ಅಮರಾವತಿ: ನೀವು ಕುರಿ ಮಾಂಸ ತಿಂದಿದ್ದರಿಂದ ಭಾರತ ವಿಶ್ವಕಪ್ ಸೋತಿತು ಎಂದು ಹಿರಿಯ ಮಗ ಕುಡಿದ ಅಮಲಿನಲ್ಲಿ ತಮ್ಮನ ಮೇಲೆ ರಾಡ್ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ಮಹಾರಾಷ್ಟ್ರ ಅಮರಾವತಿಯಲ್ಲಿ ನಡೆಸಿದಿದೆ.ಈ ವೇಳೆ ಆರೋಪಿ ಹೆಸರು ಪ್ರವೀಣ ರಮೇಶ ಇಂಗೋಳೆ (ವಯಸ್ಸು 32, ರೆ. ಅಂಜನಗಾಂವ್ ಬ್ಯಾರಿ) ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.
ಮೃತನನ್ನು ಅಂಕಿತ್ ರಮೇಶ ಇಂಗೋಲೆ (ವಯಸ್ಸು 28) ಎಂದು ಗುರುತಿಸಲಾಗಿದ್ದು, ಗಾಯಗೊಂಡ ತಂದೆಯ ಹೆಸರು ರಮೇಶ್ ಗೋವಿಂದ್ ಇಂಗೋಳೆ ಎಂದು ಗುರುತಿಸಲಾಗಿದೆ.
ರವಿವಾರ ನಡೆದ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದ ದಿನ ರಮೇಶ್ ಮತ್ತು ಅವರ ಕಿರಿಯ ಮಗ ಅಂಕಿತ್ನ ಜೊತೆ ಚಿಕ್ಕಪ್ಪನ ಮನೆಗೆ ಹೋಗಿದ್ದರು. ಅಲ್ಲಿ ಮಟನ್ ಊಟ ಮಾಡಲಾಗಿತ್ತು. ಊಟ ಮುಗಿಸಿ ಇಬ್ಬರೂ ಮನೆ ತಲುಪಿದ್ದು ಮಧ್ಯಾಹ್ನ 2 ಗಂಟೆಗೆ. ಪ್ರವೀಣ್ ಗಾಗಿಯೂ ಬಾಕ್ಸನಲ್ಲಿ ಮಟನ್ ತಂದಿದ್ದರು. ಆ ವೇಳೆ ಪ್ರವೀಣ್ ಕುಡಿದ ಅಮಲಿನಲ್ಲಿ ಭಾರತ-ಆಸ್ಟ್ರೇಲಿಯಾ ೫೦-೫೦ ಫೈನಲ್ ಪಂದ್ಯ ವೀಕ್ಷಿಸುತ್ತಿದ್ದ.
ಏತನ್ಮಧ್ಯೆ, ಆಸ್ಟ್ರೇಲಿಯಾ ಸಂಜೆ ಬ್ಯಾಟಿಂಗ್ ಆರಂಭಿಸಿದ ನಂತರ ಕ್ರಿಕೆಟ್ನಲ್ಲಿ ಭಾರತದ ಪ್ರದರ್ಶನ ಕುಸಿಯುತ್ತಲೇ ಇದ್ದುದರಿಂದ ಅಸಮಾಧಾನಗೊಂಡ ನೀವು ಮಟನ್ ತಿಂದಿದಕ್ಕೆ ಭಾರತ ಸೋಲುತ್ತದೆ ಎಂದು ಪ್ರವೀಣ್ ಇಬ್ಬರನ್ನೂ ನಿಂದಿಸುವುದನ್ನು ಮುಂದುವರೆಸಿದ. ರಾತ್ರಿ 9 ಗಂಟೆಯ ಸುಮಾರಿಗೆ ಭಾರತ ಪಂದ್ಯ ಸೋತ ನಂತರ ಪ್ರವೀಣ್ ಇನ್ನಷ್ಟು ಕೋಪಗೊಂಡು “ನೀವು ಮಟನ್ ತಿಂದಿದ್ದರಿಂದ ಭಾರತ ಪಂದ್ಯ ಸೋತಿತು” ಎಂದು ಇಬ್ಬರನ್ನೂ ನಿಂದಿಸಲು ಆರಂಭಿಸಿದರು. ಇದರಿಂದ ಕೋಪಗೊಂಡ ತಂದೆ ಪ್ರವೀಣ್ ಮೇಲೆ ಮೊಬೈಲ್ ಎಸೆದಿದ್ದಾನೆ. ಕೋಪದಿಂದ ಪ್ರವೀಣ್ ತನ್ನ ತಂದೆಯ ಕಾಲುಗಳನ್ನು ಹೊಡೆದಿದ್ದಾನೆ. ಇದನ್ನು ಅಂಕಿತ್ ತಡೆಯಲು ಹೋದಾಗ ಪ್ರವೀಣ್ ಕಬ್ಬಿಣದ ರಾಡ್ ನಿಂದ ಅಂಕಿತ್ ತಲೆಗೆ ನಾಲ್ಕೈದು ಬಾರಿ ಹೊಡೆದಿದ್ದಾನೆ. ಅಂಕಿತ್ ರಕ್ಷಣೆಗಾಗಿ ಮನೆಯಿಂದ ಹೊರಗೆ ಓಡಲು ಯತ್ನಿಸಿದಾಗ ಎಡವಿ ಕೆಳಗೆ ಬಿದ್ದಿದ್ದಾನೆ.
ಗ್ರಾಮಸ್ಥರು ರಮೇಶ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಆತ ಮ್ರತಪಟ್ಟಿದ್ದಾನೆ, ಈ ಬಗ್ಗೆ ಬದನೇರಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ, ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಈ ವೇಳೆ ರಮೇಶ ಇಂಗೋಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರವೀಣ್ ವಿರುದ್ಧ ಕೊಲೆ ಹಾಗೂ ಹಲ್ಲೆ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ. ಠಾಣೆದಾರ ನಿತಿನ್ ಮಗರ್ ನೇತೃತ್ವದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದು ತಂದೆಯ ಹತ್ಯೆ ಮಾಡಲು ಒಂದು ನೇಪ ಮಾತ್ರ ಕೂಡ ಆಗಿರಬಹುದೆಂದು, ಸಂಶಯ ವ್ಯಕ್ತವಾಗಿದೆ. ಒಟ್ಟಾರೆಯಾಗಿ ಈ ಅಟನ್ವ್ ಸ್ಥಳೀಯರನ್ನು ಬೆಚ್ಚಿ ಬೀಳಿಸುವಂತ್ತೆ ಮಾಡಿದೆ.