ಕುಂದಾಪುರ ರೋಜರಿ ಚರ್ಚ್ ಸ್ತ್ರೀ ಸಂಘಟನೇಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

jANANUDI.COM NETWORK


ಕುಂದಾಪುರ,ಮಾ.13: ಕುಂದಾಪುರ ರೋಜರಿ ಚರ್ಚಿನ ಕೆಥೊಲಿಕ್ ಸ್ತ್ರೀ ಸಂಘಟನೇಯ ಮುಂದಾಳತ್ವದಲ್ಲಿ ಸ್ವಸಹಾಯ ಗುಂಪುಗಳ ಜೊತೆ ಭಾನುವಾರ 13 ರಂದು ಚರ್ಚ್ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಮಹಿಳಾ ದಿನಾಚರಣೆಯ ಪ್ರಯುಕ್ತ ಮೊದಲಿಗೆ ಹೋಲಿ ರೋಜರಿ ಚರ್ಚಿನಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜರ ನೇತ್ರತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಫಾ| ವಿಜಯ್ ಮಾತನಾಡಿ “ಸಮಾಜದಲ್ಲಿ ಮಹಿಳೆ ಅದ್ವೀತಿಯ ಪಾತ್ರವನ್ನು ವಹಿಸಿದ್ದಾಳೆ, ತಾಯಿಯಾಗಿ,ಮನೆಕೆಲಸ,ಉದ್ಯೋಗ,ಹೋರಾಟ, ಹೀಗೆ ಎಲ್ಲ ರಂಗಗಳಲ್ಲಿ ಮಹಿಳೆ ತನ್ನ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತಾಳೆ, ಹೇಗೆ ಎಲ್ಲ ರಂಗಗಳಲ್ಲಿ ಮಹಿಳೆಯರು ಮುಂದು’ ಎಂದು ಸಂದೇಶ ನೀಡಿದರು. ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸಂಗೀತ “ಮಹಿಳೆಯ ಸಾಂಘೀಕ ಹೋರಾಟದ ಬಗ್ಗೆ, ಮಹಿಳಾ ದಿನಾಚರಣೆಯ ಹೇಗೆ ಆರಂಭವಗುವುದರ ಬಗ್ಗೆ ತಿಳುವಳಿಕೆ ನೀಡಿ, ಮಹಿಳೆ, ಪ್ರಧಾನ ಮಂತ್ರಿ, ರಾಜ್ಯಪಾಲೆ ಮಂತ್ರಿಗಳು, ಪೈಲೆಟ್‍ಗಳು, ಗಗೋಲಯಾನಿಗಳು, ವಿಜ್ನಾನಿಗಳೂ ಕೂಡ ಆಗಿದ್ದಾರೆ ಹೀಗೆ ಮಹಿಳೆ ಯಾವುದರಲ್ಲಿಯೂ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿದ್ದಾಳೆ’ ಎಂದು ತಿಳಿಸಿದರು.
ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಚರ್ಚ್ ಉಪಾಧ್ಯಕ್ಷ ಲುವಿಸ್ ಫೆರ್ನಾಂಡಿಸ್ ಶುಭ ಕೋರಿದರು. ನ್ರತ್ಯ ಮತ್ತು ಖ್ಯಾತ ಲೇಖಕ ಬರ್ನಾಡ್ ಡಿಕೋಸ್ತಾ ರಚಿಸಿದ ಕೊವೀಡ್ ಕಾಯಿಲೆ ಸಂಬಂಧ ಬರೆದ ಕಿರು ನಾಟಕವನ್ನು ಚರ್ಚ್ ಸ್ತ್ರೀ ಸಂಘದವರು ಪ್ರದರ್ಶಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು, ಹಾಗೇ ಸ್ತ್ರೀಯರಿಂದ ನ್ರತ್ಯ ಕಿರು ಪ್ರಹಸನಗಳು ಪ್ರದರ್ಶಿಸಲಾಯಿತು. ವೇದಿಕೆಯಲ್ಲಿ ಸ್ತ್ರೀ ಸಂಘಟನೇಯ ಸಚೀತಕಿ ಭಗಿನಿ ಆಶಾ, ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, 20 ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು. ಸ್ತ್ರೀ ಸಂಘಟನೇಯ ಅಧ್ಯಕ್ಷೆ ವಿನಯಾ ಡಿಕೋಸ್ತಾ ಸ್ವಾಗತಿಸಿದರು, ಶಾಂತಿ ಬಾರೆಟ್ಟೊ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಜೂಲಿಯೆಟ್ ಪಾಯ್ಸ್ ವಂದಿಸಿದರು.