JANANUDI NEWS NETWORK PHOTOS: STANY DALMEIDA
![](https://jananudi.com/wp-content/uploads/2022/08/cf4c666a-a032-4e37-85e8-c28fec1b8588.jpg)
ಬ್ರಹ್ಮಾವರ: ಗ್ರಾಮ ಹಿತಾ ರಕ್ಷಣಾ ಸಮಿತಿ ಸೂಲ್ಕುದ್ರು ಪಾಂಡೇಶ್ವರ ಹಾಗೂ ಯುನೈಟೆಡ್ ಕ್ರಿಶ್ಚಿಯನ್ ಎಸೋಸಿಯೇಶನ್ ಕರ್ನಾಟಕ, ಸಂತ ಅಂತೋನಿ ದೇವಾಲಯ ಘಟಕ ಸಾಸ್ತಾನ ಇವರ ಜಂಟಿ ಆಶ್ರಯದಲ್ಲಿ 76 ನೇ ಸ್ವಾತಂತ್ರ್ಯೋತ್ಸವ ಅಚರಣೆ ಸೂಲ್ಕೂದ್ರುವಿನಲ್ಲಿ ಸಡಗರದಿಂದ ನಡೆಯಿತು.
ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಒಂದು ಕಿ.ಮೀ ನಷ್ಟು ತ್ರಿರಂಗ ಧ್ವಜದೊಂದಿಗೆ ಜಾಥ ್ನಡೆಯಿತು. ಪಾಂಡೇಶ್ವರ ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ಕಲ್ಪನಾ ದಿನಕರ್ ಧ್ವಜಾರೋಹಣ ನೆರವೇರಿಸಿ “ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲಾ ವೀರರನ್ನು ಸ್ಮರಿಸಿ 76 ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು.
ಸಂಘಟನೆಯ ವತಿಯಿಂದ 75 ವರ್ಷಕ್ಕಿಂತ ಮೇಲ್ಪಟ್ಟ ಗ್ರಾಮದ ಹಿರಿಯರನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿಪಾಂಡೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಿಲ್ವೆಸ್ಟರ್ ಡಿಸೋಜ, ಸದಸ್ಯರಾದ ವೈ.ಬಿ ರಾಘವೇಂದ್ರ, ಯುನೈಟೆಡ್ ಕ್ರಿಶ್ಚಿಯನ್ ಎಸೋಸಿಯೇಶನ್ ಸಂತ ಅಂತೋನಿ ದೇವಾಲಯ ಘಟಕ ಸಾಸ್ತಾನ ಇದರ ಅಧ್ಯಕ್ಷ ವಿಜಯ್ ಲೂವಿಸ್, ಸ್ವ ಸಹಾಯ ಸಂಘದ ಅಧ್ಯಕ್ಷೆ ಮೇಬಲ್ ಡಿಸೋಜ ಉಪಸ್ಥಿತರಿದ್ದರು. ಗ್ರಾಮ ಹಿತಾ ರಕ್ಷಣಾ ಸಮಿತಿಯ ಅಧ್ಯಕ್ಷ ನೆಲ್ಸನ್ ಬಾಂಜಿ ಸ್ವಾಗತಿಸಿದರು. ಜೆಸಿಂತಾ ನೆಲ್ಸನ್ ಬಾಂಜ್ ಕಾರ್ಯಕ್ರಮ ನಿರೂಪಿಸಿದರು. ಪ್ರಭಾಕರ ಪೂಜಾರಿ ಧನ್ಯವಾದಗೈದರು.
ಗ್ರಾಮ ಹಿತಾ ರಕ್ಷಣಾ ಸಮಿತಿ ಸೂಲ್ಕುದ್ರು ಪಾಂಡೇಶ್ವರ ಹಾಗೂ ಯುನೈಟೆಡ್ ಕ್ರಿಶ್ಚಿಯನ್ ಎಸೋಸಿಯೇಶನ್ ಕರ್ನಾಟಕ ಸಂತ ಅಂತೋನಿ ದೇವಾಲಯ ಘಟಕ ಸಾಸ್ತಾನ ಇವರ ಜಂಟಿ ಆಶ್ರಯದಲ್ಲಿ 76 ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ಸೂಲ್ಕೂದ್ರುವಿನಲ್ಲಿ ವಿಜೃಂಭಣೆಯಿಂದ ನಡೆಯಿತು.
![](https://jananudi.com/wp-content/uploads/2022/08/2096e9da-0576-4615-8e8f-f79020f82a87.jpg)
![](https://jananudi.com/wp-content/uploads/2022/08/28253e48-2593-4b0a-9ef7-57389226194b.jpg)
![](https://jananudi.com/wp-content/uploads/2022/08/b2335cd0-cf08-4959-80bc-ae5c5ec9e89c.jpg)
![](https://jananudi.com/wp-content/uploads/2022/08/505c6333-0675-44df-947f-46009abedcb5.jpg)