


ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ, ಆಚಾರ್ಯ ಮಠ ಕುಂದಾಪುರ ಹಾಗೂ ಕಸ್ತೂರಬಾ ಮೆಡಿಕಲ್ ಕಾಲೇಜು ಮಣಿಪಾಲ ಇವರ ಸಹಯೋಗದೊಂದಿಗೆ ಆಚಾರ್ಯ ಮಠ ದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸುಮಾರು77 ಜನರಿಗೆ ಸಂಪೂರ್ಣ ರಕ್ತ ಪರೀಕ್ಷೆ, 165 ಜನರಿಗೆ ವಿವಿಧ ಆರೋಗ್ಯ ತಪಾಸಣೆ, 36 ಜನರ E.C.G ಟೆಸ್ಟ್ ಮಾಡಲಾಯಿತು. ಈ ಕಾರ್ಯಕ್ರಮ ವನ್ನು ವೆಂಕಟರಮಣ ದೇವಸ್ಥಾನದ ಅದ್ಯಕ್ಷರಾದ ರಾಧಾಕೃಷ್ಣ ಶೆಣೈ ದೀಪ ಬೆಳಗಿ ಉದ್ಗಾಟನೆ ಮಾಡಿ ಆಶೀರ್ವಚನ ಗೈದರು. ಮುಖ್ಯ ಅತಿಥಿಗಳಾದ ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಆಚಾರ್ಯ ಸಹೋದರರು, ಅರ್ಚಕರು, ಸಮಿತಿಯ ಸದಸ್ಯರು, ಮಣಿಪಾಲ್ ಆಸ್ಪತ್ರೆಯ ವೈದ್ಯರು ಗಳು ಮತ್ತು ಉಪ ಸಭಾಪತಿ ಡಾ. ಉಮೇಶ್ ಪುತ್ರನ್ ಉಪಸ್ಥಿತರಿದ್ದರು. ಡಾ. ಸೋನಿ ಡಿಕೋಸ್ಟಾ ನಿರೂಪಿಸಿ ವಂದಿಸಿದರು. ಅಲ್ಲದೇ ರೆಡ್ ಕ್ರಾಸ್ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಮುತ್ತಯ್ಯ ಶೆಟ್ಟಿ, ಸತ್ಯನಾರಾಯಣ ಪುರಾಣಿಕ, ನಾರಾಯಣ ದೇವಾಡಿಗ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.





