

ಕೋಟೇಶ್ವರದ ಹವ್ಯಾಸಿ ಚಿತ್ರ ಕಲಾವಿದೆ ಶ್ರೀಮತಿ ಸಪ್ರಸನ್ನ ನಕ್ಕತ್ತಾಯರವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ “ಸಂಚಯ” ಅನಾವರಣಗೊಳ್ಳಲಿದೆ. ಅಕ್ರಾಲಿಕ್ ವರ್ಣದಲ್ಲಿ ಕ್ಯಾನ್ವಾಸ್ ಮೇಲೆ ಪರಿಸರದ ಪ್ರಾಣಿ ಪಕ್ಷಿಗಳ ಬೆಸುಗೆಯ ರೇಖೆ, ನೈಜ್ಯ ಚಿತ್ರಣ, ಮಧುಬನಿ ಮತ್ತು ಗೋಂಡ್ ಶೈಲಿಯಲ್ಲಿ ರೂಪುಗೊಂಡ 100 ಕ್ಕೂ ಅಧಿಕ ಕಲಾಕೃತಿಗಳಲ್ಲಿ ಮೂಡಿ ಬಂದಿದೆ. ದಿನಾಂಕ 27.07.2024 ಶನಿವಾರ ಬೆಳಿಗ್ಗೆ 10.00ಕ್ಕೆ ಕುಂದಾಪುರದ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಮಂಗಳೂರಿನ ಚಿತ್ರ ಕಲಾವಿದ ಮತ್ತು ಪರಿಸರ ತಜ್ಞ ಶ್ರೀ ದಿನೇಶ್ ಹೊಳ್ಳ ಉದ್ಘಾಟಿಸಲಿದ್ದಾರೆ. ಅತಿಥಿ ಅಭ್ಯಾಗತರಾಗಿ ಕುಂದಪ್ರಭ ಪತ್ರಿಕೆಯ ಹಿರಿಯ ಸಂಪಾದಕರಾದ ಶ್ರೀ ಯು. ಎಸ್. ಶೆಣೈ , ಕುಂದಾಪುರದ ಹಿರಿಯ ಶಿಕ್ಷಣ ತಜ್ಞೆ ಚಿತ್ರಾ ಕಾರಂತ್, ಕಲಾವಿದ ಮತ್ತು ತ್ರಿವರ್ಣ ಕಲಾ ಕ್ಲಾಸಸ್ನ ಮಾರ್ಗದರ್ಶಕ ಶ್ರೀ ಹರೀಶ್ ಸಾಗಾ ಉಪಸ್ಥಿತಲಿರುವರು.
ದಿನಾಂಕ 27.07.2024 ಶನಿವಾರ ಮತ್ತು 28.07.2024ನೇ ಆದಿತ್ಯವಾರವಾರದಂದು ಬೆಳಿಗ್ಗೆ 10.00ರಿಂದ ಸಂಜೆ 7.00ರ ತನಕ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶವನ್ನು ಕಲ್ಪಿಸಿಲಾಗಿದೆ.




