ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ಯ 24ನೇ ವರ್ಷಾಚರಣೆ ಅಂಗವಾಗಿ ಆದಿತ್ಯವಾರ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ರಂಗಮಂದಿರದಲ್ಲಿ ವಾಯ್ಸ್ ಆಫ್ ಆರಾಧನಾ ತಂಡದ ಬಹುಮುಖ ಪ್ರತಿಭೆಗಳ ಅಂತರ್ ಜಿಲ್ಲಾ ಮಟ್ಟದ ಮಕ್ಕಳ ಸಾಂಸ್ಕøತಿಕ ಸಮ್ಮೇಳನ ಅತ್ಯಂತ ಅದ್ದೂರಿಯಾಗಿ ಜರಗಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅವರು ಸಮ್ಮೇಳನವನ್ನು ಉದ್ಘಾಟಿಸಿದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಸ್ಥಾಪಕಾಧ್ಯಕ್ಷರಾದ ಇನ್ನಾ ವಿಠಲ ಮೂಲ್ಯ ಅವರು ಸಮ್ಮೇಳನದ ಮೆರವಣಿಗೆಗೆ ಚಾಲನೆ ನೀಡಿದರು.
ಮಕ್ಕಳ ಸಾಂಸ್ಕøತಿಕ ಸಮ್ಮೇಳನದಲ್ಲಿ ಬೆಳ್ಮಣ್ಣು ಜೇಸಿಐ ಅಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ, ಕೆಮ್ಮಣ್ಣು ರೋಟರಿ ಸಮುದಾಯದಳ ಅಧ್ಯಕ್ಷರಾದ ಪ್ರದೀಪ್ ಸುವರ್ಣ, ಬೋಳ-ಕೆದಿಂಜೆ ಶ್ರೀ ಸತ್ಯಸಾರಾಮಣಿ ದೈವಸ್ಥಾನದ ಅಧ್ಯಕ್ಷರಾದ ಸೂರ್ಯಕಾಂತ್ ಶೆಟ್ಟಿ, ನಾನಿಲ್ತಾರ್ ಕುಲಾಲ್ ಸಂಘದ ಯುವ ವಿಭಾಗದಲ್ಲಿ ಪೂರ್ವಾಧ್ಯಕ್ಷರಾದ ದೀಪಕ್ ಕುಲಾಲ್, ಕೆದಿಂಜೆ ಶಾಲಾ ನಿವೃತ್ತ ಮುಖ್ಯ ಶಿಕ್ಷಕರಾದ ಎನ್. ತುಕಾರಾಮ ಶೆಟ್ಟಿ, ಬೆಳ್ಮಣ್ಣು ತಪಸ್ಯಾ ಪಿಂಟರ್ಸ್ ಮಾಲಕರಾದ ದಿನೇಶ್ ಕುಮಾರ್, ವಾಯ್ಸ್ ಆಫ್ ಆರಾಧನಾ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಸುರತ್ಕಲ್ ಅಗರಿ ಎಂಟರ್ಪ್ರೈಸ್ಸಸ್ನ ಮಾಲಕರಾದ ರಾಘವೇಂದ್ರ ರಾವ್, ಅಖಿಲ ಭಾರತ ತುಳು ಒಕ್ಕೂಟದ ಡಾ. ರಾಜೇಶ್ ಆಳ್ವ, ಉದ್ಯಮಿ ಹಾಗೂ ಕಲಾ ಪೋಷಕರಾದ ಸಾಣೂರು ಅರುಣ್ ಶೆಟ್ಟಿಗಾರ್, ಮಂದಾರ ಪತ್ರಿಕೆಯ ಪತ್ರಕರ್ತರಾದ ಡಾ. ರಾಜೇಶ್ ಭಟ್ ಅವರು ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
https://jananudi.com/jananudi-news-muddu-yesu-contest-2023-24/
ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೋಳ ದಿನೇಶ್ ಅಂಚನ್, ಬೆಳ್ಮಣ್ಣು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಂದೀಪ್ ಅಂಚನ್, ಬೆಳ್ಮಣ್ಣು ವೈಷ್ಣವಿ ವಿಘ್ನೇಶ್ ಭಟ್, ಬೆಳ್ಮಣ್ಣು ಎಸ್.ಎಸ್.ಗ್ಲಾಸ್ ಮಾಲಕರಾದ ಸತೀಶ್ ಕುಲಾಲ್, ಮಾವಿನಕಟ್ಟೆ ಕೆದಿಂಜೆ ಮಹಾಮ್ಮಾಯಿ ಕನ್ಟ್ರಕ್ಷನ್ ಮತ್ತು ಅರ್ಥ್ಮೂವರ್ಸ್ ಮಾಲಕರಾದ ಧೀರಜ್ ಎಸ್., ನಂದಳಿಕೆ ಗೋಳಿಕಟ್ಟೆ ಶ್ರೀ ದೇವಿದಯಾ ಜನರಲ್ ಸ್ಟೋರ್ಸ್ನ ಮಾಲಕರಾದ ಅರುಣ್ ಭಂಡಾರಿ, ಬೆಳ್ಮಣ್ಣು ಸೂರಜ್ ಹೊಟೇಲ್ ಮಾಲಕರಾದ ಸ್ವರೂಪ್ ಶೆಟ್ಟಿ, , ಬೆಳ್ಮಣ್ಣು ಶಿವಂ ಸೆಕ್ಯೂರಿಟಿ ಸಿಸ್ಟಂನ ಮಾಲಕರಾದ ಸಂತೋಷ್ ಶೆಟ್ಟಿ ಅವರು ವಿಶೇಷ ಆಹ್ವಾನಿತ ಅತಿಥಿಗಳಾಗಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಪೂರ್ವಾಧ್ಯಕ್ಷ ಸಮ್ಮೇಳನದ ನಿರ್ದೇಶಕರಾದ ಆನಂದ ಪೂಜಾರಿ, ನಿಕಟ ಪೂರ್ವಾಧ್ಯಕ್ಷ ಪ್ರಶಾಂತ್ ಪೂಜಾರಿ, ಕಾರ್ಯದರ್ಶಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ ಮೊದಲಾದವರಿದ್ದವರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷರಾದ ಬೋಳ ಉದಯ ಅಂಚನ್ ಸ್ವಾಗತಿಸಿದರು, ಕಾರ್ಯದರ್ಶಿ ವೀಣಾ ಪೂಜಾರಿ ವಂದಿಸಿದರು.
ಮಕ್ಕಳ ಸಾಂಸ್ಕøತಿಕ ಸಮ್ಮೇಳನದಲ್ಲಿ ಯೋಗ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬೆಳ್ಮಣ್ಣು ಉದ್ಭವ್ ದೇವಾಡಿಗವರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಕೊರಗಜ್ಜ ಹಾಡಿನ ಮೂಲಕ ಪ್ರಸಿದ್ದಿ ಪಡೆದ ಕಾರ್ಕಳ ತಾಲೂಕಿನ ಮಾಸ್ಟರ್ ಕಾರ್ತಿಕ್, ಸಪ್ತ ಸಾಗಾರದಾಚೆ ಎಲ್ಲೋ ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿರುವ ಬಾಲನಟ ಅಕ್ಷನ್ ಎಸ್. ಕರ್ಕೇರ, ಮಜಾಭಾರತ ಖ್ಯಾತಿಯ ಕಲಾವಿದೆ ಬಾಲನಟಿ ಆರಾಧನಾ ಭಟ್ ಸೇರಿದಂತೆ ಅಂತರ್ ಜಿಲ್ಲಾ ಮಟ್ಟದ ಬಹುಮುಖ ಪ್ರತಿಭೆಯ ನೂರಾರು ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಸಮ್ಮೇಳನದ ಸಾಂಸ್ಕøತಿಕ ವೇದಿಕೆಯಲ್ಲಿ ನೃತ್ಯ ಭಜನೆ, ಚೆಂಡೆವಾದನ, ನಾಸಿಕ್ ಬ್ಯಾಂಡ್, ಯಕ್ಷಗಾನ ನೃತ್ಯ, ಜಾನಪದ ನೃತ್ಯ, ಭರತನಾಟ್ಯ, ಸಂವಾದ, ಫಿಲ್ಮಿಡ್ಯಾನ್ಸ್, ತಾಸೆ ವಾದನ, ಯಕ್ಷಗಾನ, ಯೋಗ ನೃತ್ಯ, ಸಾಂಸ್ಕøತಿಕ ವೈವಿಧ್ಯ, ಸಂಗೀತ ರಸದೌತನ ನಡೆಯಿತು.