ರಾಜ್ಯದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಜೆಡಿಎಸ್ ಪಕ್ಷದಿಂದ ವಿನೂತನ ಅಭಿಯಾನ

ವರದಿ: ಶಬ್ಬೀರ್ ಅಹ್ಮದ್,ಶ್ರೀವಾಸಪುರ

ರಾಜ್ಯದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಜೆಡಿಎಸ್ ಪಕ್ಷದಿಂದ ವಿನೂತನ ಅಭಿಯಾನ ಕುಡಿಯುವ ನೀರಿಗಾಗಿ ಜಲಶ್ಯಾಮಲ ರೈತರಿಗಾಗಿ ಸಸ್ಯಶ್ಯಾಮಲ ಯೋಜನೆ ಜ .೨೬ ರಿಂದ ರಾಜ್ಯದ ಪ್ರತಿಯೊಂದು ತಾಲೂಕಿಗೆ ಜನತಾ ಜಲಧಾರೆ ರಥ ಸಂಚಾರ : ಎಂಎಲ್‌ಸಿ ಇಂಚರ ಗೋವಿಂದರಾಜು

ಕೋಲಾರ : ರಾಜ್ಯದ ಪ್ರತಿ ಜಿಲ್ಲೆಯಲ್ಲೂ ನೀರಿನ ಸಮಸ್ಯೆ ಬಗೆಹರಿಸಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲಿ ಹರಿಯುವ ನದಿಗಳಲ್ಲಿ ಲಭ್ಯವಿರುವ ನೀರನ್ನು ಬಳಕೆ ಮಾಡಿಕೊಳ್ಳಲು ಜನತಾ ಜಲ ಧಾರೆ ಎಂಬ ವಿನೂತನ ಅಭಿಯಾನವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ತಿಳಿಸಿದರು . ನಗರದಲ್ಲಿ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ , ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು . ಇಬ್ಬರಿಗೆ ಸಿಕ್ಕಿರುವ ಅಲ್ಪ ಅವಧಿಯಲ್ಲಿ ಮುಂದೆ ಯಾವುದೇ ಸರ್ಕಾರಗಳು ಮಾಡದ ರೀತಿಯಲ್ಲಿ ಜನಪರ ಕೆಲಸಗಳನ್ನ ಮಾಡಿ ತೋರಿಸಿದ್ದಾರೆ ಎಂದರು . ಇದೀಗ ಜನತಾ ಜಲಧಾರೆ ಅಭಿಮಾನದ ಮೂಲಕ ರಾಜ್ಯದ ೩೪ ನದಿಗಳ ಮೂಲಗಳಿಂದಲೂ ನೀರನ್ನು ಬಳಕೆ ಮಾಡಿಕೊಂಡು ಪತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಮತ್ತು ಕೃಷಿ ಚಟುವಟಿಕೆಗೆ ನೀರಾವರಿ ಕಲ್ಪಿಸುವ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಈ ಆ ೦ ದೋಲನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು .
ಜ .೨೬ ರಿಂದ ಆರಂಭವಾಗುವ ಅಭಿಯಾನ ೨೦೨೩ ರ ಚುನಾವಣೆಯವರೆಗೂ ಮುಂದುವರಿಯಲಿದೆ . ನದಿ ಮೂಲಗಳಿರುವ ರಾಜ್ಯದ ೫೧ ಸ್ಥಳಗಳಿಗೆ ಯಾತ್ರೆಯ ಮೂಲಕ ಭೇಟಿ ನೀಡಲಿವೆ . ಪಕ್ಷದ ಶಾಸಕರು , ಮಾಜಿ ಸಚಿವರು , ಹಿರಿಯ ಮುಖಂಡರ ನೇತೃತ್ವದಲ್ಲಿ ೧೫ ತಂಡಗಳನ್ನು ರಚಿಸಲಾಗುವುದು . ಈ ತಂಡಗಳು ನದಿ ಮೂಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ , ಜಲ ಸಂಗ್ರಹಿಸಲಿವೆ . ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದರೆ ಜ .೨೬ ಕ್ಕೆ ಆಂದೋಲನ ಆರಂಭಿಸಲು ತೀರ್ಮಾನಿಸಲಾ ಗುವುದು ಎಂದರು . ನದಿಮೂಲಗಳನ್ನ ಜನ ಬಳಕೆಗೆ ಕುಡಿಯುವ ನೀರಿನ ಕಾರ್ಯಕ್ರಮಕ್ಕೆ ಜಲಶ್ಯಾಮಲ , ರೈತರಿಗೆ ಬೇಸಾಯಕ್ಕೆ ನೀರನ್ನು ಒದಗಿಸುವುದಕ್ಕೆ ಸಸ್ಯಶ್ಯಾಮಲ ಎಂಬ ಹೆಸರಿಟ್ಟು ರಾಜ್ಯದ ೨೨೪ ಕ್ಷೇತ್ರಗಳಲ್ಲಿ ಈ ರಥ ಸಂಚರಿಸಲಿದೆ . ನಂತರ ಬೆಂಗಳೂರಿನ ಜನತಾದಳ ಕಚೇರಿಯಲ್ಲಿ ಗಂಗಾಜಲವನ್ನು ಶೇಖರಣೆ ಮಾಡಿ ಅಲ್ಲಿ ಒಂದು ವರ್ಷಗಳ ಕಾಲ ಗಂಗಾಪೂಜೆಯನ್ನ ಮಾಡಲಿದ್ದಾರೆ ನಂತರ ಅರಮನೆ ಮೈದಾನದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು . ಈಗಾಗಲೇ ಈ ಕಾರ್ಯಕ್ರಮಕ್ಕಾಗಿ ೧೫ ವಾಹನಗಳನ್ನ ಕಳಶದ ರೀತಿಯಲ್ಲಿ ತಯಾರು ಮಾಡಿದ್ದಾರೆ . ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಈ ಯಾತೆಯೂ ಅನುಕೂಲವಾಗಲಿದೆ . ಮುಂದಿನ ೨೦೨೩ ರ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಹುಮತ ದೊರೆಯುವ ವಾತಾವರಣ ಸೃಷ್ಟಿಯಾಗುತ್ತಿದೆ . ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಧೈಯೋದ್ದೇಶವನ್ನು ಈಡೇರಿಸಲಾಗುವುದು . ಯಾತ್ರೆಯಲ್ಲಿ ಜನರ ಬೆಂಬಲ ಕೋರಲಾಗುವುದು ಎಂದು ಮಾಹಿತಿ ನೀಡಿದರು .
ಮೇಕೆದಾಟು ಯೋಜನೆಗೆ ಪಕ್ಷಾತೀತಿವಾಗಿ ಕಾನೂನು ಹೋರಾಟ ಬೇಕು ಮೇಕೆದಾಟು ಯೋಜನೆಗೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಹಮ್ಮಿಕೊಳ್ಳುತ್ತಿರುವುದು ಇದು ಸೂಕ್ತವಾದ ಸಮಯವಲ್ಲ . ಪಾದಯಾತ್ರೆಯಿಂದ ಯಾವುದೇ ರೀತಿ ಉಪಯೋಗ ಆಗುವುದಿಲ್ಲ . ಯೋಜನೆ ಅನುಷ್ಠಾನಕ್ಕೆ ಅಡ್ಡಿ ಇರುವುದು ಕಾನೂನು ತೊಡಕು . ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಹಸಿರು ನಿಶಾನೆ ತೋರಿಸಿದರೆ ಯೋಜನೆಯ ಕಾಮಗಾರಿ ನಡೆಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು . ಕೇಂದ್ರ ಸರ್ಕಾರಕ್ಕೆ ಬಿಜೆಪಿ ಸರ್ಕಾರದ ಜೊತೆಗೆ ಜೆಡಿಎಸ್ ಪಕ್ಷವೂ ಕೂಡ ಒತ್ತಾಯ ಮಾಡಿದೆ . ಮೊದಲು ಕೋವಿಡ್ ದೂರ ಮಾಡಿ ಮುಂದಿನ ಅಧಿವೇಶನದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪಕಾಕ್ಷೀತವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಬೇಕು ಎಂದರು . ಜನತಾದಳ ಪಕ್ಷ ರೈತರ ಪಕ್ಷ , ಮೇಕೆದಾಟು ಜೊತೆಯಲ್ಲೇ ಮಹದಾಯಿ , ಕಾವೇರಿ , ಕೃಷ್ಣಾ ಮೇಲ್ಪ ೦ ಡೆ , ಭದ್ರಾ ಮೇಲ್ಪಂಡ ಎಲ್ಲ ಯೋಜನೆಗಳು ಅನುಷ್ಠಾನಕ್ಕೆ ಬರಬೇಕು . ಮೇಕೆದಾಟು ಯೋಜನೆಯಡಿ ಕೋಲಾರ ಜಿಲ್ಲೆಗೂ ನೀರು ಹರಿಸಬೇಕು ಎಂದು ಜಿಲ್ಲೆಯ ಶಾಸಕರು ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿದ್ದಾರೆ . ಇದು ಜೆಡಿಎಸ್ ಪಕ್ಷದ ಬಹಳ ದೊಡ್ಡ ಯೋಜನೆಯಾಗಿದೆ . ಮೇಕೆದಾಟು ಯೋಜನೆ ಬಗ್ಗೆ ಕುಮಾರಸ್ವಾಮಿ ಅವರು ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿದ ಕಾರಣ ಡಿಪಿಆರ್ ತಯಾರಿಸಲು ಅನುಮತಿ ದೊರೆಯಿತು . ಅನಂತರ ಅಧಿಕಾರಕ್ಕೆ ಬ ೦ ದ ಸರ್ಕಾರಗಳ ವೈಫಲ್ಯದಿಂದ ನೆನೆಗುದಿಗೆ ಬಿದಿದೆ . ಕಾಂಗ್ರೆಸ್‌ಗೆ ಅಷ್ಟೊಂದು ಆಸಕ್ತಿಯಿದ್ದರೆ ಕಾನೂನು ಹೋರಾಟ ನಡೆಸಲಿ ಎಂದು ಸಲಹೆ ನೀಡಿದರು . ಯರಗೋಳ್ ಯೋಜನೆ ಕುಮಾರಣ್ಣ ಕೊಟ್ಟ ಕಾರ್ಯಕ್ರಮ.
ಈ ನೀರು ನಾಲ್ಕು ತಾಲೂಕಿನ ಕುಡಿಯುವ ನೀರಿನ ಯೋಜನೆ ಇದಾಗಿದೆ . ಯರಗೊಳ್ ಯೋಜನೆಯ ಕಾಂಗಾರಿಗೆ ಸಂಬಂಧಿಸಿದಂತೆ ಬಾಕಿ ಇರುವ ಕಾಂಗಾರಿಯನ್ನು ಪೂರ್ಣಗೊಳಿಸಬೇಕು , ಎತ್ತಿನಹೊಳೆ ಯೋಜನೆ ಕಾಂಗಾರಿ ಜಲಾಶಯ ನಿರ್ಮಾಣದ ಹಂತದಲ್ಲಿ ಕೆಲಸ ನಿಂತಿದೆ . ಅದಕ್ಕೆ ಜೆಡಿಎಸ್ ಪಕ್ಷದ ಶಾಸಕರು ಮೂರು ತಿಂಗಳ ಹಿಂದೆ ಕುಮಾರಸ್ವಾಮಿ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಕೊಟ್ಟಿದ್ದೇವೆ . ೧೦ ಟಿಎಂಸಿ ನೀರು ಸಂಗ್ರಹವಾಗುವ ನೀರನ್ನ ಶೇಖರಣೆ ಮಾಡಿ ಅದರಿಂದ ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗಕ್ಕೆ ಕೊಡುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳದರು . ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ , ಕುಮಾರಸ್ವಾಮಿ ಅವರು ರಾಜ್ಯದ ಪ್ರತಿಯೊಂದು ಜಿಲ್ಲೆಗೂ ನೀರಾವರಿ ಯೋಜನೆ ಕಲ್ಪಿಸುವ ಉದ್ದೇಶದಿಂದ ಜನತಾ ಜಲಧಾರ ಅಂದೋಲನ ಆರಂಭಿಸಿದ್ದಾರೆ . ಇದರ ಮೂಲಕ ಜೆಡಿಎಸ್ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು . ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಯರಗೋಳ್ ಯೋಜನೆ ಕಾಮಗಾರಿ ಮುಗಿದಿದ್ದು , ಪಂಪ್‌ಸೆಟ್‌ ಅಳವಡಿಕೆಯಾದರೆ ನೀರು ಹರಿಸಬಹುದು . ಎತ್ತಿನಹೊಳೆ , ಮೇಕೆದಾಟು ಯೋಜನೆ ಯೋಜನೆ ಅನುಷ್ಠಾನಕ್ಕೆ ಇರುವ ತಾಂತಿಕ ತೊಡಕುಗಳನ್ನು ನಿವಾರಣೆ ಮಾಡಲು ಕೇಂದ ಸರ್ಕಾರ ಮಧ್ಯ ಪವೇಶ ಮಾಡಿ , ಯೋಜನೆಗಳ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು .

ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ನೀರಾವರಿ ಯೋಜನೆಗೆ ಇರುವ ಕಾನೂನು ತೊಡಕುಗಳನ್ನ ನಿವಾರಣೆ ಮಾಡುವ ಮೂಲಕ ಕುಡಿಯುವ ನೀರಿಗೆ ಪಥಮ ಆಧ್ಯತೆ ನೀಡಬೇಕು , ಇಲ್ಲವಾದರೆ ರಾಜ್ಯಗಳ ಇದೇ ವಿಚಾರವನ್ನ ಮುಂದಿಟ್ಟುಕೊಂಡು ನ್ಯಾಯಾಲಯದ ಮೆಟ್ಟಿಲು ಹತ್ತಿ ಜನಸಾಮಾನ್ಯರಿಗೆ ನೀರಾವರಿ ಯೋಜನೆಗಳನ್ನು ಕಲಿಸುವಲ್ಲಿ ವಿಳಂಭ ಮಾಡುವುದಕ್ಕೆ ಅವಕಾಶ ಕೊಟ್ಟಂತೆ ಆಗುತ್ತದೆ ಎಂದು ಹೇಳಿದರು . ಈ ಸಂದರ್ಭದಲ್ಲಿ ವಕೀಲ ಚೌಡೇಗೌಡ , ಯುಸಫ್‌ವುಲ್ಲಾ ಖಾನ್ ಹಾಜರಿದ್ದರು .