ಕುಂದಾಪುರ, ದಿನಾಂಕ: 06/08/2024 ರಂದು, ಸ್ಥಳೀಯ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಭಾಂಗಣದಲ್ಲಿಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಯಕುರಿತು ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಡುಪಿ ಡಯಟ್ನ ಉಪ ಪ್ರಾಂಶುಪಾಲರಾಗಿರುವ ಡಾ| ಅಶೋಕ್ಕಾಮತ್ರವರು ಹದಿಹರೆಯ ಎಂದರೆ ಯಾರು? ಅವರ ಸಮಸ್ಯೇಗಳೇನು. ಅವರ ಆಸೆಗಳೇನು ಹಾಗೂ ಸಂಪರ್ಕ ಮಾದ್ಯಮವನ್ನು ಉಪಯೋಗಿಸುವುದರಿಂದಾಗುವ ಪರಿಣಾಮವೇನು ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಮೊಬೈಲ್ತಲೆ ಬಗ್ಗಿಸಿ ನನ್ನನ್ನು ನೋಡು ನಾನು ನಿಮ್ಮತಲೆಯನ್ನು ಎತ್ತದಂತೆ ಮಾಡುತ್ತೇನೆ. ಅದೇ ನೀವುತಲೆ ಬಗ್ಗಿಸಿ ಪುಸ್ತಕವನ್ನು ನೋಡು ಆ ಪುಸ್ತಕ ತಲೆ ಎತ್ತಿ ನಡೆಯುವಂತೆ ಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು. ಸಂತೋಷದಿಂದ ಕಲಿತದ್ದು ಯಾವಾಗಲು ಮರೆಯಲು ಸಾಧ್ಯವಿಲ್ಲ ಆದ್ದರಿಂದ ವಿದ್ಯಾರ್ಥಿಗಳಾದ ನೀವು ಕಷ್ಟಪಟ್ಟು ಅಲ್ಲ ಇಷ್ಟಪಟ್ಟು ಕಲಿಯಿರಿ ಎಂಬುವುದಾಗಿ ತಿಳಿಸಿದರು. ಕಲಿಯುವಾಗ ಸೂಕ್ತ ಗುರಿ ಉದ್ದೇಶವನಿಟ್ಟು ಕಲಿಯಬೇಕು ಆಗ ಉತ್ತಮ ಸಾಧನೆ ಮಾಡಲು ಸಾಧ್ಯ ಹಾಗೂ ಆರೋಗ್ಯದ ಬಗ್ಗೆ ಗಮನವಹಿಸಲು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಹೋಲಿ ರೋಜರಿ ವಿದ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿಯಾಗಿರುವ ಅತೀ ವಂದನೀಯ ಗುರು ಪೌಲ್ ರೆಗೋರವರು ವಿದ್ಯಾರ್ಜನೆಯೊಂದಿಗೆ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ ಯವರು ಸರ್ವರನ್ನು ಸ್ವಾಗಿತಿಸಿದರು. ಸಂಸ್ಥೆಯ ಸಹ ಶಿಕ್ಷಕಿ ಶ್ರೀಮತಿ ಪ್ರತಿಮಾ ಶೆಟ್ಟಿಯವರು ಧನ್ಯವಾದ ಸಮರ್ಪಿಸಿದರು. ಸಹ ಶಿಕ್ಷಕ ಲೂವಿಸ್ ಪ್ರಶಾಂತ್ ರೆಬೆರೋ ಕಾರ್ಯಕ್ರಮ ನಿರೂಪಿಸಿದರು.