

‘ಕುಂದಾಪುರ: ಅಕ್ಟೋಬರ್ 7ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ವ್ಯವಹಾರ ಅಧ್ಯಯನ ವಿಭಾಗದ “ಆರಂಭ ” ಎಂಬ 2023-24 ನೇ ಸಾಲಿನ ಕಾರ್ಯಾಚಟುವಟಿಕೆಗಳನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಅವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.
ಸಂಪನ್ಮೂಲ ವ್ಯಕ್ತಿ ಆಗಿ ಆಗಮಿಸಿದ ಮೋಹನ್ ರಾವ್ “ಕೃತಕ ಬುದ್ಧಿಮತ್ತೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಬಗ್ಗೆ ನೀಡಿದರು.
ಚೆಂಡೆ ವಾದನ, ಬಲೂನ್ ಹಾರಾಟ ಬ್ಯಾನರ್ ಪ್ರದರ್ಶನ ಮತ್ತು ಹೂವು ಬಣ್ಣಗಳ ಚದಉರಇಸಉವಇಕಎಯ ಮೂಲಕ ವಿನೂತನ ರೀತಿಯಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಂ.ಗೊಂಡ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಿ.ವಿಜಯ ಕುಮಾರ್ ಕೆ.ಎಂ. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಹಾಗೂ ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥೆ ಅರ್ಚನಾ ಅರವಿಂದ್ ಕುಮಾರ್ , ವಿಭಾಗದ ಉಪನ್ಯಾಸಕರಾದ ಪ್ರಶಾಂತ ಹೆಗ್ಡೆ, ಅಂಜನ್ ಕುಮಾರ್, ಅಶ್ವಿನಿ ಉಪಸ್ಥಿತರಿದ್ದರು .
ವಿದ್ಯಾರ್ಥಿ ಗಳಾದ ಚೈತ್ರ, ಅಲೀಫಾ ಕಾರ್ಯಕ್ರಮ ನಿರೂಪಿಸಿದರು.