ಕುಂದಾಪುರ ರೋಜರಿ ಚರ್ಚ್ ಸ್ತ್ರೀ ಸಂಘಟನೇಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಕುಂದಾಪುರ,ಮಾ.13:ಕುಂದಾಪುರ ರೋಜರಿ ಚರ್ಚಿನ ಕೆಥೊಲಿಕ್ ಸ್ತ್ರೀ ಸಂಘಟನೇಯ ಮುಂದಾಳತ್ವದಲ್ಲಿ ಸ್ವಸಹಾಯ ಗುಂಪುಗಳ ಜೊತೆ ಭಾನುವಾರ ಮಾ.12 ರಂದು ಚರ್ಚ್ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ದಿನಾಚರಣೆಯ ಪ್ರಯುಕ್ತ ಮೊದಲಿಗೆ ಹೋಲಿ ರೋಜರಿ ಚರ್ಚಿನಲ್ಲಿ ಪ್ರಧಾನ ಧರ್ಮಗುರುಗಳಾದ ಸ್ತ್ರೀ ಸಂಘನೇಯ ಅಧ್ಯಾತ್ಮಿಕ ನಿರ್ದೇಶಕ ಅ| ವಂ| ಸ್ಟ್ಯಾನಿ ತಾವ್ರೊ ನೇತ್ರತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು.
ನಂತರ ನಡೆದ ಕಾರ್ಯಕ್ರಮದಲ್ಲಿ ಫಾ|ಸ್ಟ್ಯಾನಿ ತಾವ್ರೊ “ಮಹಿಳೆ ಕುಟುಂಬದ ಎಲ್ಲಾ ಸದಸ್ಯರ ಕಾಳಜಿ ವಹಿಸಿ, ತಮ್ಮ ಗ್ರಹ ಕೆಲಸವನ್ನು ನಿಶ್ಟೆಯಿಂದ ಮಾಡುತ್ತಾಳೆ. ಅವಳೆನಾದರೂ ಅನಾರೋಗ್ಯಭರಿತಳಾದರೆ, ಇಡೀ ಕುಟುಂಬ ಸಂಕಷ್ಟಕ್ಕೆ ಒಳಗಾಗುತ್ತೆ. ಮಹಿಳೆ ಸಂತೋಷದಿಂದ ಇದ್ದರೆ ಕುಟುಂಬ ಸಂತೋಷದಲ್ಲಿರುತ್ತೆ. ಸಮಾಜದಲ್ಲಿ ಮಹಿಳೆಯ ಪಾತ್ರ ಮಹತ್ತರವಾದುದು, ಆದರಿಂದ ಮಹಿಳೆಯರಿಗೆ ಗೌರವ ನೀಡಬೇಕು. ನಮ್ಮ ಚರ್ಚಿನ ಸ್ತ್ರೀ ಸಂಘನೇಯವರು ಉತ್ತಮವಾದ ಕೆಲಸಕಾರ್ಯಗಳನ್ನು ಮಾಡುತ್ತಾರೆ” ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮನೀಶ್ ಆಸ್ಪತ್ರೆಯ ಆಡಳಿತಾಧಿಕಾರಿ ಖ್ಯಾತ ಪ್ರಸೂತಿ ತಜ್ಞೆ ಡಾ|ಪ್ರಮೀಳಾ ನಾಯಕ್ ಮಹಿಳೆಯರ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಉತ್ತಮವಾದ ಮಾಹಿತಿಯನ್ನು ನೀಡಿದರು. ಸ್ತ್ರೀ ಸಂಘಟನೇಯ ಸಚೇತಕಿ ಸಿಸ್ಟರ್ ಆಶಾ “ಸ್ತ್ರೀ ದೈವಿಕ ಶಕ್ತಿ, ಅವಳು ಕೆಲವು ವಿಷಯಗಳಲ್ಲಿ ಬಹಳ ಶಕ್ತಿವಂತಳು, ಮಹಿಳೆಯರು ಎಲ್ಲ ರಂಗಗಳಲ್ಲಿ ಯಶ್ವಸಿಯಾಗಿದ್ದಾರೆ. ಮಹಿಳೆ ಹಲವಾರು ರೀತಿಯ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೂ, ಬೆಳಿಗ್ಗ್ಗೆ ಬೇಗನೆ ಎಳುವುದು ಉತ್ತಮ ಆರೋಗ್ಯಕ್ಕೆ ಒಳಿತು ಹಾಗೇ ನಮ್ಮ ಮನೆ ಕೆಲಸವನ್ನು ಪ್ರೀತಿಯಿಂದ ಮಾಡಿದರೆ ಮಹಿಳೆ ಯಶಸ್ವಿ ಮಹಿಳೆಯಾಗುತ್ತಾಳೆ” ಎಂದು ತಿಳಿಸಿದರು. ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಮಾತನಾಡಿ “ನಾವು ಮಹಿಳೆಯರು ಇತರ ಮಹಿಳೆಯವರಿಗೆ ಗೌರವವನ್ನು ನೀಡಬೇಕು, ಇತರ ಮಹಿಳೆಗೆ ಅವಳಿಂದ ಎನೂ ಆಗುವುದಿಲ್ಲ ಎಂದು ಹಿಂದಕ್ಕೆ ಬಿಟ್ಟು ಬಿಡಬಾರದು, ಅಸಬಲೆಯರನ್ನು ಸಬಲೆ ಮಾಡುವ ಕೆಲಸವಾಗಬೇಕೆಂದು” ಹೇಳಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಭೋಜನದ ಮೇಲೆ ಆಶಿರ್ವದಿಸಿದರು. ವೇದಿಕೆಯಲ್ಲಿ ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಕಾರ್ಯದರ್ಶಿ ಜೂಲಿಯೆಟ್ ಪಾಯ್ಸ್, ಖಜಾಂಚಿ ವಿಕ್ಟೋರಿಯಾ ಡಿಸೋಜಾ ಉಪಸ್ಥಿರಿದ್ದರು
ಕಿರು ಆಡೋಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಾಂಸಕ್ರತಿಕ ಕಾರ್ಯಕ್ರಮದಲ್ಲಿ ಸ್ತ್ರೀಯರಿಂದ ನ್ರತ್ಯಗಳು ಪ್ರದರ್ಶನಗೊಂಡವು, ಸ್ತ್ರೀ ಸಂಘಟನೇಯ ಅಧ್ಯಕ್ಷೆ ವಿನಯಾ ಡಿಕೋಸ್ತಾ ಸ್ವಾಗತಿಸಿದರು, ಶಾಂತಿ ಬರೆಟ್ಟೊ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷೆ ಜೂಲಿಯಾನ ಮಿನೆಜೆಸ್ ವಂದಿಸಿದರು.