





ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಈ ದಿನ ಹೊಸೂರು ಶ್ರೀ ಮೂಕಾಂಬಿಕಾ ಪ್ರೌಢ ಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ಉದ್ಘಾಟಿಸಲಾಯಿತು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ರೆಡ್ ಕ್ರಾಸ್, ರಕ್ತ ನಿಧಿ ಕೇಂದ್ರ ಮತ್ತು ಜನ ಔಷಧಿ ಕೇಂದ್ರದ ಬಗ್ಗೆ ವಿವರಣೆ ನೀಡಿದರು. ರೆಡ್ ಕ್ರಾಸ್ ಸದಸ್ಯರಾದ ಶ್ರೀಮತಿ ಪ್ರತಿಮಾ ಮತ್ತು ಬಗ್ವಾಡಿ ಮೆತ್ತಿನ ಮನೆ ಡಾ. ದಿನಕರ ಶೆಟ್ಟಿ ದಂಪತಿಗಳು ಕೊಡಮಾಡಿದ ರೂಪಾಯಿ ಒಂದು ಲಕ್ಷ (50,000/- ಶಾಲಾ ಲೈಬ್ರರಿ ಗಾಗಿ) ಅಲ್ಲದೇ ಹತ್ತು ಮಂದಿ ಬಡ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ಸ್ಕೋಲರ್ ಶಿಪ್ ನೀಡಲಾಯಿತು. ಪ್ರಾಂಶುಪಾಲರಾದ ಚಂದ್ರ ಶೆಟ್ಟಿ ಯವರು ಎಲ್ಲರನ್ನೂ ಸ್ವಾಗತಿಸಿದರು. ಯುವ ರೆಡ್ ಕ್ರಾಸ್ ಸಂಯೋಜಕ ರಾದ ದಿನಕರ ಆರ್ ಶೆಟ್ಟಿ ಯವರು ವಿದ್ಯಾರ್ಥಿಗಳಿಗೆ ಪ್ರತಿಜ್ನಾವಿಧಿ ಬೋದಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ನಾರಾಯಣ ದೇವಾಡಿಗ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶ್ರೀಮತಿ ಕೀರ್ತನಾ ಕಾರ್ಯಕ್ರಮ ನಿರೂಪಿಸಿದರು ಮತ್ತು ಶ್ರೀ ವೇಣುಗೋಪಾಲ ಶೆಟ್ಟಿ ವಂದನಾರ್ಪಣೆ ಗೈದರು.