

ಕೊಲಂಬೊ: ಏಷ್ಯಾ ರಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಭಾರತ ಏಷ್ಯಾ ಕಪ್ ಮುಡಿಗೇರಿಸಿಕೊಂಡಿದೆ. ದಾಖಲೆಯ 8ನೇ ಬಾರಿ ಭಾರತ ತಂಡ ಏಷ್ಯಾ ಕಪ್ ಛಾಂಪಿಯನ್ ಆಗಿ ಹೊರಹೊಮ್ಮಿದೆ. ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ
ಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಲಂಕಾ ಕೇವಲ 15.2 ಓವರ್ಗಳಲ್ಲಿ 50 ರನ್ನಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು ದಾಖಲೆಯ ಕಡಿಮೆ ಕೊತ್ತಕ್ಕೆ ಕುಸಿಯಿತು.

ಜೀವನಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ಸಿರಾಜ್ ಏಳು ಓವರ್ಗಳಲ್ಲಿ 21 ರನ್ ತೆತ್ತು ಆರು ವಿಕೆಟ್ ಉಡಾಯಿಸಿದರು. ಒಂದೇ ಓವರ್ನಲ್ಲಿ ಮೇಡನ್ ಸಹಿತ ನಾಲ್ಕುವಿಕೆಟ್ ಶಬಳಿಸಿದ್ದು ವಿಶೇಷವಾಗಿತ್ತು.
ಹಾರ್ದಿಕ್ ಪಾಂಡ್ಯ ಮೂರು ಹಾಗೂ ಜಸ್ಪ್ರೀತ್ ಬೂಮ್ರಾ ಒಂದು ವಿಕೆಟ್ ಉಡಾಯಿಸಿದರು, ಬಳಿಕ ಈ ಗುರಿ ಬೆನ್ನಟ್ಟಿದ ಭಾರತ 6.1 ಓಪರ್ಗಳಲ್ಲಿ ಗೆಲುವಿನ ದಡ ಸೇರಿತು. ಭಾರತ ನೋ ಲಾಸ್ ಜಯ ಗಳಿಸಿತು. ಶುಭಮನ್ ಗಿಲ್ 27 ಹಾಗೂ ಇಶಾನ್ ಕಿಶನ್ 23 ರನ್ ಗಳಿಸಿದರು.

