

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಇನ್ನರ್ ವ್ಹೀಲ್ ಕ್ಲಬ್ಬ್ ಕುಂದಾಪುರ ದಕ್ಷಿಣದ ವತಿಯಿಂದ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಸಬಿತಾ ಹೊಸ್ಕೋಟೆಯವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.
ಸಾಮಾಜಿಕ ಕಳಕಳಿ ಹೊಂದಿದ ಶ್ರೀಮತಿ ಸಬಿತಾ ಹೊಸ್ಕೋಟೆ, ಕುಂದಾಪುರ ಮತ್ತು ಸುತ್ತಲಿನ ಗ್ರಾಮಗಳಲ್ಲಿ ವಿಶೇಷವಾಗಿ ಮಹಿಳಾ ಸಬಲೀಕರಣಕ್ಕೆ ಅಪಾರ ಕೊಡುಗೆ ನೀಡಿರುತ್ತಾರೆ. ಹೊಲಿಗೆ ಯಂತ್ರ ಕೊಡಿಸುವುದು, ಆರ್ಥಿಕ ಧನಸಹಾಯ, ವಿಧವಾ ಪಿಂಚಣಿ ಕೊಡಿಸುವುದು, ಆಪ್ತ ಸಲಹೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ತಮ್ಮಂತಹ ಸಮಾನ ಮನಸ್ಕರೊಡಗೂಡಿ ಕೈಗೊಂಡರು. ಮಹಿಳಾ ಗ್ರಾಹಕರ ಸೊಸೈಟಿಯಲ್ಲಿ ಕಾರ್ಯದರ್ಶಿಯಾಗಿ ತುಂಬಾ ಸುಧಾರಣೆಗಳನ್ನು ತಂದರು. ವಿವಿಧ ದೇವಸ್ಥಾನಗಳಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು.ತಮ್ಮ ನಿಸ್ವಾರ್ಥ ಸಾಮಾಜಿಕ ಸೇವೆಗೆ ಪ್ರೇರಣೆಯಾದ ಶ್ರೀ ಮಹಾಬಲೇಶ್ವರ ಅಡಿಗ ಮತ್ತು ಶಾಂತಾ ಅಡಿಗ ದಂಪತಿಯನ್ನು ಸ್ಮರಿಸಲು ಮರೆಯಲಿಲ್ಲ.
ಇನ್ನರ್ ವ್ಹೀಲ್ ಕ್ಲಬ್ಬ್ ಕುಂದಾಪುರ ದಕ್ಷಿಣದ ಅಧ್ಯಕ್ಷೆ ಸುರೇಖ ಪುರಾಣಿಕ, ಮಾಜಿ ಅಧ್ಯಕ್ಷರುಗಳಾದ ಅಂಬುಜಾ ಶೆಟ್ಟಿ, ಸುಜಾತ ನಕ್ಕತ್ತಾಯ, ಶಾಂತಾ ಕಾಂಚನ್ ಹಾಗೂ ಉಮಾ ಶೆಟ್ಟಿಯವರು ಉಪಸ್ಥಿತರಿದ್ದರು.