ಶ್ರೀನಿವಾಸಪುರ 3 : ಪಟ್ಟನದ ಪುರಸಭೆ ಕಛೇರಿಗೆ ಭಾನುವಾರ ಪುರಸಭೆಯ ಕಡತಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಅಕ್ರಮಪಾಷ ಮಾತನಾಡಿದರು.
ಪುರಸಭಾ ವ್ಯಾಪ್ತಿಯ ಇಂದಿರಾ ನಗರ , ಮಾರತಿ ನಗರ, ಡಾ. ಜಾಕೀರ್ ಹುಸೇನ್ ಮೊಹಲ್ಲಾ , ವೆಂಕಟೇಶ್ವರ ಬಡವಾಣೆ ಸೇರಿದಂತೆ ವಿವಿಧ ಬಡವಾಣೆಗಳಿಗೆ ಬೇಟಿ ನೀಡಿ ಸ್ವಚ್ಚತೆ, ಬೀದಿ ದೀಪಗಳ ಸಿಸಿಎಂಎಸ್ ಲೈಟ್ಸ್ ನಿರ್ವಹಣೆ ಹಾಗೂ ಮುಖ್ಯ ಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ ನಿರ್ವಹಿಸಿರುವ ಸಿಸಿ ರಸ್ತೆ , ಮತ್ತು ಚರಂಡಿ ಕಾಮಗಾರಿ ಸೇರಿದಂತೆ ಡ್ರೈವೇಸ್ಟ್ ಮ್ಯಾನೇಜ್ಮೆಂಟ್ ನಿರ್ವಹಣೆ ಘಟಕಗಳನ್ನು ಖುದ್ಧಾಗಿ ಪರಿಶೀಲಿಸಿದರು.
ನಂತರ ಪುರಸಭಾ ಕಛೇರಿಗೆ ಬೇಟಿ ನೀಡಿ ಕೆಎಂಎಫ್ -24 ಡಾಟಾ ಎಂಟ್ರಿ ಮತ್ತು ವಿವಿಧ ಲಾಗಿನ್ಗಳಲ್ಲಿ ಸ್ವತಃ ತಾವೇ ಕರವಸೂಲಿಗಾರರ ಜೊತೆ ಆಸ್ತಿ ಕಣಜ ತಂತ್ರಾಂಶದಲ್ಲಿ ದತ್ತಾಂಶ ಪರಿಶೀಲನೆ ಮಾಡಿದ ಅವರು ಕೆಎಂಎಫ್ -24 ವಹಿಯಲ್ಲಿ ನಿರ್ವಹಿಸಿರುವ ವಿವರ ಸೇರಿದಂತೆ ಪುರಸಭಾ ವಾಣಿಜ್ಯ ಮಳಿಗೆಗೆಳ ಬಾಡಿಗೆ ವಸೂಲಾತಿ ಖಾಲಿ ಇರುವ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ, ಆಸ್ತಿ ತೆರಿಗೆ ಹಾಗೂ ಎಲ್ಲಾ ವಿವರಗಳ ಮಾಹಿತಿ ಪಡೆದುಕೊಂಡರು.
ಯೋಜನಾ ನಿರ್ದೇಶಕರ ಕಛೇರಿಯ ಕಾರ್ಯಪಾಲಕ ಆಭಿಯಂತರರಾದ ಶ್ರೀನಿವಾಸ್, ಸಹಾಯಕ ಕಾರ್ಯಪಾಲಕ ಅಭಿಯಂತರ ಚಲಪತಿ, ಪುರಸಭಾ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ , ಕಂದಾಯ ಅಧಿಕಾರಿ ವಿ.ನಾಗರಾಜ್, ಕಿರಿಯ ಅಭಯಂತರ ವಿ.ಶ್ರೀನಿವಾಸಪ್ಪ, ಹಿರಿಯ ಆರೋಗ್ಯ ಅಧಿಕಾರಿ ಕೆ.ಜಿ.ರಮೇಶ್, ನೋಡಲ್ ಅಧಿಕಾರಿ ಚೌಡೇಗೌಡ , ಸಿಬ್ಬಂದಿಗಳಾದ ಸಂತೋಷ್, ಸುರೇಶ್, ಶ್ರೀನಾಥ್ ಇದ್ದರು.