ಶ್ರೀನಿವಾಸಪುರ : ಪಟ್ಟಣದ ಪ್ರಾಂತ ರೈತ ಸಂಘದ ಕಛೇರಿಯಲ್ಲಿ ಮಂಗಳವಾರ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು.
ಕೆಪಿಆರ್ಎಸ್ ನ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ ತಾಲೂಕಿನ ಕೆಲ ರೈತರು ಅರಣ್ಯ ಅಧಿಕಾರಿಗಳ ವಿರುದ್ಧ ಉಚ್ಚನ್ಯಾಯಾಲಯದಲ್ಲಿ ಕೇಸು ಹಾಕಿ ಕೊಂಡು , ತಡೆಯಾಜ್ಞೆ ತಂದು ತಮ್ಮ ಜಮೀನುಗಳನ್ನು ರಕ್ಷಿಸಿಕೊಂಡು ಬೆಳೆ ಮಾಡುತ್ತಿರುವಾಗ ಅಂತಹ ರೈತರ ಬಳಿ ಹೋಗಿ ಈ ಜಮೀನು ಅರಣ್ಯ ಇಲಾಖೆ ಪರವಾಗಿ ಆಗಿದ್ದು, ನೀವುಗಳು ಈ ಜಮೀನು ಕಡೆ ಬರಬಾರದು ಎಂದು ರೈತರನ್ನು ಬೆದರಿಸುತ್ತಿದ್ದಾರೆ. ಇಂತಹ ತಪ್ಪು ಸಂದೇಶ ಮತ್ತು ರೈತರನ್ನು ಬೆದರಿಸುವ ಅಧಿಕಾರಿಗಳ ಕ್ರಮವನ್ನು ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಭೂ ಸಂತ್ರಸ್ಥರ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತಿದೆ ಎನ್ನುತ್ತಾ, ಉಚ್ಚ ನ್ಯಾಯಾಲಯದಲ್ಲಿ ತೀರ್ಪು ಅಂತಿಮವಾಗುವ ವರೆಗೂ ರೈತರು ಅರಣ್ಯ ಇಲಾಖೆಗೆ ಭೂಸ್ವಾದಿವನ್ನ ಮಾಡಬಾರದು ಎಂದು ವಿನಂತಿಸಿದರು.
ಕೆಪಿಆರ್ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್, ಭೂ ಸಂತ್ರಸ್ಥರ ಹೋರಾಟ ಸಮಿತಿ ಉಪಾಧ್ಯಕ್ಷ ಪಿ.ಚಲಪತಿ, ಸದಸ್ಯ ಟಿ.ಎಚ್.ಆಂಜಲಪ್ಪ ಇದ್ದರು.