ಗಂಗೊಳ್ಳಿ: ಕಥೋಲಿಕ್ ಸ್ತ್ರೀ ಸಂಘಟನೆ ಅಮೃತ ಮಹಾಸಂಘ ಗಂಗೊಳ್ಳಿ ಘಟಕದ ಮುಂದಾಳತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು 10.03.2024 ರಂದು ಸಂಭ್ರಮದಿಂದ ಆಚರಿಸಲಾಯಿತು. ಅಧ್ಯಕ್ಷೆ ಶ್ರೀಮತಿ ಜೆಸಿಂತಾ ಮಿರಾಂದರವರು ಸರ್ವರಿಗೂ ಸ್ವಾಗತವನ್ನು ಕೋರಿದರು. ಧರ್ಮಗುರುಗಳು ವಂದನಿಯ ಫಾದರ್ ರೋಷನ್ ಡಿಸೋಜಾರವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಅಧ್ಯಕ್ಷೀಯ ನುಡಿಗಳನ್ನಾಡಿ ಶುಭ ಕೋರಿದರು.
ಮುಖ್ಯ ಅತಿಥಿಯಾಗಿ ಶ್ರೀಮತಿ ಮಂಜುಳಾ ದೇವಾಡಿಗ, ಸಾಹಿರಾಬಾನು, ಕುಂದಾಪುರ ಬೈಂದೂರು ವಲಯ ಭಾವನ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪ್ರೀತಿ ಫೆರ್ನಾಂಡಿಸ್ ಉಪಸ್ಥಿತರಿದ್ದು ಮಹಿಳೆಯರನ್ನು ಅಭಿನಂದಿಸಿ ಶುಭನುಡಿಗಳನ್ನಾಡಿದರು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ, ಅತ್ಯುತ್ತಮ ಸ್ವಸಹಾಯ ಗುಂಪಿಗೆ ಬಹುಮಾನವನ್ನು ನೀಡಲಾಯಿತು. ಸ್ವ-ಉದ್ಯಮ ಮಾಡುತ್ತಿರುವ 5 ಜನ ಮಹಿಳೆಯರಿಗೆ ಆಧ್ಯಾತ್ಮಿಕ ನಿರ್ದೇಶಕರಾದ ಫಾದರ್ ರೋಷನ್ ಡಿಸೋಜರವರು ಸನ್ಮಾನಿಸಿದರು. ಈ ಕಾರ್ಯಕ್ರಮಕ್ಕೆ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀಯುತ ಆಲ್ವಿನ್ ಕ್ರಾಸ್ತಾ, ಕಾರ್ಯದರ್ಶಿಯವರಾದ ಶ್ರೀಮತಿ ಗ್ಲೋರಿಯ ಫೆರ್ನಾಂಡೀಸ್, ಘಟಕದ ಸಚೇತಕಿ ಸಿಸ್ಟರ್ ಕರೋನಾ, ವಲಯದ ಪ್ರೇರಕಿ ಸಿಂತಿಯಾ ರೊಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಆಶಾ ಡಿಕೋಸ್ಟ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರಿಮತಿ ರೆನಿಟಾ ಬಾರ್ನೆಸ್ ವಾರ್ಷಿಕ ವರದಿಯನ್ನು ವಾಚಿಸಿದರು. ಶ್ರೀಮತಿ ವಿಲ್ಮಾ ಒಲಿವೇರಾ ಧನ್ಯವಾದಗಳು ತಿಳಿಸಿದರು.