ಶ್ರೀನಿವಾಸಪುರ : ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿದಂತಹ ಪ್ರಥಮ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ . ಇಡೀ ವಿಶ್ವದಲ್ಲೇ ಚಂದ್ರನ ಮೇಲೆ ನೌಕೆ ಇಳಿಸಿದಂತಹ ರಾಷ್ಟ್ರ. ಅಮೇರಿಕಾ , ಚೀನಾ, ರಷ್ಯಾ ದೇಶಗಳ ನಂತರ ನಮ್ಮ ದೇಶವು ಚಂದ್ರನ ಮೇಲೆ ವಿಕ್ರಂ-3 ಎಂಬ ನೌಕೆಯನ್ನು 42 ದಿನಗಳ ನಂತರ ಯಶಸ್ವಿಯಾಗಿ ಇಳಿಸಿದೆ. ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ|| ಎನ್.ವೇಣುಗೋಪಾಲ್ ಹೇಳಿದರು.
ಪಟ್ಟಣದ ಇಂದಿರಾಭವನ್ ವೃತ್ತದಲ್ಲಿ ತಾಲೂಕು ಬಿಜೆಪಿ ಘಟಕದವತಿಯಿಂದ ನಡೆದ ಸಂಭ್ರಾಮಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂತಹ ಸಂದರ್ಭದಲ್ಲಿ ಯಶಸ್ವಿಯಾಗಿ ಕಾರ್ಯಚರಣೆಯನ್ನು ಹಗಲಿರಲು ಶ್ರಮಿಸಿರುವ ಇಸ್ರೋ ವಿಜ್ಞಾನಿಗಳಿಗೆ ಹಾಗೂ ಈ ಕಾರ್ಯಚರಣೆಗೆ ಬೆನ್ನುಲಬಾಗಿ ಕೆಲಸ ಕಾರ್ಯನಿರ್ವಹಿಸಿದಂತ ಪ್ರತಿಯೊಬ್ಬರಿಗೂ ಧ್ಯನವಾದವನ್ನು ತಿಳಿಸಿದರು.
ವಿಶೇಷವಾಗಿ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರವು ವಿಜ್ಞಾನಿಗಳಿಗೆ ನಿರಂತರವಾಗಿ ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿದೆ. ಅವರು ಪ್ರತಿಯೊಂದು ಕಾರ್ಯದಲ್ಲಿ ಕೇಂದ್ರ ಸರ್ಕಾ ಬೆನ್ನುಲಬಾಗಿ ನಿಂತಿದೆ. ಈ ಒಂದು ಸಂದರ್ಭದಲ್ಲಿ ಈ ಕಾರ್ಯಕ್ಕೆ ಸಲಹೆ , ಸಹಕಾರ ನೀಡಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು.
ಈವತ್ತು 140 ಕೋಟಿ ಜನರು ಹೆಮ್ಮೆಪಡುವಂತಹ ದಿನವಾಗಿದೆ. ಈವತ್ತು ಭಾರತ ಪ್ರತಿಯೊಂದು ಕಾರ್ಯದಲ್ಲಿ ತನ್ನದೇ ಆದ ವಿಶೇಷವಾದ ಪ್ರಗತಿಯನ್ನು ವಿಶ್ವಕ್ಕೆ ಕೊಡಿಗೆಯಾಗಿ ನೀಡುತ್ತಿದೆ. ಇಂದು ಬಾಹ್ಯಾಕಾಶದಲ್ಲಿ ತನ್ನದೇ ಆದ ಚಾಪು ಮೂಡಿಸುತ್ತಿದೆ ಎಂದರು. ಶ್ರೀನಿವಾಸಪುರ ಜನತೆ ಪರವಾಗಿ ಯಶ್ವಸಿಯಾಗಿ ನೌಕೆಯನ್ನು ಚಂದ್ರನ ಮೇಲೆ ಇಳಿಸಿರುವ ಪ್ರತಿಯೊಬ್ಬ ವಿಜ್ಞಾನಿಗಳು ಕೃತಜ್ಞತೆ ಸಲ್ಲಿಸಿ, ಸಹಿತಿನ್ನಿಸುವದರ ಮೂಲಕ ಹಾಗು ಘೋಷಣೆಗಳ ಮೂಲಕ ಸಂಭ್ರಮಾಚರಣೆ ಹಮ್ಮಿಕೊಂಡಿದ್ದರು.
ಬಿಜೆಪಿ ಪಕ್ಷದ ಮುಖಂಡರಾದ ಲಕ್ಷ್ಮಣಗೌಡ, ಹೊದಲಿ ನಾರಾಯಣಸ್ವಾಮಿ, ಪಣಸಮಾಕಲಪಲ್ಲಿ ನಾರಾಯಣಸ್ವಾಮಿ, ರಾಮಾಂಜಿ, ಸುರೇಶ್ನಾಯಕ್, ಶ್ರೀನಾಥಬಾಬು, ನಾಗೇದನಹಳ್ಳಿ ಚಂದ್ರಶೇಖರ್ ಇದ್ದರು.