ಮೂಡ್ಲಕಟ್ಟೆ ಸೆರೆಬ್ರೊಕ್ಸ್ ಉದ್ಘಾಟನೆ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ವಿಭಾಗದ ವತಿಯಿಂದ ಆಯೋಜಿಸಲಾದ ಫೋರಂ ಸೆರೆಬ್ರೊಕ್ಸ್ (CEREBROX) ಉದ್ಘಾಟನೆ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ.ಶ್ರೀಕಾಂತ್ ಪ್ರಭು ( ಪ್ರೊ. ಎಂ.ಐ.ಟಿ, ಮಣಿಪಾಲ ) ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಎ ಐ ಎಂ ಎಲ್ ವಿಭಾಗದಲ್ಲಿ ಈಗ ಇರುವ ಅವಕಾಶಗಳ ಬಗ್ಗೆ ತಿಳಿಸಿದರು ಪ್ರಾಂಶುಪಾರಾದ ಡಾ. ಅಬ್ದುಲ್ ಕರೀಂ ರವರು ಮಾತನಾಡಿ ಪೋರಂ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿದರು, ಉಪ ಪ್ರಾಂಶುಪಾಲರಾದ ಪ್ರೊ.ಮೆಲ್ವಿನ್ ಡಿಸೋಜ, ವಿಭಾಗದ ಮುಖ್ಯಸ್ಥರಾದ ಡಾ. ಇಂದ್ರವಿಜಯ್ ಸಿಂಗ್ ಮತ್ತು ಐ ಎಂ ಜೆ ಸಂಸ್ಥೆಗಳ ಬ್ರ್ಯಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗ್ಡೆ ಉಪಸ್ಥಿತರಿದ್ದರು. ಸೆರೆಬ್ರೊಕ್ಸ್ ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರತ್ಯುಷ .ಪಿ .ಶೆಟ್ಟಿ(ಅಧ್ಯಕ್ಷರು),ಪ್ರಮಿತ್. ಆರ್( ಉಪಾಧ್ಯಕ್ಷ), ವೈಷ್ಣವಿ .ಎಸ್. ಶಾನಭಾಗ್,(ಕಾರ್ಯದರ್ಶಿ) ಮೇಘನ .ವಿ (ಖಜಾಂಚಿ), ಸ್ರಜನ್ .ಕೆ (ಈವೆಂಟ್ ಮುಖ್ಯಸ್ಥ), ಕೆ. ದಿಲೀಪ್ (ಮಾಧ್ಯಮ, ಮುಖ್ಯಸ್ಥ) ಪ್ರತಿಜ್ಞೆ ಸ್ವೀಕರಿಸಿದರು. ಸೆರೆಬ್ರೊಕ್ಸ್ ಮುಂದಿನ ದಿನಗಳಲ್ಲಿ ಹಲವಾರು ಉತ್ತಮ ಚಟುವಟಿಕೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.