The 17th Branch of MCC Bank Ltd., was inaugurated at Brahmavara, on Sunday, 3rd March,2024. The branch is located on the ground floor of Sheshagopi Paradise, NH 66, Near Akashvani Circle and Mini Vidhana Soudha, Varamballi, Brahmavara.
The new branch was inaugurated by Mr Yashpal Suvarna, MLA Udupi. Rev. Fr.John Fernandes, Parish Priest, Holy Family Church, Brahmavara, blessed the new premises. Safe Room was inaugurated by V. Rev. Fr M.C. Mathai, Vicar General of S.M.O.S Cathedral, Brahmavara and President of OSC Educational Society, Brahmavara. E-Stamping facility was inaugurated by V.Rev.Fr. Denis Dsa, PRO of Udupi Diocese.
The inaugural programme was presided over by the Chairman, ‘Sahakara Ratna’ Mr Anil Lobo.
The Programme began with a prayer song conducted by the Bank Staff.
In his inaugural addrerss, Mr Yashpal Suvarna, MLA of Udupi Constituency, congratulated the Bank, for opening a new branch at Brahmavara. He said that the co-operative sector has been so easy to prosper due to the stringent rules and regulations of Reserve Bank of India. But, still with the healthy competition and the trust reposed by the people has helped the co-operative sector to blossom in our state.
‘Sahakara Ratna’ Mr Anil Lobo, Chairman of the Bank, in his presidential address informed the gathering that he is happy to be the part of Brahmavara with a branch on the ground floor with parking facility. He said that all the banking services are available at MCC Bank are at par with nationalized and other commercial banks. He said that the bank has been responsive to the needs and aspirations of the customers. The staff members of the Bank have been trained to be more customer centric giving preference to the banking needs of the customers. He called upon the customers to support the bank with a long history of 112 years so that more employment opportunities can be created along with the progress of the bank. He informed the gathering that the Reserve Bank has announced the bank as Financially Sound and Well Managed Bank and the area of operation of the Bank has been extended to entire state. He informed the gathering on the milestone achievement of 1000 crore business turnover of the Bank and that the offers introduced on this occasion. He also informed that new branches at Shimogga, Belthangady and Kavoor would be started before the half year end and that new recruitment would be announced very shortly.
Rev.Fr. John Fernandes, while addressing the gathering, congratulated the management and staff for providing customer friendly ambience. He appreciated the vision and leadership of the chairman, towards the growth of the bank.
Rev.Fr. Vincent Crasta, Secretary, Catholic Educational Society (CESU) of Udupi Diocese, distributed charity funds to the needy. While he congratulated the Bank for its tremendous growth in the last 6 years, he called upon the Bank to render best service to the public in order to uplift the needy and the downtrodden.
V. Rev.Fr Denis D’sa, PRO of Udupi Diocese, who was the guest of honour for the programme, congratulated the management for opening the 17th branch at Brahmavara. As there are numerous challenges in the field of banking, he called upon the staff members to be more vigilant and to give best customer service. He emphasized that the Public Relation and Marketing should be the priority to improve the business of the Bank. He also called upon the citizens of Brahmavara vicinity to make use of the bank.
V.Rev. Fr. M.C. Mathai, Vicar General of S.M.O.S Cathedral, Brahmavara and President of OSC Educational Society, Brahmavara., in his address, wished all well for the Bank. He said that the branch has been located on a beautiful spot and has all ability to attract the business from all sectors of the society. He called upon the bank to concentrate on giving loans to the poor, needy and marginalized. He promised his co-operation and support in this regard.
The achievers of the locality, viz., Mr Daniel, Mr Gopal Kharvi, Mr Ashok Kumar Shetty, Mr Prakash Kahrvi and Mr Kiran Rahul Fernandes, were recognized and honored with memento and floral bouquet.
Mr Nithyananada B.R, President of Varamballi Grama Panchayath and Janab K P Ibrahim, Erstwhile President of Waqf Board, were the guests of honor and they spoke appropriately during the occasion.
The Chairman, Mr Anil Lobo, honored Dr Gerald Pinto (Gerry Niddodi), Director of the Bank, for the literary award 2024 conferred by Konkani Writers Association.
Mr Chandayya Shetty co-owners of premises and Mr Karthik Kiran, Civil Engineer were honoured for providing the premises and the excellent work done at the new premises, respectively.
The staff members of the new branch were introduced to the audience by the General Manager, Mr Sunil Menezes.
The important personalities of the locality were honoured.
The Chairman honoured the chief guests and guest of honour with memento as a token of gratitude. The vice chairman, Mr Jerald Jude D’silva, Mr Andrew D’souza, Herald John Monteiro, David Dsouza, Melwyn Aquinas Vas, Sushanth Saldanha, Mr Anil Patrao, Roshan Dsouza, Felix Dcruz,Alwyn P. Monteiro, Sharmila Menezes, were present on the occasion.
Mr Elroy Kiran Crasto, Director of the Bank, welcomed the gathering. Dr Gerald Pinto, Director of the Bank, proposed vote of thanks and Mr Chandrashekhar Bijadi, compered the programme.
ಎಂ.ಸಿ.ಸಿ ಬ್ಯಾಂಕ್, ಬ್ರಹ್ಮಾವರ ಶಾಖೆಯ ಉದ್ಘಾಟನೆ
ರಾಜ್ಯದ ಅಗ್ರಗಣ್ಯ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಎಂ.ಸಿ.ಸಿ ಬ್ಯಾಂಕಿನ 17 ನೇ ಶಾಖೆಯು ಬ್ರಹ್ಮಾವರದ ಶೇಷಗೋಪಿ ಪ್ಯಾರಡೈಸ್ನ ನೆಲಮಹಡಿ, ಆಕಾಶವಾಣಿ ವೃತ್ತದ ಬಳಿ, ಮಿನಿ ವಿಧಾನಸೌಧದ ಹತ್ತಿರ, ವಾರಂಬಳ್ಳಿಯಲ್ಲಿ ದಿನಾಂಕ 03.03.2024 ರಂದು ಉದ್ಘಾಟನೆಗೊಂಡಿತು.
ಹೊಸ ಶಾಖೆಯ ಉದ್ಘಾಟನೆಯನ್ನು ಉಡುಪಿ ವಿಧಾನಸಭಾ ಸದಸ್ಯರಾದ ಶ್ರೀ ಯಶ್ಪಾಲ್ ಸುವರ್ಣರವರು ನೆರವೇರಿಸಿದರು. ಹೋಲಿ ಫ್ಯಾಮಲಿ ಚರ್ಚ್, ಬ್ರಹ್ಮಾವರ ಇದರ ಧರ್ಮಗುರುಗಳಾದ ವಂದನೀಯ ಜಾನ್ ಫೆರ್ನಾಂಡಿಸ್ರವರು ಆಶೀರ್ವಚನವನ್ನು ನೆರವೇರಿಸಿದರು. ಹೊಸ ಶಾಖೆಯ ಭದ್ರತಾ ಕೊಠಡಿಯನ್ನು ಬ್ರಹ್ಮಾವರ ಎಸ್.ಎಂ.ಒ.ಎಸ್. ಕ್ಯಾಥೆಡ್ರಲ್ ಇದರ ವಿಕಾರ್ ಜನರಲ್ ಮತ್ತು ಒ.ಎಸ್.ಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರೆ|ಫಾ| ಎಂ.ಸಿ. ಮಥಾಯಿಯವರು ಉದ್ಘಾಟಿಸಿದರು. ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ, ರೆ|ಫಾ| ಡೆನಿಸ್ ಡೆಸಾರವರು ಇ-ಸ್ಟಾಂಪಿಂಗ್ ಸೌಲಭ್ಯವನ್ನು ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ “ಸಹಕಾರ ರತ್ನ” ಶ್ರೀ ಅನಿಲ್ ಲೋಬೊರವರು ವಹಿಸಿದ್ದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ, ಶ್ರೀ ಯಶ್ಪಾಲ್ ಸುವರ್ಣರವರು ಬ್ರಹ್ಮಾವರದಲ್ಲಿ ಶಾಖೆಯನ್ನು ತೆರೆದು ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆ ನೀಡಲು ಮುಂದಾಗಿರುವ ಎಂ.ಸಿ.ಸಿ ಬ್ಯಾಂಕಿಗೆ ಶುಭ ಹಾರೈಸಿದರು. ಸಹಕಾರಿ ರಂಗವು ಆರ್.ಬಿ.ಐ ಮಾನದಂಡದೊಂದಿಗೆ ನಡೆಸುವುದು ಹೂವಿನ ಹಾಸಿಗೆಯಲ್ಲ; ಆದರೂ, ಸಾರ್ವಜನಿಕರ ಸಹಕಾರ ಮತ್ತು ಪರಸ್ಪರ ಬೆಂಬಲದೊಂದಿಗೆ ಸಹಕಾರ ರಂಗ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು. ಬ್ಯಾಂಕಿನ ಅಧ್ಯಕ್ಷರಾದ ಶ್ರೀಯುತ ಅನಿಲ್ ಲೋಬೊರವರ ಕಾರ್ಯತತ್ಪರತೆ ಮತ್ತು ಅವರ ಸಾಮಾಜಿಕ ಕಾಳಜಿಯನ್ನು ಮೆಚ್ಚಿದ ಸುವರ್ಣರವರು, ಎಂ.ಸಿ.ಸಿ ಬ್ಯಾಂಕ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಅಧ್ಯಕ್ಷೀಯ ಸ್ಥಾನದಿಂದ ಮಾತಾನಾಡುತ್ತಾ, ಶ್ರೀ ಅನಿಲ್ ಲೋಬೊರವರು ಎಂ.ಸಿ,.ಸಿ ಬ್ಯಾಂಕಿಗೆ ಬ್ರಹ್ಮಾವರದ ಜನತೆ ನೀಡಿದ ಸ್ವಾಗತಕ್ಕೆ ಧನ್ಯವಾದಗಳನ್ನು ನೀಡಿದರು, ಮಾತ್ರವಲ್ಲ, ಎಂ.ಸಿ.ಸಿ ಬ್ಯಾಂಕ್ ಕೇವಲ ಒಂದು ಬ್ಯಾಂಕ್ ಆಗಿರದೆ ತಮ್ಮ ಆಶೋತ್ತರಗಳಿಗೆ ಸ್ಪಂದಿಸುವ ಬ್ಯಾಂಕ್ ಆಗಿರಲಿದೆ; ಉತ್ತಮ ಪರಿಸರದಲ್ಲಿ ಒಳ್ಳೆಯ ಪಾರ್ಕಿಂಗ್ ಹೊಂದಿರುವ ಬ್ರಹ್ಮಾವರ ಶಾಖೆಯು ಗ್ರಾಹಕ ಕೇಂದ್ರಿತ ಉನ್ನತ ಸೇವೆ ನೀಡುವತ್ತ ಮುನ್ನಡೆಯಲಿದೆ. ಪರಿಸರದ ಯಾವುದೇ ಬ್ಯಾಂಕಿಗೆ ಕಮ್ಮಿಯಿಲ್ಲದ ಮತ್ತು ದಕ್ಷತೆಯಿಂದ ಕೂಡಿದ ಎಲ್ಲಾ ಸೇವೆಗಳು ಇಲ್ಲಿ ಲಭ್ಯವಿರುತ್ತದೆ. ಈಗಾಗಲೇ ಬ್ಯಾಂಕ್ 1000 ಕೋಟಿ ವ್ಯವಹಾರದ ಮೈಲಿಗಲ್ಲನ್ನು ದಾಟಿದ್ದು, ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾರ್ವಜನಿಕರ ಬೆಂಬಲ ಅಗತ್ಯ ಎಂದರು. 112 ವರ್ಷಗಳ ಇತಿಹಾಸ ಹೊಂದಿರುವ ಬ್ಯಾಂಕ್ ಸುಧೃಡವಾಗಿದ್ದು ರಿಸರ್ವ್ ಬ್ಯಾಂಕಿನ ಎಲ್ಲಾ ಮಾನದಂಡಗಳನ್ನು ಪಾಲಿಸಿ, ಆರ್ಥಿಕವಾಗಿ ಸುಧೃಡ ಮತ್ತು ಉತ್ತಮವಾಗಿ ನಿರ್ವಹಿಸುವ ಬ್ಯಾಂಕ್ ಎಂದು ವರ್ಗೀಕೃತವಾಗಿದೆ. ಬ್ಯಾಂಕ್ ಸದ್ಯದಲ್ಲಿಯೇ ಬೆಳ್ತಂಗಡಿ, ಕಾವೂರು ಹಾಗೂ ಶಿವಮೊಗ್ಗ ಪರಿಸರದಲ್ಲಿ ಹೊಸ ಶಾಖೆಗಳನ್ನು ತೆರೆಯಲಿದೆ ಹಾಗೂ ಬ್ಯಾಂಕಿನ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುವುದು ಎಂದರು.
ಇದೇ ಸಂಧರ್ಭದಲ್ಲಿ ಮಾತಾನಾಡಿದ ಹೋಲಿ ಫ್ಯಾಮಲಿ ಚರ್ಚ್, ಬ್ರಹ್ಮಾವರ ಇದರ ಧರ್ಮಗುರುಗಳಾದ ವಂದನೀಯ ಜಾನ್ ಫೆರ್ನಾಂಡಿಸ್ರವರು, ಬ್ರಹ್ಮಾವರ ಪರಿಸರದಲ್ಲಿ ಶಾಖೆಯ ಪ್ರಗತಿಯಾಗಲಿ ಎಂದು ಆಶಿಸಿದರು, ಮಾತ್ರವಲ್ಲ, ತಮ್ಮ ಪೂರ್ಣ ಸಹಕಾರ ಮತ್ತು ಬೆಂಬಲದ ಭರವಸೆ ನೀಡಿದರು.
ಕಥೊಲಿಕ್ ಶಿಕ್ಷಣ ಸಂಸ್ಥೆ, ಉಡುಪಿ (ಸೆಸು) ಇದರ ಕಾರ್ಯದರ್ಶಿಗಳಾದ ರೆ|ಫಾ|ವಿನ್ಸೆಂಟ್ ಕ್ರಾಸ್ತಾರವರು ಬ್ಯಾಂಕಿನ ವತಿಯಿಂದ ಅಬಲರಿಗೆ ಮತ್ತು ಅಶಕ್ತರಿಗೆ ದಾನವನ್ನು ಪ್ರಧಾನ ಮಾಡಿದರು.
ಮುಖ್ಯ ಅತಿಥಿ ಸ್ಥಾನದಿಂದ ಮಾತಾನಾಡಿದ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ, ರೆ|ಫಾ| ಡೆನಿಸ್ ಡೆಸಾರವರು, ಬ್ರಹ್ಮಾವರದಲ್ಲಿ ಬ್ಯಾಂಕಿನ 17ನೇ ಶಾಖೆಯ ಉದ್ಘಾಟನೆಯನ್ನು ಕೊಂಡಾಡಿದರು. ಮುಂದಿನ ದಿನಗಳಲ್ಲಿ ಬ್ಯಾಂಕ್ ಉತ್ತಮವಾದ ಸೇವೆಯನ್ನು ನೀಡಿ ಇನ್ನಷ್ಟು ಬೆಳವಣಿಗೆಯನ್ನು ಕಾಣಲಿ ಎಂದು ಆಶಿಸಿದರು.
ಬ್ರಹ್ಮಾವರ ಎಸ್.ಎಂ.ಒ.ಎಸ್. ಕ್ಯಾಥೆಡ್ರಲ್ ಇದರ ವಿಕಾರ್ ಜನರಲ್ ಮತ್ತು ಒ.ಎಸ್.ಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರೆ|ಫಾ| ಎಂ.ಸಿ. ಮಥಾಯಿಯವರು ಎಂ.ಸಿ.ಸಿ ಬ್ಯಾಂಕಿಗೆ ಒಳಿತನ್ನು ಆಶಿಸಿದರು. ಎಂ.ಸಿ.ಸಿ ಬ್ಯಾಂಕಿನ ಸಾರ್ವಜನಿಕ ಕಾಳಜಿಯನ್ನು ಕೊಂಡಾಡಿದ ಅವರು ಬ್ರಹ್ಮಾವರದ ಪರಿಸರದ ನಿವಾಸಿಗಳು ಎಂ.ಸಿ.ಸಿ ಬ್ಯಾಂಕಿಗೆ ಎಲ್ಲಾ ಸಹಕಾರವನ್ನು ನೀಡಬೇಕೆಂದು ಕೋರಿದರು.
ಬ್ರಹ್ಮಾವರದ ಪರಿಸರದ ಸಾಧಕರನ್ನು ಇದೇ ಸಂಧರ್ಭದಲ್ಲಿ ಹೂಗುಚ್ಛ ಮತ್ತು ಸ್ಮರಣಿಕೆ ನೀಡಿ ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.
ವಾರಂಬಳ್ಳಿ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀ ನಿತ್ಯಾನಂದ ಬಿ.ಆರ್ ಮತ್ತು ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ಇದರ ನಿಕಟಪೂರ್ವ ಅಧ್ಯಕ್ಷರಾದ ಜನಾಬ್ ಕೆ.ಪಿ. ಇಬ್ರಾಹಿಂ, ಇವರು ಗೌರವ ಅತಿಥಿಗಳಾಗಿ ಭಾಗವಹಿಸಿ ಸಂಧರ್ಬೋಚಿತವಾಗಿ ಮಾತಾನಾಡಿದರು.
ಕೊಂಕಣಿ ಬರಹಗಾರರ ಸಂಘ, ಇವರು ಪ್ರಧಾನ ಮಾಡಿರುವ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿರುವ ಬ್ಯಾಂಕಿನ ನಿರ್ದೇಶಕರಾದ ಡಾ.ಜೆರಾಲ್ಡ್ ಪಿಂಟೊ (ಜೆರಿ, ನಿಡ್ಡೋಡಿ) ಇವರನ್ನು ಇದೇ ಸಂಧರ್ಭದಲ್ಲಿ ಬ್ಯಾಂಕಿನ ವತಿಯಿಂದ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊರವರು ಫಲಪುಷ್ಪಾಧಿಗಳನ್ನು ನೀಡಿ ಸನ್ಮಾನಿಸಿದರು.
ಹೊಸ ಶಾಖಾ ಕಟ್ಟಡದ ಮಾಲೀಕರಾದ ಶ್ರೀ ಚಂದಯ್ಯ ಶೆಟ್ಟಿ ಮತ್ತು ಕಟ್ಟಡದ ವಿನ್ಯಾಸವನ್ನು ನೆರವೇರಿಸಿದ ಸಿವಿಲ್ ಇಂಜಿನಿಯರ್, ಶ್ರೀ ಕಾರ್ತಿಕ್ ಕಿರಣ್ ಇವರನ್ನು ಸನ್ಮಾನಿಸಲಾಯಿತು.
ಬ್ರಹ್ಮಾವರ ಶಾಖೆಯ ಸಿಬ್ಬಂದಿಗಳನ್ನು ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸುನಿಲ್ ಮಿನೇಜಸ್ರವರು ಪರಿಚಯಿಸಿದರು. ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ನೀಡಲು ಮತ್ತು ಬ್ರಹ್ಮಾವರ ಪರಿಸರದ ನಿವಾಸಿಗಳಿಗೆ ಬ್ಯಾಂಕಿನ ಸೇವೆಗಳ ಬಗ್ಗೆ ಮಾಹಿತಿ ನೀಡಲು ಸಹಕರಿಸಿದ ಸರ್ವರನ್ನು ಇದೇ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ಉಪಸ್ಥಿತರಿದ್ದ ಗೌರವಾನ್ವಿತ ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಶ್ರೀ ಆಂಡ್ರ್ಯು ಡಿ’ಸೋಜಾ, ಶ್ರೀ ಡೇವಿಡ್ ಡಿ’ಸೋಜಾ, ಶ್ರೀ ಹೆರಾಲ್ಡ್ ಮೊಂತೇರೊ, ಶ್ರೀ ಅನಿಲ್ ಪತ್ರಾವೊ, ಶ್ರೀ ಮೆಲ್ವಿನ್ ವಾಸ್, ಶ್ರೀ ವಿನ್ಸೆಂಟ್ ಲಸ್ರಾದೊ, ವೃತ್ತಿಪರ ನಿರ್ದೇಶಕರಾದ ಶ್ರೀ ಸಿ.ಜಿ.ಪಿಂಟೊ, ಶ್ರೀ ಸುಶಾಂತ್ ಸಲ್ಡಾನ್ಹಾ ಶ್ರೀ ಫೆಲಿಕ್ಸ್ ಡಿಕ್ರುಜ್, ಆಲ್ವಿನ್ ಮೊಂತೋರೊ, ಶರ್ಮಿಳಾ ಮಿನೇಜಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ನಿರ್ದೇಶಕರಾದ ಶ್ರೀ ಎಲ್ರೊಯ್ ಕಿರಣ್ ಕ್ರಾಸ್ಟೊರವರು ಸ್ವಾಗತಿಸಿದರು. ನಿರ್ದೇಶಕರಾದ ಡಾ| ಜೆರಾಲ್ಡ್ ಪಿಂಟೊ ವಂದಿಸಿ, ಶ್ರೀ ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು.