

ಜನ ಸಾಮಾನ್ಯರು ತಾಲೂಕು ಕಛೇರಿಯಲ್ಲಿ ನೀಡುವ ಅರ್ಜಿಗಳನ್ನು ಕರ್ನಾಟಕ-1 ಎನ್ನುವ ಸರಕಾರದ ನಾಗರಿಕ ಸೇವಾ ಕೇಂದ್ರದಲ್ಲಿ ಅನುಕೂಲ ಪಡೆಯುವಂತಹ ಯೋಜನೆಯನ್ನು ಕುಂದಾಪುರದ ಮುಖ್ಯ ರಸ್ತೆಯಲ್ಲಿ ಕಛೇರಿ ಉದ್ಘಾಟಿಸುವ ಮೂಲಕ ಆರಂಭಿಸಲಾಗಿದೆ.
ಕುಂದಾಪುರದ ಯೂನಿಯನ್ ಬ್ಯಾಂಕ್ ಬಳಿ, ಪೀಟರ್ ಇಂಗ್ಲೆಂಡ್ ಶೋರೂಮ್ ಎದುರು ಇರುವ ಕಟ್ಟಡದಲ್ಲಿ ಪುರಸಭಾ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ದೇವಕಿ ಸಣ್ಣಯ್ಯ ಕರ್ನಾಟಕ 1 ಕೇಂದ್ರ ಉದ್ಘಾಟಿಸಿದರು.
ಪುರಸಭಾ ಅಧಿಕಾರಿ ಅಂಜಲಿ, ಗ್ರಾಮ ಆಡಳಿತ ಅಧಿಕಾರಿ ಆನಂದ ಡಿ. ಎಂ., ಪುರಸಭಾ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ ಕೆ. ಮೋಹನದಾಸ ಶೆಣೈ ಮತ್ತು ಯು. ಎಸ್. ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನಂದಾದೀಪ ಬೆಳಗಿಸಿದರು.
ನಿವೃತ್ತ ಬ್ಯಾಂಕ್ ಮೇನೇಜರ್ ಗಣೇಶ್ ಆಚಾರ್ಯ ಶುಭಾಶಂಸನೆ ಮಾಡಿದರು. ಇದು ಸಾರ್ವಜನಿಕ ಉಪಯೋಗಿ ಯೋಜನೆಯಾಗಿದ್ದು ಜನರು ಇದರ ಸದುಪಯೋಗ ಪಡೆಯಬೇಕು ಎಂದು ದೇವಕಿ ಸಣ್ಣಯ್ಯ ಹೇಳಿದರು. ಗ್ರಾಮ ಆಡಳಿತ ಅಧಿಕಾರಿ ಆನಂದ್ ಮಾತನಾಡಿ, “ಕರ್ನಾಟಕ ನಂ. 1 ವ್ಯವಸ್ಥೆಯ ಬಗ್ಗೆ ವಿವರಿಸಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಇಂತಹ ಸೌಲಭ್ಯ ರೂಪಿಸಲಾಗಿದ್ದು ಪುರಸಭಾ ವ್ಯಾಪ್ತಿಯೊಳಗಿನವರಿಗೆ ಕುಂದಾಪುರದ ಕಛೇರಿ ಅನುಕೂಲಕರವಾಗಿದೆ” ಎಂದರು.
ಕೇಂದ್ರದ ನಿರ್ವಾಹಕರಾದ ತೇಜಸ್ವಿನಿ ಕಾಮತ್ ಸ್ವಾಗತಿಸಿದರು. ಸಂತೋಷ್ ಕಾಮತ್ ವಂದಿಸಿದರು.