ದಿನಾಂಕ : 18/06/2024 ರಂದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಸಮಾರಂಭವು ಜರುಗಿತು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನದ ಮೂಲಕ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು.
ಶಾಲಾ ಸಂಚಾಲಕರು ಹಾಗು ಸ್ಥಳೀಯ ಚರ್ಚಿನ ಪ್ರಧಾನ ಧರ್ಮಗುರುಗಳೂ ಆದ ಅತೀ ವಂದನೀಯ ಪೌಲ್ ರೇಗೋರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿ. ರಾಘವೇಂದ್ರಚರಣ್ ನಾವಡ ವಕೀಲರು ಕುಂದಾಪುರ ಹಾಗು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ.ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಮುಖೋಪಾಧ್ಯಾಯಿನಿ, ಮುಖ್ಯ ಅತಿಥಿಗಳು ಹಾಗು ಹೊಸದಾಗಿ ಆಯ್ಕೆಆದ ವಿದ್ಯಾರ್ಥಿ ನಾಯಕಿ ಹಾಗು ಉಪನಾಯಕರೊಡಗೂಡಿ ಶಾಲಾ ಸಂಚಾಲಕರು ಹಾಗು ಇಂದಿನ ಈ ಸಭೆಯ ಅಧ್ಯಕ್ಷರಾದ ಅತೀ ವಂದನೀಯಗುರು ಪೌಲ್ರೇಗೋರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಮತ್ತು ಶಾಲಾ ಸಂಚಾಲಕರು ವಿದ್ಯಾರ್ಥಿ ಸಂಸತ್ತಿನಎಲ್ಲಾ ಪದಾಧಿಕಾರಿಗಳಿಗೆ ಪದನಾಮದ ಪದಕವನ್ನು ತೊಡಿಸಿ ಶಾಲಾ ಸಂಸತ್ತು ಬಹಳ ಸುಂದರವಾಗಿ ಉದ್ಘಾಟನೆಗೊಂಡಿತು. ಶಾಲೆಯ ಶಿಸ್ತು ಸುವ್ಯವಸ್ಥೆಗೆ ವಿದ್ಯಾರ್ಥಿ ಸಂಸತ್ತು ಅತಿ ಅವಶ್ಯಕ. ಒಬ್ಬ ನಿಜವಾದನಾಯಕನೆಂದರೆ ದಾರಿಯನ್ನು ತಿಳಿದಿರುವವನು ಹಾಗು ಇತರರಿಗೆ ಮಾರ್ಗದರ್ಶಕನಾಗಿ ಮುನ್ನಡೆಸುವವನು ಆಗಿರುತ್ತಾನೆಎಂಬುವುದಾಗಿವಿದ್ಯಾರ್ಥಿ ನಾಯಕಿ ಹಾಗು ಉಪನಾಯಕನಿಗೆ ಕಿವಿ ಮಾತನ್ನು ಹೇಳಿ ಶಾಲಾ ಸಂಚಾಲಕರು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿರುವ ರೋಟೆರಿಯನ್ ಬಿ. ರಾಘವೇಂದ್ರಚರಣ್ ನಾವಡರವರು ಶಾಲಾ ಸಂಸತ್ತಿನ ಪದಾಧಿಕಾರಿಗಳಿಗೆ ಪದನಾಮದ ಪಟ್ಟಿಯನ್ನು ಹಾಕಿ ಶುಭ ಹಾರೈಸಿ, ಬಹಳ ಸುಂದರವಾಗಿಕಾರ್ಯಕ್ರಮವನ್ನುಆಯೋಜಿಸಲಾಗಿದೆ, ಇಂದಿನ ಮಕ್ಕಳು ಮುಂದಿನ ದೇಶದ ಪ್ರಜೆಗಳಾಗಿರುವುದರಿಂದ ವಿದ್ಯಾರ್ಥಿ ದೆಸೆಯಲ್ಲೆ ಸಂಸತ್ತಿನ ಜ್ಞಾನಇರಬೇಕು ಎಂಬುದಾಗಿ ಹೇಳಿ ಶಾಲಾ ಸಂಸತ್ತಿಗೆ ಶುಭ ಹರೈಸಿದರು.
ವಿದ್ಯಾರ್ಥಿಗಳಾದ ಚಿರಾಗ್ 7ನೇ ತರಗತಿ ಹಾಗು ರಿಶೆಲ್ ರೋಡ್ರಿಗಸ್ರವರು ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕಿ ರೆನಿಷಾ ಡಿ’ಅಲ್ಮೇಡಾರವರು ಸ್ವಾಗತಿಸಿದರು. ವಿದ್ಯಾರ್ಥಿ ನಾಯಕಿ ಅಂಜಲಿ 10ನೇ ತರಗತಿ ಇವರು ವಂದಿಸಿದರು ಶಿಕ್ಷಕಿಯರಾದ ಶ್ರೀಮತಿ ಮಮತಾ ಮತ್ತು ಶ್ರೀಮತಿ ನಿಖಿತಾ ಶೆಟ್ಟಿಯವರು ಮಕ್ಕಳಿಗೆ ಮಾರ್ಗದರ್ಶನ ನೀಡಿಕಾರ್ಯಕ್ರಮ ಆಯೋಜಿಸಿದ್ದು. ಶಾಲಾ ವಿದ್ಯಾರ್ಥಿಗಳು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.