

ಕುಂದಾಪುರ,ಮಾ.10:ಕುಂದಾಪುರ ರೋಜರಿ ಚರ್ಚಿನ ಕೆಥೊಲಿಕ್ ಸ್ತ್ರೀ ಸಂಘಟನೆಯ ಮುಂದಾಳತ್ವದಲ್ಲಿ ಸ್ವಸಹಾಯ ಗುಂಪುಗಳ ಜೊತೆ ಭಾನುವಾರ ಮಾ.09 ರಂದು ಚರ್ಚ್ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ದಿನಾಚರಣೆಯ ಪ್ರಯುಕ್ತ ಮೊದಲಿಗೆ ಹೋಲಿ ರೋಜರಿ ಚರ್ಚಿನಲ್ಲಿ ಪ್ರಧಾನ ಧರ್ಮಗುರುಗಳಾದ ಸ್ತ್ರೀ ಸಂಘನೇಯ ಅಧ್ಯಾತ್ಮಿಕ ನಿರ್ದೇಶಕ ಅ| ವಂ|ಪೌಲ್ ರೇಗೊ ಪವಿತ್ರ ಬಲಿದಾನವನ್ನು ಅರ್ಪಿಸಿ ‘ಸ್ತ್ರೀ ಮನೆಯ, ಕುಟುಂಬದ, ಸಮಾಜದ ಅಲಂಕಾರ, ಮಹಿಳೆಗೆ ಶಿಕ್ಷಣ ಪಡೆದಲ್ಲಿ ದೇಶ ಸಬಲೀಕರಣ ಗೊಳ್ಳುತ್ತದೆ ಎಂಬ ಮಾಜಿ ಪ್ರಧಾನಿ ನೆಹರುರವರ ಮಾತುಗಳನ್ನು ನೆನೆಸಿಕೊಂಡರು. ನಂತರ ನೆಡದ ಸಭಾ ಕಾರ್ಯಕ್ರಮದಲ್ಲಿ ‘ಮಹಿಳೆಯು ತಾಯಿಯಾಗಿ, ಪತ್ನಿಯಾಗಿ, ಮನೆಯಲ್ಲಿ ಪ್ರತಿನಿತ್ಯ ದಿನವೀಡಿ ದುಡಿಯುತ್ತಾಳೆ, ಅವಳಲ್ಲಿ ಮಮತೆ, ಪ್ರೀತಿ ತುಂಬಿರುತ್ತದೆ, ಮಹಿಳೆ ಯಾವುದರಲ್ಲಿಯೂ ಕಡಿಮೆ ಇಲ್ಲ, ಕೆಲೆವಡೆ ಮಹಿಳೆಯರಿಗೆ ಏನೂ ಗೌರವ ಇಲ್ಲ, ಹಾಗಗಾಬಾರದು, ನಮ್ಮ ಸಮುದಾಯದಲ್ಲಿ, ಮತ್ತು ನಮ್ಮ ಇಗರ್ಜಿಯಲ್ಲಿ ಮಹಿಳೆಯರೆ ಮುಂದು ಮತ್ತು ಅವರ ಸೇವೆ ಬಹು ಅಮೂಲ್ಯ, ಅವರು ನಟನೆ ಕಲೆಯಲ್ಲಿಯೂ ಹಿಂದೆ ಇಲ್ಲ” ಎಂದು ಮಹಿಳೆಯರಿಗೆ ಶುಭ ಕೋರಿ ಶ್ಲಾಘಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಂತ ಮೇರಿ ಪಿ.ಯು.ಕಾಲೇಜಿನ ಪ್ರಾಧ್ಯಪಕಿ ಶರ್ಮಿಳಾ ಮಿನೇಜೆಸ್ ‘ಇಂದು ಮಹಿಳೆ ಯಾವುದರಲ್ಲಿಯೂ ಹಿಂದೆ ಇಲ್ಲಾ, ಎಲ್ಲಾ ಕ್ಷೇತ್ರಗಳಲ್ಲಿ ಅವರು ತಮ್ಮ ಪ್ರತಿಭೆಯನ್ನು ತೋರಿಸುತ್ತಾ ಇದ್ದಾರೆ, ಸ್ತ್ರೀ ಸಬಲೀಕರಣಗೊಳ್ಳಬೇಕು, ಸ್ತ್ರೀ ಸಬಲೀಕರಣಗೊಂಡರೆ, ಸಮಾಜ ಸಬಲೀಕರಣಗೊಳ್ಳುತ್ತದೆ. ಸ್ತ್ರೀ ಸಬಲೀಕರಣ ಅಂದರೆ ಪುರುಷರಿಗೆ ವಿರುದ್ದವಾಗಿ ಹೋಗುವುದಲ್ಲ, ಹೆಂಗಸರು, ಆರ್ಥಿಕತೆಯಲ್ಲಿ ಸಫಲತೆಯನ್ನು ಪಡೆಯಬೇಕು, ಪುರುಷ ಮತ್ತು ಮಹಿಳೆ ಒಬ್ಬರನೊಬ್ಬರಿಗೆ ಗೌರವ ಕೊಟ್ಟು ಸಂಸಾರ ಮುನ್ನೇಡೆಸಬೇಕು’ ಎಂದು ಸಬಲೀಕರಣದ ಬಗ್ಗೆ ಸಂದೇಶ ನೀಡಿದರು.
ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ, ಸಂಘಟನೇಯ ಸಚೇತಕಿ ಸಿಸ್ಟರ್ ಫ್ಲೆವಿ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಕುಂದಾಪುರ ವಲಯ ಕಥೊಲಿಕ್ ಸಂಘಟನೇಯ ಅಧ್ಯಕ್ಶೆ ಪ್ರೀತಿ ಫೆರ್ನಾಂಡಿಸ್ ಉಪಸ್ಥಿತರಿದ್ದು ಕಿರು ಆಡೋಟಗಳನ್ನು ನೆಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಾಂಸಕ್ರತಿಕ ಕಾರ್ಯಕ್ರಮದಲ್ಲಿ ಖ್ಯಾತ ನಾಟಕಗಾರರಾದ ಬರ್ನಾಡ್ ಡಿಕೋಸ್ತಾ, ಇವರಿಂದ ವಿಶೇಷವಾಗಿ ಸ್ತ್ರೀಯರಿಗಾಗಿಯೇ ರಚಿಸಲ್ಪಟ್ಟ ಎರಡು ಕಿರು ನಾಟಕಗಳನ್ನು ಸ್ತ್ರೀಯರು ಯಶಸ್ವಿಯಾಗಿ ಪ್ರದರ್ಶಿಸಿದರು ಜೊತೆಗೆ ನ್ರತ್ಯಗಳು, ಹಾಡುಗಳು ಪ್ರದರ್ಶನಗೊಂಡವು, ಸ್ತ್ರೀ ಸಂಘಟನೇಯ ಅಧ್ಯಕ್ಷೆ ಜೂಲಿಯೆಟ್ ಪಾಯ್ಸ್ ಸ್ವಾಗತಿಸಿದರು, ಸುನೀತಾ ಡಿಲೀಮಾ ಮತ್ತು ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿದರು, ಸಹಕಾರ್ಯದರ್ಶಿ ವಿಕ್ಟೋರಿಯಾ ಡಿಸೋಜಾ ಸಂಪನ್ಮೂಲ ವ್ಯಕ್ತಿಯ ಪರಿಚಯ ನೀಡಿದರು. ಕಾರ್ಯದರ್ಶಿ ಫೆಲ್ಸಿಯಾನ ಡಿಸೋಜಾ ವಂದಿಸಿದರು, ಎಲ್ಲಾ ಸ್ವಸಹಾಯ ಗುಂಪುಗಳ ಸದಸ್ಯರು ಭಾಗವಹಿಸಿದ್ದು ಕೊನೆಗೆ ಮಹಿಳೆಯರೆ ಸಿದ್ದಪಡಿಸಿದ ಭೋಜನದ ಜೊತೆ ಕಾರ್ಯಕ್ರಮ ಮುಕ್ತಾಯಗೊಂಡಿತು.

























































