ಅಹ್ಮದಾಬಾದ್: ಇಂದು ಅಹಮದಬಾದಿನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ವಿಶ್ವಕಪ್ 2023 ರ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತ್ತು. ಇದನ್ನು ಸಮರ್ಥಿಸಿದ ಆಸ್ಟ್ರೇಲಿಯಾ ಬೌಲರ್ ಗಳು ಅತ್ಯುತ್ತಮ ಬೌಲಿಂಗ್ ಮಾಡಿ ಭಾರತದ ಮೊತ್ತವನ್ನು ಕೇವಲ 240 ರನ್ನಿಗೆ ನಿಯಂತ್ರಿಸಿದರು. ಭಾರತದ ಬ್ಯಾಟಿಂಗ್ ಬಿರುಸನ್ನೆ ಪಡೆಯಲಿಲ್ಲ. ಮಂದಗತಿ ಬ್ಯಾಟಿಂಗ್ ಭಾರತಕ್ಕೆ ಮುಳುವಾಯಿತು.
ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಲ್ಲಿ ಕೇವಲ 47 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದನ್ನು ವಿಕ್ಷೀಸಿದ ವಿಕ್ಷಕರ ಮನಸಿನಲ್ಲಿ ಆಶಾವಾದ ಮೂಡಿತ್ತು, ಆದರೆ ನಂತರ ಲೇಬಸೆನ್ ( 58 ) ಮತ್ತು ಟ್ರೆವಿಸ್ ಹೆಡ್ (137) ಸೇರಿ ನಡೆಸಿದ ಜೊತೆಯಾಟದ ಕಾರಣಕ್ಕೆ ಆರು ವಿಕೆಟ್ ಜಯ ಸಾಧಿಸಿತು. ಈ ಮೂಲಕ ಆಸ್ಟ್ರೇಲಿಯಾ 6 ನೇ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಭಾರತ ಅಜೇಯವಾಗಿ ಫೈನಲ್ ಪ್ರವೇಶಿಸಿದರೂ ಕಪ್ ಮಾತ್ರ ಕನಸಾಗಿಯೇ ಉಳಿಯಿತಲ್ಲದೆ, ಕಪ್ ಗೆಲ್ಲಲಾಗಲಿಲ್ಲ.
ಮೊದಲು ಬ್ಯಾಟ್ ಮಾಡಿದ ಭಾರತ ಆರಂಭದಲ್ಲಿ ಗಿಲ್ ಅವರನ್ನು ಬೇಗನೆ ಕಳೆದುಕೊಂಡರೂ ರೋಹಿತ್ ಅವರು ಹೊಡಿ ಬಡಿ ಆಟಕ್ಕೆ ಮುಂದಾಗಿದ್ದರು ಈ ಸಂದರ್ಭದಲ್ಲಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಔಟಾದರು. ನಂತರ ಕೊಹ್ಲಿ ವಿಕೇಟ್ ರಕ್ಷಣೆಯಿಂದ ಆಡಿ ಆಟವಾಡಿದ ಕೆಎಲ್ ರಾಹುಲ್ 107 ಎಸೆತಗಳಲ್ಲಿ 66 ರನ್ ಗಳಿಸಿ ಭರವಸೆ ಮೂಡಿಸಿದರು. ಆದರೆ ಸ್ಟಾರ್ಕ್ ಅವರು ಎಸೆದ ಚೆಂಡು ಕೀಪರ್ ಜೋಶ್ ಇಂಗ್ಲಿಸ್ ಅವರ ಕೈ ಸೇರಿ ನಿರ್ಗಮಿಸಿದರು. ರವೀಂದ್ರ ಜಡೇಜಾ ಕೂಡ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ.22 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು. ಶಮಿ 6 ರನ್ ಗಳಿಸಿ ಔಟಾದರು.
ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ಬುಮ್ರಾ 1 ರನ್ ಗೆ ಔಟಾದರು. ಕೊನೆಯ ಎಸೆತದಲ್ಲಿ ಕುಲದೀಪ್ ಯಾದವ್ 10 ರನ್ ಗಳಿಸಿದ್ದ ವೇಳೆ ರನ್ ಔಟಾದರು. ಮತ್ತು ಸಿರಾಜ್ 8 ರನ್ ಗಳಿಸಿ ಔಟಾಗದೆ ಉಳಿದರು. ಆಸೀಸ್ ಬಿಗಿ ದಾಳಿಯ ನಡುವೆಯೂ 50 ಓವರ್ ಗಳಲ್ಲಿ 240 ರನ್ ಗಳಿಗೆ ಆಲೌಟಾಯಿತು.
ಆಸೀಸ್ ಪರ ಬಿಗಿ ದಾಳಿ ಸಂಘಟಿಸಿದ ಮಿಚೆಲ್ ಸ್ಟಾರ್ಕ್3, ಜೋಶ್ ಹ್ಯಾಜಲ್ವುಡ್2 , ಗ್ಲೆನ್ ಮ್ಯಾಕ್ಸ್ವೆಲ್ 1, ಪ್ಯಾಟ್ ಕಮ್ಮಿನ್ಸ್2 , ಆಡಮ್ ಝಂಪಾ 1 ವಿಕೆಟ್ ಪಡೆದರು.