ಡಿಸೆಂಬರ್ 29,2024 ರಂದು ಶಿವಮೊಗ್ಗ ಧರ್ಮಕ್ಷೇತ್ರದ ಇತಿಹಾಸದಲ್ಲಿ ಚಿರಸ್ಥಾಯಿಯಾದ ದಿನವಾಗಿದೆ. ವಿಶ್ವಗುರು ಫ್ರಾನ್ಸಿಸ್ ಕರೆನೀಡಿದ “ಜ್ಯೂಬಿಲಿ -2025”ರ ಉದ್ಘಾಟನೆಯು ಪ್ರಾರಂಭಿಕವಿಧಿಗಳು ಸಿಎಸ್ಐ ಚರ್ಚಿನ ಆವರಣದಲ್ಲಿ ನೆರವೇರಿದವು. ಮಹೋತ್ಸವದ ಪ್ರಾರಂಭದಲ್ಲಿ, ವಂ. ಸಂತೋಷ್ ಅಲ್ಮೇಡಾರವರು “ದಯೆಯ ಜಪಸರ”ವನ್ನು ಮುನ್ನಡೆಸಿದರು. ನಂತರ ಜ್ಯೂಬಿಲಿ ವರ್ಷ-2025ರ ಉದ್ಘಾಟನಾ ವಿಧಿಯನ್ನು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಫ್ರಾನ್ಸಿಸ್ ಸೆರಾವೊರವರು ನೆರವೇರಿಸಿದರು. ಪವಿತ್ರ ಗ್ರಂಥದ ವಾಚನದ ನಂತರ ಜ್ಯೂಬಿಲಿ ವರ್ಷದ “ಶಿಲುಬೆಯ” ಕುರಿತು ವಂ.ಸಂತೋಷ್ ಪಿರೇರಾರವರು ಸಂಕ್ಷಿಪ್ತವಾಗಿ ವಿವರಿಸಿದರು. ಪವಿತ್ರ ಶಿಲುಬೆಯನ್ನು ನಂತರ ಸುಂದರವಾಗಿ ಅಲಂಕರಿಸಿದ ವಾಹನದಲ್ಲ್ಲಿರಿಸಿ, ಮೆರವಣಿಗೆಯಲ್ಲಿ ನಗರದ ಮುಖ್ಯ ರಸ್ತೆಯ ಮೂಲಕ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದ ಕಡೆಗೆ ಭಕ್ತಿಯಿಂದ ಮುನ್ನಡೆಸಲಾಯಿತು. ಪವಿತ್ರ ಶಿಲುಬೆಯ ದಿವ್ಯಮೆರವಣಿಗೆಯಲ್ಲಿ ಧರ್ಮಾಧ್ಯಕ್ಷರು. ಗುರುಗಳು, ಧಾರ್ಮಿಕ ಸಹೋದರ ಸಹೋದರಿಯರು ಮತ್ತು ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಭಕ್ತಾಧಿಗಳು ಭಾಗಿಯಾಗಿದ್ದರು. ಬ್ಯಾಂಡ್, ಅಲಂಕಾರಿಕ ಕೊಡೆಗಳು ಮೆರವಣಿಗೆಗೆ ಭಕ್ತಿಯ ಮೆರುಗು ನೀಡಿತು.
ಮೆರವಣಿಗೆಯು ಪವಿತ್ರಹೃದಯ ಪ್ರಧಾನಾಲಯವನ್ನು ತಲುಪಿದ ಬಳಿಕ ಪವಿತ್ರ ಜ್ಯೂಬಿಲಿ ಶಿಲುಬೆಯನ್ನು ಪ್ರಧಾನಾಲಯದ ಅಲಂಕರಿಸಿದ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು. ಯಾಜಕರು ತದನಂತರ ಜ್ಯೂಬಿಲಿಯ ಪೂಜಾಬಟ್ಟೆಯಿಂದ ಶೋಭಿತರಾಗಿ, ಧರ್ಮಾಧ್ಯಕ್ಷರೊಂದಿಗೆ ಸಾಂಭ್ರಮಿಕ ದಿವ್ಯಬಲಿಪೂಜೆಯಲ್ಲಿ ಭಾಗಿಯಾದರು. ಪವಿತ್ರ ನೀರಿನ ಆಶೀರ್ವಾದ ಮತ್ತು ಭಕ್ತರ ಮೇಲೆ ಪವಿತ್ರ ಜಲದಿಂದ ಪ್ರೋಕ್ಷಣೆ ಮಾಡಿ ಜ್ಯೂಬಿಲಿ ಮಹೋತ್ಸವವನ್ನು ಅಜರಾಮರಗೊಳಿಸಿತು.
ಬಲಿಪೂಜೆಯ ಅಂತ್ಯದಲ್ಲಿ ಧರ್ಮಕ್ಷೇತ್ರದ ಆಯೋಗಗಳ ಸಂಘಟಕರಾಗಿರುವ ವಂ. ಡಾ ಸೈಮನ್ ಪಿಂಟೋ ಸಿದ್ಧಪಡಿಸಿದ ಧರ್ಮಕ್ಷೇತ್ರದ ಪಾಲನಾ ಯೋಜನೆ -2025ನ್ನು ಧರ್ಮಾಧ್ಯಕ್ಷರು ಭಕ್ತಾಧಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು. ಜ್ಯೂಬಿಲಿ ಸಮಿತಿಯ ಸಂಚಾಲಕರಾದ ಫಾದರ್ ಕ್ಲಿಫರ್ಡ್ ರೋಶನ್ ಪಿಂಟೋ ದಿನದ ಯಶಸ್ಸಿಗೆ ಕಾರಣರಾದ ಸರ್ವರನ್ನೂ ವಂದಿಸಿದರು. ಧರ್ಮಾಧ್ಯಕ್ಷರ ಆಶೀರ್ವಾದದೊಂದಿಗೆ ದಿವ್ಯಬಲಿಪೂಜೆ ಸುಸಂಪನ್ನವಾಯಿತು. ಈ ಭಕ್ತಿಪ್ರಧಾನ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಯಾಜಕರು, ಧಾರ್ಮಿಕಸಹೋದರ ಸಹೋದರಿಯರು ಮತ್ತು ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.
INAUGURATION OF THE JUBILEE YEAR -2025 AT DIOCESE OF SHIMOGA
Shivamogga, December 30, 2024: On December 29,2024 marked a significant day in the history of the Diocese of Shimoga. On this day, the inauguration of the Jubilee year -2025 took place with pomp & gay.
The inaugural rite took place at St Thomas CSI Church, near Shivappa Naik Circle, Shimoga City. In the beginning, Rev Fr Santhosh Almeida led the Mercy Rosary. Then followed the inaugural rite, presided by Most Rev Dr Francis Serrao S J, Bishop of Shimoga. Rev Fr Santhosh Pereira gave a brief reflection on the Holy Jubilee Cross, after the reading of the holy gospel. Then followed the procession carrying the Holy Jubilee Cross on a beautifully decorated chariot through the main road of the city for around a kilometer, towards the Sacred Heart Cathedral. The chariot was in front, followed by Bishop, Priests, Women Religious and lay faithful. The musical band, colour ful Umbrellas, Altar Servers in their wonderful attire added devotional glamour to the procession.
Once the procession reached the Cathedral, the Solemn Eucharist began, as the clergy were decked with the new Jubilee vestments. The Holy Jubilee Cross was placed in the Sanctuary in a prominent place at the decorated site. Thereafter, there was the blessing of holy water near the Baptismal font and sprinkling of the holy water on the faithful, followed by the singing of Gloria.
After the post communion prayer, THE DIOCEAN PASTORAL PLAN -2025 as well as Regional Pastoral Plan was released, prepared by Very Rev Fr Dr Simon Pinto, the Diocesan Co ordinator of Commissions. At the end, Fr Clifford Roshan Pinto, the Convener of Jubilee Year Committee, proposed the vote of thanks. A large multitude of lay faithful participated with a lot of devotion in this great event. There were 40 priests and an equal number of Women religious.