

ಶ್ರೀನಿವಾಸಪುರ : ಶಾಲೆಗೆ ಬರುವ ಆಹಾರ ಪಡಿತರಗಳ ಗುಣಮಟ್ಟ ಪರಿಶೀಲಿಸಿ , ಗುಣಮಟ್ಟ ಖಾತರಿ ಪಡಿಸಕೊಂಡು ಆಹಾರ ಪದಾರ್ಥಗಳು, ತರಕಾರಿಗಳನ್ನು ಬಳಸಿಕೊಳ್ಳುವ ಮುನ್ನ ಅವುಗಳ ಸ್ವಚ್ಚೆತೆಗೆ ಮಹತ್ವ ನೀಡಿ. ನೀರನ್ನು ಬಳಸುವಾಗ ಸ್ವಚ್ಚತೆ ಕಾಪಾಡಬೇಕು.
ಗುಣಮಟ್ಟ ಪರಿಶೀಲಿಸಿದ ಬಳಿಕವೇ ಬಳಸಬೇಕು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಟಿ.ಆರ್.ಸುಲೋಚನ ಸಲಹೆ ನೀಡಿದರು.ತಾಲೂಕಿನ ತಾಡಿಗೋಳ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಸೋಮವಾರ ಅಡುಗೆ ಕೋಣೆ ಹಾಗು ಬಾಲಕೀಯರ, ಬಾಲಕರ ಶೌಚಾಲಯಗಳ ಉದ್ಗಾಟಿಸಿ ಮಾತನಾಡಿದರು. ಅಡಿಗೆ ಮಾಡುವ ಸ್ಥಳವು ಸ್ವಚ್ಚವಾಗಿರಬೇಕು . ತಿನ್ನುವಂತಹ ಆಹಾರವು ಸ್ವಚ್ಚವಾಗಿರಬೇಕು ಆಗ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ನಾವು ಸ್ವಚ್ಚವಾದ ಪೌಷ್ಟಿಕ ಆಹಾರ ತಿನ್ನುವುದರಿಂದ ದೇಹ ಪುಷ್ಟಿಯಾಗಿರಲು ಸಾಧ್ಯವಾಗುತ್ತದೆ. ಒಳ್ಳೆಯ ತರಕಾರಿ , ಬೇಳೆಯನ್ನು ಸ್ವಚ್ಚ ಮಾಡಿ ಉಪಯೋಗಿಸಬೇಕು.
ಮುಖ್ಯ ಶಿಕ್ಷಕಿ ಎ.ಸಿ.ಸುನಂದಮ್ಮ ಮಾತನಾಡಿ
ಗ್ರಾ.ಪಂ ಅಧ್ಯಕ್ಷೆ ಗೀತಾ ಶ್ರೀನಿವಾಸ್ ಮಾತನಾಡಿ ಪಕ್ಷಾತೀತವಾಗಿ ಗ್ರಾಮಗಳ ಅಭಿವೃದ್ಧಿಗೆ ನರೇಗಾ ಕಾರ್ಯಯೋಜನೆಯನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಕಳೆದ ಗಣರಾಜ್ಯೋತ್ಸವ ದಿನ ಶಾಲೆ ಮುಖ್ಯ ಶಿಕ್ಷಕಿ ರವರು ಮನವಿಯಂತೆ ಇಂದು ಅಡಿಗೆ ಕೋಣೆ ಹಾಗು ಬಾಲಕರ, ಬಾಲಕೀಯರ ಪ್ರತ್ಯೇಕ ಶೌಚಾಲಯವನ್ನು ನಿರ್ಮಿಸಿಕೊಡಲು ಮನವಿ ಮಾಡಿದ್ದರು ಅದರಂತೆ ಗ್ರಾ.ಪಂ ಯಿಂದ ಮಾಡಕೊಡಲಾಗಿದೆ ಮುಂದಿನ ದಿನಗಳಲ್ಲಿ ಶಾಲೆಗೆ ಒಂದು ಆಟದ ಮೈದಾನವನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ನರೇಗಾ ಯೋಜನೆಯ ಮೂಲಕ ಅಡುಗೆ ಕೋಣೆ ಶೌಚಾಲಯವನ್ನು ೯.೫೦ ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪಿಡಿಒ ಗೋಪಾಲರೆಡ್ಡಿ, ಗ್ರಾ.ಪಂ.ಉಪಾಧ್ಯಕ್ಷೆ ಲಕ್ಷಿö್ಮÃದೇವಮ್ಮ, ಸದಸ್ಯೆ ಸವಿತಾನಾಗೇಶ್, ಸಿಆರ್ಪಿ ಕೆ.ವಿ.ಶ್ರೀನಿವಾಸರೆಡ್ಡಿ, ಹಾಗು ಮುಖಂಡರಾದ ದಿನೇಶ್, ಮರಿಪಲ್ಲಿ ವೆಂಕಟರಮಣ, ಕಪ್ಪಲ್ಲಿ ಶ್ರೀನಿವಾಸ್, ನಾರಾಯಣಸ್ವಾಮಿ, ಕರವಸೂಲಿಗಾರ ಗೋವಿಂದಪ್ಪ, ಶಿಕ್ಷಕ ಸಿಬ್ಬಂದಿ , ಗ್ರಾಮಸ್ಥರು ಇದ್ದರು.