

ತಲ್ಲೂರು ಸಂತ ಪ್ರಾನ್ಸಿಸ್ ಆಸಿಸಿ ದೇವಾಲಯದಲ್ಲಿ ದಿನಾಂಕ 9/3/2025 ರಂದು ಅಂತಾರಾಷ್ಟ್ರೀಯ ಮಹಿಳಾದಿನಾಚರಣೆಯನ್ನು ಬಹಳ ಆಚರಿಸಲಾಯಿತು. ಅಂದು ಬೆಳಗಿನ ದಿವ್ಯ ಬಲಿಪುೂಜೆಯನ್ನು, ಉಡುಪಿ ಡಯಾಸಿಸಿನ ದೈವೀ ಕರೆ ಆಯೋಗದ ನಿರ್ದೇಶಕರಾದ ಪಂದನೀಯ ಫಾ. ಅಶ್ವಿನ್ ಆರಾಸ್ಥ ಹಾಗೂ ಚರ್ಚಿನ ಧರ್ಮ ಗುರುಗಳಾದ ಪಂದನೀಯ ಫಾ. ಎಡ್ವಿನ್ ಡಿಸೋಜಾರವರು ಸೆರವೇರಿಸಿದರು. ಸ್ತೀ ಆಯೋಗದ ಸದಸ್ಯರು ಪ್ರಾರ್ಥನಾ ವಿಧಿಯಲ್ಲಿ ಸಹಕರಿಸಿದರು.
ಲಘು ಉಪಹಾರದ ನಂತರ ಚರ್ಚಿನ ಸಭಾಂಗಣದಲ್ಲಿ ನಡೆದ ಕಿರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ. ವಂದನೀಯ ಫಾ.ಅಶ್ವಿನ್ ಆರಾನ್ನ, ಸ್ತ್ರೀ ಆಯೋಗದ ದ್ಯೇಯವಾದ ಪ್ರೀತಿ, ದಯೆ, ಸೇವೆ ಹಾಗೂ ಏಕತೆ, ಮಹಿಳೆಯರಿಗೆ ತಮ್ಮ ಬಲವನ್ನು, ವೃದ್ಧಿಸಲು ಸಹಾಯಕವಾಗಿದೆ. ಮೊದಲು ಸಮಾಜದಲ್ಲಿ ಸ್ತ್ರೀಯರಿಗೆ ಯಾವ ಸ್ಥಾನಮಾನವಿರಲಿಲ್ಲ. ಆದರೆ ಈಗ ನಿಮಗೆ ಮುಂದೆ. ಬರಲು ಸಾಕಷ್ಟು ಅವಕಾಶಗಳಿವೆ. ಆದನ್ನು ಉಪಯೋಗಿಸಿಕೊಂಡು ಸಮಾಜದಲ್ಲಿ ನೀವು ಜೊತೆಯಾಗಿ, ಪತಿ ಪತ್ನಿ ಒಬ್ಬರಿಗೊಬ್ಬರು ಸಹಾಯಕರಾಗಿರಬೇಕು. ನಿಮ್ಮಲ್ಲಿ ಲಿಂಗ ತಾರತಮ್ಯವಿರದೆ ನಾವೆಲ್ಲರೂ ವಂದೇ ಎಂಬ ಮನೋಭಾವದೊಂದಿಗೆ ಜೀವಿಸಬೇಕು’ ಎಂದು ಸಂದೇಶ ನೀಡಿ ಮಹಿಳಾ ದಿನದ ಶುಭ ಕೋರಿದರು.
ಚರ್ಚಿಸ ಧರ್ಮಗುರುಗಳು ‘ಈ ಜುಬಿಲಿ ವರ್ಷದಲ್ಲಿ ಚರ್ಚಿನ ಸ್ತ್ರೀ ಆಯೋಗದಿಂದ ಮಾಡಬಹುದಾದ ಹಲವು ಕಾರ್ಯಕ್ರಮಗಳ ಪರಿಚಯ ನೀಡಿದರು. ಕುಂದಾಪುರ ವಲಯದ ಸ್ತ್ರೀ ಆಯೋಗದ ಸಚೇತಕಿ ಶ್ರೀಮತಿ ಸಿಂತಿಯಾ ರೋಡ್ರಿಗಸ್ ಹಾಗೂ ಶ್ರೀಮತಿ ಜೂಡಿತ್ ಮೆಂಡೋಸ್ಟ. ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸುಮಾರು 65ಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿದರು. ಹಾಜರಿದ್ದರವರಿಗಲ್ಲರಿಗೂ ಕಿರು ಕಾಣಿಕೆ ನೀಡಲಾಯಿತು. ಕಾರ್ಯಕ್ರಮದ ಮೊದಲು ಸಂವಿಧಾನದ ಪ್ರಸ್ತಾವನೆಯನ್ನು ಭೋಧಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲನಾ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು, 20 ಆಯೋಗದ ಸಂಚಾಲಕರು ಹಾಗೂ ಧರ್ಮಭಗಿನಿ ಸಿ. ಬಿನು ಹಾಜರಿದ್ದರು. ಸ್ತ್ರೀ ಯೋಗದ ಅಧ್ಯಕ್ಷರಾದ ಶ್ರೀಮತಿ ಶಾಂತಿ ಮೆಂಡೋನ್ಸಾ ಸ್ವಾಗತಿಸಿದರು, ಕಾರ್ಯದರ್ಶಿಗಳಾದ ಶ್ರೀಮತಿ ಸವಿತಾ ಮೆಂಡೋನ್ಪ ಧನ್ಯವಾದ ಸಮರ್ಪಿಸಿದರು. ಆಯೋಗದ ಸದಸ್ಯೆ ಶ್ರೀಮತಿ ಪ್ರೆಸಿಲ್ಲ ಮಿನೇಜೆಸ್ ಕಾರ್ಯಕ್ರಮ ನಿರೂಪಿಸಿದರು.































