JANANUDI.COM NETWORK
ಮೂಡುಬೆಳ್ಳೆ: ವಿದ್ಯಾರ್ಥಿ ಜೀವನವು ಬಹಳ ಪ್ರಾಮುಖ್ಯವಾದದ್ದು .ಕಳೆದೆರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮತ್ತು ತರಬೇತಿ ನೀಡಲು ಶಿಕ್ಷಣ ಸಂಸ್ಥೆಗಳು ಬಹಳ ಪ್ರಯಾಸಪಟ್ಟಿವೆ. ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಕಲಿಕೆಯ ಯಾವುದೇ ಸಮಸ್ಯೆಗಳಿಲ್ಲದೆ ನಡೆಯಲಿ .ಈ ದಿಶೆಯಲ್ಲಿ ಮೂಡುಬೆಳ್ಳೆಯ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜು ಹಮ್ಮಿಕೊಂಡಿರುವ ಬೇಸಿಗೆ ಶಿಬಿರ ಒಂದು ಉತ್ತಮ ಕಾರ್ಯಕ್ರಮವಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿ ತರಬೇತಿ ಮತ್ತು ಮಾರ್ಗದರ್ಶನ ಸಿಗುವಂತಾಗಲಿ “ಎಂದು ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇದರ ನಿವೃತ್ತ ಪ್ರಾಂಶುಪಾಲರಾದ ಡಾ. ಜೆರಾಲ್ಡ್ ಪಿಂಟೊ ಅವರು ಹೇಳಿದರು.
ಅವರು ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜು ಮೂಡುಬೆಳ್ಳೆ ಇದರ ಸೆಂಟರ್ ಫಾರ್ ಎಕ್ಸಲೆನ್ಸ್ ಮೂಲಕ ನಡೆದ ವಿಶೇಷ ಬೇಸಿಗೆ ಶಿಬಿರ ಸ್ಪ್ಲ್ಯಾಶ್ 2022 ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೂಡುಬೆಳ್ಳೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ವಲೇರಿಯನ್ ನೊರೊನಾ, ಆಂಗ್ಲಮಾಧ್ಯಮ ಶಾಲಾ ಪ್ರಾಂಶುಪಾಲರಾದ ಬ್ರದರ್ ಪಿಲಿಪ್ ನೊರೊನಾ,ಲಯನ್ ಎಲಿಯಾಸ್ ಡಿಸೋಜಾ ಹಾಜರಿದ್ದರು. ದೈಹಿಕ ಶಿಕ್ಷಣ ನಿರ್ದೆಶಕರಾದ ಜೋಸೆಫ್ ಡಿಸೋಜ ಸ್ವಾಗತಿಸಿ, ಕು.ಗ್ಲೆನೀಶಾ ವಂದಿಸಿ , ಕು ಪ್ರೇರಣಾ ನಿರೂಪಿಸಿದರು.
ಮೊದಲ ದಿನದ ಶಿಬಿರದಲ್ಲಿ ಡಾ. ಜೆರಾಲ್ಡ್ ಪಿಂಟೊರವರು ವ್ರತ್ತಿ ಮಾರ್ಗದರ್ಶನ ಮತ್ತು ಸುಚಿತ್ ಕೋಟ್ಯಾನ್ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ತರಬೆತಿ ನೀಡಿದರು. ಎರಡನೇ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಬೆಂಕಿ ರಹಿತ ಅಡುಗೆ, ಬಿತ್ತಿ ಪತ್ರ ತಯಾರಿ ಮತ್ತು ಸ್ಂಸ್ಥೆಯ ಹಳೆ ವಿಧ್ಯಾರ್ಥಿ ಗ್ಲೆನ್ ರೆಬೆಲ್ಲೊ ರವರಿಂದ ತರಬೆತಿ ಮತ್ತು ದ್ರೊಣ್ ಪ್ರದರ್ಶನ ನಡೆಯಲಿದೆ.