ಹೋಲಿ ರೋಜರಿ ಶಾಲೆಯಲ್ಲಿ ಸ್ವಾತಂತ್ರ್ಯ ಆಚರಣ ಸಂಭ್ರಮ – ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ/Independence celebration at Holy Rosary School felicitated students who achieved


ಕುಂದಾಪುರ, ಆ.13: ಸ್ಥಳೀಯ ಹೋಲಿ ರೋಜರಿ ಶಾಲೆಯಲ್ಲಿ 76ನೇ ಸ್ವಾತಂತ್ರೊತ್ಸವ ಸಂಭ್ರಮಾಚರಣೆ ಆ.12 ರಂದು ನಡೆಯಿತು. ಈ ಸಂದರ್ಭದಲ್ಲಿ ಶಿಕ್ಷಣದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಹಾಗೂ ಸ್ವಾತಂತ್ರ್ಯ ಆಚರಣೆಯ ಪ್ರಯುಕ್ತ ವಿದ್ಯಾರ್ಥಿಗಳು ದೇಶ ಭಕ್ತಿಯ ನ್ರತ್ಯ ಗಾಯನಗಳ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿಗಳಾದ ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅತೀ ವಂದನೀಯ ಸ್ಟ್ಯಾನಿ ತಾವ್ರೊರವರು ವಹಿಸಿದ್ದು “ವಿದ್ಯಾರ್ಥಿಗಳ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳು ದೇಶವನ್ನು ಪ್ರೀತಿಸಬೇಕು ಒಗ್ಗಟ್ಟಿನಲ್ಲಿ ದೇಶದ ಐಕ್ಯತೆಯು ಅಡಗಿದೆ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು”
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ 2022-23 ರಲ್ಲಿ ನಡೆದ ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತಿರ್ಣರಾದ ಶಾಲೆಯ ಹಮ್ಮೆಯ ಹಳೆ ವಿದ್ಯಾರ್ಥಿ ವಿನಾರ್ಡ್ ಡಿ ಕೋಸ್ತಾರವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿಸಿದ ವಿನಾರ್ಡ್ ಡಿ’ಕೋಸ್ತಾರವರು ಸ್ವಾತಂತ್ರ ಭಾರತದಲ್ಲಿ ವಿದ್ಯಾರ್ಥಿಗಳ ಕರ್ತವ್ಯದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನ ಹಾಗೂ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ನಿರ್ಮಿಸುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಮೌಲ್ಯ ಭರಿತ ಶಿಶಿಕ್ಷಣದ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿ, ಸಮಾಜದಲ್ಲಿ ವಿದ್ಯಾರ್ಥಿಗಳ ಉನ್ನತ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ’ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿಸಿದ ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ಅಶ್ವಿನ್ ಆರಾನ್ನಾ ಮೊದಲ ರೂಪಣಾತ್ಮಕ ಪರೀಕ್ಷೆಯಲ್ಲಿ ಪೂರ್ಣ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮತ್ತು ಪ್ರಸ್ತುತ ವರ್ಷದಲ್ಲಿ ಕನ್ನಡ ಮಾಧ್ಯಮ ಶಾಲೆಯಿಂದ ನಮ್ಮ ಆಂಗ್ಲ ಮಾಧ್ಯಮ ಶಾಲೆಗೆ ದಾಖಲಾಗಿ ಎಲ್ಲಾ ವಿಷಯಗಳಲ್ಲಿ ಪೂರ್ಣ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಿದರು.
ಶಾಲಾ ಮುಖ್ಯೋಪಾದ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ ಉಪಸ್ಥಿತರಿದ್ದು, ವಿದ್ಯಾರ್ಥಿನಿ ವಿನಿಷಾ ಡಿಸೋಜಾ ಸ್ವಾಗತಿಸಿದರು, ವಿದ್ಯಾರ್ಥಿನಿ ಸಿಯೋನಾ ಡಿ’ಸೋಜಾ ವಂದಿಸಿದರು. ವಿದ್ಯಾರ್ಥಿಗಳಾದ ಸಿದ್ದಾರ್ಥ್ ಹಾಗೂ ಸಾವ್ಯ ಎಮಿಲಿಯಾನ್ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು.

Independence celebration at Holy Rosary School felicitated students who achieved


Kundapur, August 13: The 76th Independence Day celebrations were held at the local Holy Rosary School on August 12. On this occasion, to honor the students who have achieved in education and to celebrate independence, the students organized a program of patriotic dance songs. The program was presided over by School Joint Secretaries and Holy Rosary Church Principal Reverend Stani Tavro who “appreciated the program of the students and gave the message to the students that the unity of the country lies in the unity that the children should love the country”.
Vinard D Costa, an alumnus of the school who passed the Indian Chartered Accountant Examination 2022-23, who was the chief guest, was felicitated by the institute. Vinard D’Costar, who received the award, informed the students about the duty of students in independent India, said that Holy Rosary English Medium School builds a solid foundation for student life and the future and develops leadership qualities in students along with valuable education, enabling them to shape the future of students in the society. On the same occasion, assistant priest of Holy Rosary Church Ashwin Aranna, who arrived as a guest, honored the students who got full marks in the first formative examination and the students who got full marks in all subjects from Kannada medium school and got full marks in all subjects from Kannada medium school in the current year and students who achieved in the field of sports.
School Headmistress Sister Teresa Shanti was present, student Vinisha D’Souza welcomed, student Seona D’Souza gave vote of thanks. Students Siddharth and Savya Emilian Martis presented the program.