

ಕುಂದಾಪುರ: ಜು.೧೯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ಮತ್ತು ಸರಕಾರಿ ಜೂನಿಯರ್ ಕಾಲೇಜು ಕುಂದಾಪುರ ಇವರ ಸಹಯೋಗದೊಂದಿಗೆ ಜೂನಿಯರ್ ರೆಡ್ ಕ್ರಾಸ್ ಘಟಕ ವನ್ನು ರೆಡ್ ಕ್ರಾಸ್ ಸಭಾಪತಿ ಎಸ್. ಜಯಕರ ಶೆಟ್ಟಿ ಉದ್ಘಾಟಿಸಿದರು ಮತ್ತು ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಜೂನಿಯರ್ ರೆಡ್ ಕ್ರಾಸ್ ಸಂಯೋಜಕರಾದ ದಿನಕರ ಅರ್ ಶೆಟ್ಟಿ ಇವರು ಪ್ರತಿಜ್ಞೆಯನ್ನು ಭೋದಿಸಿದರು. ಪ್ರಭಾರ ಪ್ರಾಂಶುಪಾಲರಾದ ಭುಜಂಗ ಶೆಟ್ಟಿ ಅದ್ಯಕ್ಷೀಯ ಭಾಷಣ ಮಾಡಿದರು. ಸಭಾಪತಿ ಜಯಕರ ಶೆಟ್ಟಿ ಇವರು ಪ್ರಾಂಶುಪಾಲರಿಗೆ ಫಸ್ಟ್ ಎಐ್ಡ ಕಿಟ್ ಹಸ್ತಾಂತರಿಸಿದರು ಮತ್ತು ಜೂನಿಯರ್ ರೆಡ್ ಕ್ರಾಸ್ ಅದ್ಯಕ್ಷ ಮತ್ತು ಕಾರ್ಯದರ್ಶಿ ಗೆ ಪಿನ್ ತೊಡಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು. ಅಧ್ಯಾಪಕರಾದ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಸಂಚಾಲಕರಾದ ಶಂಕರ್ ನಾಯ್ಕ್ ವಂದಿಸಿದರು.

