ಪ್ಯಾಲೆಸ್ತೀನಿನ ಭಾರತದ ರಾಯಭಾರಿ ಮುಕುಲ್ ಆರ್ಯ ನಿಗೂಢವಾಗಿ ಸಾವನ್ನಪ್ಪಿದ್ದಾರೆ

JANANUDI.COM NETWORK

ಪ್ಯಾಲೆಸ್ತೀನ್‌ನ ರಮಲ್ಲಾದಲ್ಲಿರುವ ಭಾರತದ ರಾಯಭಾರಿ ಮುಕುಲ್ ಆರ್ಯ ಅವರು ತಮ್ಮ ಕಚೇರಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಈ ಸುದ್ದಿಯನ್ನು ಸ್ಥಳೀಯ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ. ಮುಕುಲ್ ಆರ್ಯ ಅವರ ನಿಧನಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ

“ರಾಮಲ್ಲಾದಲ್ಲಿ ಭಾರತದ ಪ್ರತಿನಿಧಿ ಶ್ರೀ ಮುಕುಲ್ ಆರ್ಯ ಅವರ ನಿಧನದ ಬಗ್ಗೆ ತಿಳಿದು ತೀವ್ರ ಆಘಾತವಾಯಿತು. ಅವರೊಬ್ಬ ಪ್ರತಿಭಾವಂತ ಅಧಿಕಾರಿಯಾಗಿದ್ದರು. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಅವರ ನಿಧನದ ನೋವು ಮರೆಸುವ ಶಕ್ತಿಯನ್ನ ದೇವರು ಕರುಣಿಸಲಿ ಟ್ವೀಟ್ ಮಾಡಿದ್ದಾರೆ.