

ಕುಂದಾಪುರ; ಹದಿನೇಳು ವರ್ಷದಿಂದ ಎಂಡೋಸಲ್ಫಾನ್ ಕಾರಣದಿಂದ ಹಾಸಿಗೆ ಹಿಡಿದ ಸೇನಾಪುರದ ಸಂತ್ರಸ್ತೆಗೆ ಕುಂದಾಪುರದ ಇಂಡಿಯನ್ ರೆಡ್ ಕ್ರಾಸನ ವತಿಯಿಂದ ದಿನನಿತ್ಯ ಅಗತ್ಯವಿರುವ ಅಂಡರ್ ಪ್ಯಾಡ್ ಗಳನ್ನು ಹಸ್ತಾಂತರಿಸಲಾಯಿತು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಐ.ಪಿ ಗಡದ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರೇಮಾನಂದ, ರೆಡ್ ಕ್ರಾಸನ ಸಭಾಪತಿ ಜಯಕರ ಶೆಟ್ಟಿ, ಖಜಾಂಜಿ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ ಹಾಗೂ ನಿವೃತ್ತ ಪ್ರಾಂಶುಪಾಲ ದೋಮ ಚಂದ್ರಶೇಖರ ಉಪಸ್ಥಿತರಿದ್ದರು.