ಎಂ ಐ ಟಿ ಕುಂದಾಪುರದಲ್ಲಿ ಇನ್ನೋವೇಶನ್ ಆಂಡ್ ಡಿಸೈನ್ ಥಿಂಕಿಂಗ್ ಕಾರ್ಯಗಾರ. ಎಂ ಐ ಟಿ ಕುಂದಾಪುರದ ಎಂ ಬಿ.ಎ ವಿಭಾಗದ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಐಡಿಯೇಷನ್ ಇನ್ ಇನ್ನೋವೇಶನ್ ಆಂಡ್ ಡಿಸೈನ್ ಥಿಂಕಿಂಗ್ ವಿಷಯದ ಮೇಲೆ ಒಂದು ದಿನದ ಕಾರ್ಯಗಾರ ನಡೆಯಿತು.
ಡಾ. ಮಹಮ್ಮದ್ ಜುಬೇರ್ ಚೀಫ್ ಇನ್ನೋವೇಶನ್ ಆಫೀಸರ್ (CIO) ಮಾಹೆ, ಮಣಿಪಾಲ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ವಿಭಿನ್ನತೆ ಹೊಸತನ, ಆವಿಷ್ಕಾರದ ಮನೋಭಾವನೆ ಇರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರಲ್ಲದೆ ಹೊಸ ಸಂಶೋಧನೆ ಹೇಗಿರಬೇಕೆಂದು ಎಂ ಐ ಟಿ ಇನ್ನೋವೇಶನ್ ಸೆಂಟರ್ ನ ಉದಾರಣೆಯೊಂದಿಗೆ ಹೇಳಿದರು. ಈ ಕಾರ್ಯಗಾರಕ್ಕೆ ಐ.ಎಂ.ಜೆ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗಡೆ ಯವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಈ ಸಂದರ್ಭದಲ್ಲಿ ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರ , ಉಪನ್ಯಾಸಕರು ದ್ವಿತೀಯ ಎಂ.ಬಿ.ಎ ವಿಭಾಗದ ಎಲ್ಲ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಜೋವಿಯಲ್ ಫೆರ್ನಾಂಡಿಸ್ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
Innovation and Design Thinking Workshop at MIT Kundapur.
A one-day workshop was held on Ideation in Innovation and Design Thinking for the 4th semester students of MBA department of MIT Kundapur. Dr. Mohammed Zubair Chief Innovation Officer (CIO) MAHE, Manipal, Chief Guest and Key note speaker of the programme inaugurated the workshop by lighting the lamp. In his inaugural address Dr.Zubair opined that there should be a spirit of innovation in everything we do and also told the MBA students how the education, innovation and business can go together citing the example of MIT,MAHE Innovation Center. Brand Building Director of IMJ Institutions Dr Ramakrishna Hegde, who was the resource person conducted this Workshop with the HOD of MBA Department Dr. Suchitra and other deparmetntal faculty members. More than 60 students in six batches participated actively in the process of problem definition, ideation and rapid prototyping of IDT and came out with wonderful new business ideas at the end of this workshop.