

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾಸ್ ಪಿ ಯು ಕಾಲೇಜಿನ ದ್ವಿತೀಯ ಪಿ ಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಒಂದು ದಿನದ ಕೈಗಾರಿಕಾ ಭೇಟಿ ಹಮ್ಮಿಕೊಳ್ಳಲಾಯಿತು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಕೈಗಾರಿಕೆ ಸಂಸ್ಥೆಗಳಿಗೆ 70 ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಭೇಟಿ ನೀಡಿ ವಿವಿಧ ದಿನಬಳಕೆಯ ಗ್ರಹೋಪಯೋಗಿ ವಸ್ತುಗಳ ಉತ್ಪಾದನೆ, ನೂತನ ತಂತ್ರಗಾರಿಕೆಯ ಬಳಕೆ, ಪ್ರೊಡಕ್ಷನ್ ಮತ್ತು ಪ್ರೋಸೆಸ್ಸಿಂಗ್, ಕಚ್ಚಾವಸ್ತುಗಳ ಬಳಕೆಯಿಂದ ಉತ್ಪಾದನೆಯಾಗುವ ತ್ಯಾಜ್ಯಗಳ ಮರುಬಳಕೆ, ಉದಯವಾಣಿ ದಿನಪತ್ರಿಕೆಯ ಉತ್ಪಾದನೆಯನ್ನು ಪ್ರಾಯೋಗಿಕವಾಗಿ ನೋಡಿ ಹೆಚ್ಚಿನ ತಿಳುವಳಿಕೆಯನ್ನು ಪಡೆದುಕೊಂಡರು ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರಾದ ಗೀತಾ, ರಸಿಕ ಮತ್ತು ಸುಮಾ ಉಪಸ್ಥಿತರಿದ್ದರು