ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಇದರ ಆಂಜೆಲೊರ್ ಘಟಕವು ಗಾರ್ಡಿಯನ್ ಏಂಜೆಲ್ ಧರ್ಮಕ್ಷೇತ್ರ, ನಾಗೋರಿ, ಮಂಗಳೂರು ಇದರ ಅಂತರ ಧರ್ಮೀಯ ಸೌಹಾರ್ದ ಆಯೋಗದ ಸಹಯೋಗದೊಂದಿಗೆ 10 ಡಿಸೆಂಬರ್ 2023ರಂದು ಕಪಿತಾನಿಯೋ ಶಾಲಾ ಕ್ರೀಡಾಂಗಣದಲ್ಲಿ ಅಂತರ-ಧರ್ಮೀಯ ಸೌಹಾರ್ದ ಕ್ರೀಡಾಕೂಟವನ್ನು ಏರ್ಪಡಿಸಿತ್ತು. ಸಿಟಿ ಮತ್ತು ಸಿಟಿ ಎಪಿಸ್ಕೊಪಲ್ ವಲಯದ ಪುರುಷರ 13 ವೊಲಿಬಾಲ್ ಮತ್ತು ಮಹಿಳೆಯರ 10 ಥ್ರೋಬಾಲ್ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಕ್ರೀಡಾಕೂಟದ ಅಂಗವಾಗಿ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಧರ್ಮಕ್ಷೇತ್ರದ ವ್ಯಕ್ತಿಗಳಾದ ಶ್ರೀ ಪ್ರದೀಪ್ ಡಿಸೋಜಾ, ಹಾಗೂ ಮಿಸ್ಟರ್ ವಲ್ರ್ಡ್ ಖ್ಯಾತಿಯ ಶ್ರೀ ರೇಮಂಡ್ ಡಿ’ಸೋಜಾರವರನ್ನು ಸನ್ಮಾನಿಸಲಾಯಿತು. ವೊಲಿಬಾಲ್ ಪಂದ್ಯದಲ್ಲಿ ಬೊಂದೆಲ್ ಎ ತಂಡ ಟ್ರೋಫಿ ಗೆದ್ದರೆ ಬೊಂದೆಲ್ ಬಿ ತಂಡ ಎರಡನೇ ಸ್ಥಾನವನ್ನು ಪಡೆಯಿತು. ಥ್ರೊಬಾಲ್ ಪಂದ್ಯದಲ್ಲಿ ಬೊಂದೆಲ್ ತಂಡ ಪ್ರಥಮ ಸ್ಥಾನವನ್ನು ಹಾಗೂ ವಾಮಂಜೂರು ತಂಡವು ದ್ವಿತೀಯ ಸ್ಥಾನವನ್ನು ಪಡೆಯಿತು.
Inter-religious tournament by Catholic Sabha, Angelore
The Angelore Unit of Catholic Sabha Mangalore Pradesh (R) in association with Inter-Religious Dialogue Commission of the parish organised inter-religious volleyball tournament for men and throw-ball for women on 10th December 2023. The tournament took place at Capitanio School ground. Thirteen volleyball teams and ten throw-ball teams from the City and City Episcopal deaneries of the Mangalore Diocese participated in the tournament. Two eminent sports personalities of the parish, Mr. Pradeep D’Souza, and Mr. Raymond D’Souza of the Mr. World fame were felicitated during the event. The trophy for volleyball was lifted by Bondel Team A while runners up were Bondel Team B. The throw-ball trophy was lifted by the Bondel team and Vamanjoor were the runners up.