

ತಾಲೂಕು ಕಚೇರಿ ಬ್ರಹ್ಮಾವರದಲ್ಲಿ ಈ ದಿನ ಹಕ್ಕು ಪತ್ರ ವಿತರಣಾ ಸಮಾರಂಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂದು 55 ಹಕ್ಕುಪತ್ರವನ್ನು ಬಿಜೆಪಿ ಸದಸ್ಯರಿರುವ ಗ್ರಾಮ ಪಂಚಾಯಿತಿಗಳಿಗೆ ಮಾತ್ರ ನೀಡಿದ್ದು ಇದರಿಂದ ಆಕ್ರೋಶಗೊಂಡ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷರಾದ ಕುಮಾರ್ ಸುವರ್ಣ ಇವರು ಸಚಿವರ ಸಮ್ಮುಖದಲ್ಲಿ ತಹಶೀಲ್ದಾರ್ ಶ್ರೀಕಾಂತ್ ಹೆಗಡೆಯನ್ನು ತರಾಟೆಗೆ ತೆಗೆದುಕೊಂಡರು ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆ ಕಾಂಗ್ರೆಸ್ ಕಾರ್ಯಾಧ್ಯಕ್ಷರು ಆದ ಕಿಶನ್ ಹೆಗಡೆ ಕೊಳಕ್ಕೆ ಬೈಲು ಜೊತೆಗಿದ್ದರು