

ಶ್ರೀನಿವಾಸಪುರ : ಇತ್ತೀಚೆಗೆ ಐಆರ್ಡಿಎ ನಿರ್ದೇಶನದ ಮೇರೆಗೆ ಭಾರತೀಯ ಜೀವವಿಮ ನಿಗಮದಲ್ಲಿ ಆದ ಬದಲಾವಣೆಗಳ ಬಗ್ಗೆ ಮಾಹಿತಿಗಳನ್ನು ಕೋಲಾರ ಶಾಖೆಯ ಹಿರಿಯ ಶಾಖಾಧಿಕಾರಿಗಳಾದ ಎನ್.ಆರ್. ಸಿದ್ದೇಶ್ ಮಾಹಿತಿ ನೀಡಿದರು.
ಪಟ್ಟಣದ ಎಲ್ಐಸಿ ಉಪಶಾಖೆಯಲ್ಲಿ ಗುರುವಾರ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.
ಅಭಿವೃದ್ಧಿ ಅಧಿಕಾರಿ ಆರ್ ವಿ ಕುಲಕರ್ಣಿ ಮಾತನಾಡಿ ಎಲ್ಐಸಿ ನಲ್ಲಿ ಆದ ಹೊಸ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿ, ವಿಮಾ ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಿಳಿದುಕೊಂಡು ಹೇಗೆ ಹೆಚ್ಚಿನ ವಹಿವಾಟನ್ನು ಮಾಡಬೇಕೆಂದು ತಮ್ಮ ತಂಡದ ಸದಸ್ಯರಿಗೆ ತಿಳಿಸಿಕೊಟ್ಟರು.
ಸಭೆಯಲ್ಲಿ ನಿರಂತರ 16 ನೇ ಬಾರಿ ಎಂಡಿಆರ್ಟಿ ಮಾಡಿ, ವಿಶಿಷ್ಟ ಸಾಧನೆ ಮಾಡಿರುವ ಎಸ್.ಎಂ. ಪುಷ್ಪಮ್ಮ ರವರನ್ನು ಸನ್ಮಾನಿಸಲಾಯಿತು. ಉಪಶಾಖಾಧಿಕಾರಿ ಎಸ್.ವಿ.ಪ್ರಸಾದ್ ಇದ್ದರು