a demonstration of Omkara to the students. The staff and students of the college benefited from it. Program Coordinator Professor Balanageshwar welcomed and Director Brand Building IMJ Institutions Dr.Ramakrishna Hegde proposed the vote of thanks. Professor Sookshma Adiga conducted the programme.