ಶಿರ್ವ : ” ರಾಷ್ಟ್ರೀಯ ಸೇವಾ ಯೋಜನೆಯು ವಿಧ್ಯಾರ್ಥಿಗಳಲ್ಲಿ ಸೇವೆಯ ಮೂಲಕ ಸಮಾಜದ ಬಗ್ಗೆ ಅರಿವು ಮೂಡಿಸುತ್ತದೆ. ಎನ್ ಎಸ್ ಎಸ್ ಮೂಲಕ ಸ್ವಯಂ ಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ.ಇಲ್ಲಿ ವಿಧ್ಯಾರ್ಥಿಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆ ಸಲ್ಲಿಸುತ್ತಾರೆ. ಇದು ಮುಂದೆ ಸಾರ್ಥಕ ಜೀವನ ನಡೆಸಲು ಪ್ರೆರಣೆ ಯಾಗುತ್ತದೆ” ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆಯ ಮಂಗಳೂರು ವಿಭಾಗದ ಸಂಯೋಜನಾಧಿಕಾರಿ ಸವಿತಾ ಎರ್ಮಾಳ್ ಹೇಳಿದರು. ಅವರು ಶ್ರೀರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನಾ ಕಾರ್ಯಕ್ರಮ ಮತ್ತು ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ವಂದನೀಯ ಗುರು ಡಾ. ಲೆಸ್ಲಿ ಡಿಸೋಜ ವಹಿಸಿದ್ದು, ಪ್ರಾಂಶುಪಾಲರಾದ ಜಯಶಂಕರ ಕೆ ಸ್ವಾಗತಿಸಿ ಕುಮಾರಿ ಸಮೀಕ್ಷಾ ಅತಿಥಿಗಳ ಪರಿಚಯ ಮಾಡಿದರು. ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಸಮೀಕ್ಷಾ ಅತಿಥಿಗಳ ಪರಿಚಯ ಮಾಡಿ, ಎನ್ಎಸ್ಎಸ್ ಯೋಜನಾಧಿಕಾರಿ ಶ್ರೀಮತಿ ಮರಿಯ ಜೆಸಿಂತಾ ಫುರ್ಟಾಡೊ ವಂದಿದಸಿದರು ,ದೀಕ್ಷಿತ್ ಆಚಾರ್ಯ ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಲೇಜು ಪರಿಸರದಲ್ಲಿ 25 ಔಷಧೀಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಮೇಲ್ವಿನ್ ಅರಾನ್ಹಾ ,ಎನ್ಎಸ್ಎಸ್ ಸ್ವಯಂಸೇವಕರು , ಉಪನ್ಯಾಸಕ ಮತ್ತು ಶಿಕ್ಷಕೇತರ ಬಂಧುಗಳು ಹಾಜರಿದ್ದರು.