ಕುಂದಾಪುರ,ಮಾ.11:ಕುಂದಾಪುರ ರೋಜರಿ ಚರ್ಚಿನ ಕೆಥೊಲಿಕ್ ಸ್ತ್ರೀ ಸಂಘಟನೇಯ ಮುಂದಾಳತ್ವದಲ್ಲಿ ಸ್ವಸಹಾಯ ಗುಂಪುಗಳ ಜೊತೆ ಭಾನುವಾರ ಮಾ.10 ರಂದು ಚರ್ಚ್ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ದಿನಾಚರಣೆಯ ಪ್ರಯುಕ್ತ ಮೊದಲಿಗೆ ಹೋಲಿ ರೋಜರಿ ಚರ್ಚಿನಲ್ಲಿ ಪ್ರಧಾನ ಧರ್ಮಗುರುಗಳಾದ ಸ್ತ್ರೀ ಸಂಘನೇಯ ಅಧ್ಯಾತ್ಮಿಕ ನಿರ್ದೇಶಕ ಅ| ವಂ| ಸ್ಟ್ಯಾನಿ ತಾವ್ರೊ ಪವಿತ್ರ ಬಲಿದಾನವನ್ನು ಅರ್ಪಿಸಿ ‘ಸ್ತ್ರೀ ಮನೆಯ, ಕುಟುಂಬದ, ಸಮಾಜದ ಅಲಂಕಾರ, ದೇವರು ಸ್ತ್ರೀಯನ್ನು ಪುರುಷನಿಗೆ ಸರಿಸಮಾನವಾಗಿ ಹುಟ್ಟಿಸಿದ್ದಾನೆ’ ಎಂದು ಹೇಳುತ್ತಾ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ‘ನಾರಿ ಮುನಿದರೆ ಮಾರಿ’ ಗಾದೆ ಸುಮ್ಮನೆ ಮಾಡಿದ್ದಲ್ಲ, ಅವಳಿಗೆ ಅಷ್ಟು ಶಕ್ತಿ ಉಂಟು, ತೊಟ್ಟಿಲ ತೂಗುವ ಕೈ, ದೇಶ ಆಳಲು ಸೈ ಎಂಬ ಗಾದೆಯು ಉಂಟು, ಹೌದು ಅವಳಿಗೆ ಅಷ್ಟು ಸಾಮಾಥ್ರ್ಯ ಇದೆ. ನಮ್ಮ ದೇಶದಲ್ಲಿ ಇಂದಿರಾ ಗಾಂಧಿಯವರಿಗೆ ಮಾತ್ರ ಉತ್ತಮ ಮಾತ್ರ ಅವಕಾಶ ಸಿಕ್ಕಿತು, ನಮ್ಮ ದೇಶದಲ್ಲಿ ಅವಕಾಶ ಸಿಕ್ಕಿದಲ್ಲಿ ಹಲವಾರು ಮಹಿಳೆಯರು ದೇಶ ನಡೆಸುವಂತಹ ಸಾಮಥ್ರ್ಯ ಹೊಂದಿದ್ದಾರೆ ಎಂದು ಹೇಳುತ್ತಾ ನೀವು ‘ಹಮ್ ಕಿಸಿಸೇ ಕಮ್ ನ್ಹಹಿ’ ತಿಳಿದಿಕೊಂಡು ಧೈರ್ಯದಿಂದ ಮುಂದುವರಿಯಬೇಕು, ನಮ್ಮ ಚರ್ಚಿನಲ್ಲಿ ಎಲ್ಲಾ ಸೇವೆಗಳಲ್ಲಿ ಮಹಿಳೇಯರೆ ಮುಂದು, ನೀವುಗಳು ನಮ್ಮ ಚರ್ಚಿನ ಚೆಂದ, ಆದರೆ ನಿಮ್ಮ ದೇಹ ಸೌಂದರ್ಯಕಿಂತ, ನಿಮ್ಮ ಚೆಂದ ನಿಮ್ಮ ಹ್ರದಯದಗಳಲ್ಲಿರಬೆಕು. ನೀವು ಅಭಿವ್ರದ್ದಿ ಹೊಂದುವ ಜೊತೆಗೆ, ಓರ್ವ ತಾಯಿಯಂತೆ ತ್ಯಾಗ, ಮಮತೆ, ಪ್ರೀತಿ ಸೇವೆಯ ಜೀವನ ನಡೆಸಿ” ಎಂದು ಶುಭಾಶಯ ಕೋರಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ ‘ಸ್ತ್ರೀ ಇಂದು ಶಿಕ್ಷಣ, ವೈಜ್ಞಾನಿಕ, ವೈದ್ಯಕೀಯ, ಸಾಮಾಜಿಕ, ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿದಿದ್ದಾಳೆ ಇದು ಸಂತೋಷದ ವಿಚಾರ, ಆದರೆ ಕೆಲವು ಕಡೆ ಮಹಿಳೆ ಹಿಂದೆ ಉಳಿದಿದ್ದಾಳೆ, ಅವರನ್ನು ನಾವು ಮುಂದೆ ಬರಲು ಉತ್ತೇಜಿಸಬೇಕು, ಪ್ರತಿ ನಾರಿಗೆ ಅವಳದೇ ಆದ ಗೌರವ ಇದೆ ಅದು ದೊರೆಯಬೇಕು’ ಎಂದು ಹೇಳಿದರು
ಈ ಸಂದರ್ಭದಲ್ಲಿ ಅಸಕ್ತರಾದ ಒಂದು ಕುಟುಂಬದ ಮನೆ ನಿರ್ಮಾಣ ಕಾರ್ಯಕ್ಕಾಗಿ 39200 ರೂಪಾಯಿಗಳನ್ನು ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆ ಧನ ಸಹಾಯ ನೀಡಿತು. ಇದೇ ಸಂದರ್ಭದಲ್ಲಿ ಧರ್ಮಗುರುಗಳ ಮನೆಯಲ್ಲಿ ಸೇವೆ ನೀಡುವ ಲಲಿತಾ ಇವರನ್ನು ಪುಷ್ಪ ನೀಡಿ ಗೌರವಿಸಲಾಯಿತು.
ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ತಮ್ಮ ಸಂದೇಶವನ್ನು ನೀಡಿ, ಭೋಜನದ ಮೇಲೆ ಆಶಿರ್ವದಿಸಿದರು. ವೇದಿಕೆಯಲ್ಲಿ ಸಂಘಟನೇಯ ಸಚೇತಕಿ ಸಿಸ್ಟರ್ ಆಶಾ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಕುಂದಾಪುರ ವಲಯ ಕಥೊಲಿಕ್ ಸಂಘಟನೇಯ ಕಾರ್ಯದರ್ಶಿ ಎವ್ಲಿನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಕಿರು ಆಡೋಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಾಂಸಕ್ರತಿಕ ಕಾರ್ಯಕ್ರಮದಲ್ಲಿ ಸ್ತ್ರೀಯರಿಂದ ನ್ರತ್ಯಗಳು, ಹಾಡುಗಳು ಪ್ರದರ್ಶನಗೊಂಡವು, ಸ್ತ್ರೀ ಸಂಘಟನೇಯ ಅಧ್ಯಕ್ಷೆ ಜೂಲಿಯೆಟ್ ಪಾಯ್ಸ್ ಸ್ವಾಗತಿಸಿದರು, ಮಾಜಿ ಅಧ್ಯಕ್ಷೆ ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿದರು, ಸಹಕಾರ್ಯದರ್ಶಿ ವಿಕ್ಟೋರಿಯಾ ಡಿಸೋಜಾ ವಂದಿಸಿದರು. ಮಹಿಳೆಯರೆ ಸಿದ್ದಪಡಿಸಿದ ಭೋಜನದ ಜೊತೆ ಕಾರ್ಯಕ್ರಮ ಮುಕ್ತಾಯಗೊಂಡಿತು.