ಕುಂದಾಪುರ, ಮೇ.30: ಕುಂದಾಪುರ ಪ್ರಸಿದ್ದ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನವಾಗಿ ಅಳವಡಿಸಿದ ಆಧುನಿಕ ತಂತ್ರಜ್ಞಾನದ ಜನರೇಟರನ್ನು ಶಾಲೆಯ ಜಂಟಿ ಕಾರ್ಯದರ್ಶಿ, ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ತೆರೆಜಾ ಶಾಂತಿ ಉದ್ಘಾಟಿಸಿದರು. ವಂ|ಸ್ಟ್ಯಾನಿ ತಾವ್ರೊ ಆಶಿರ್ವವಚನ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ, ಶಾಲಾ ಸಂಯೋಜಕರಾದ ಮಾರ್ಗರೇಟ್ ಪಿಕಾರ್ಡೊ, ಶಾಲೆಯ ಸಲಹ ಸಮಿತಿಯ ಸದಸ್ಯರಾದ ವಿನೋದ್ ಕ್ರಾಸ್ಟೊ, ಡಾ.ಸೋನಿ ಡಿಕೋಸ್ತಾ, ಸಂತ ಮೇರಿಸ್ ಸಮೂಹ ಶಿಕ್ಷಣ ಶಿಕ್ಷಣ ಸಂಸ್ಥೆಯ ಎಲ್ಲಾ ಮುಖ್ಯೋಪಾಧ್ಯಾಯರು, ರೋಜರಿ ಶಾಲೆಯ ಶಿಕ್ಷಕ -ಶಿಕ್ಷಕೇತರ ಸಿಬಂದಿ ಉಪಸ್ಥಿತರಿದ್ದರು.
ನಂತರ ನೆಡದ ಅಧ್ಯಾಪಕರು ಮತ್ತು ಜಂಟಿ ಕಾರ್ಯದರ್ಶಿ ನಡುವೆ ವಿಚಾರ ವಿನಿಮಯ ನಡೆಯಿತು, ಶಾಲಾ ಅಭಿವ್ರದ್ದಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು, ಇದನ್ನು ಜಂಟಿ ಕಾರ್ಯದರ್ಶಿ ವಂ|ಸ್ಟ್ಯಾನಿ ತಾವ್ರೊ ನಡೆಸಿಕೊಟ್ಟರು. ಮುಖ್ಯ ಶಿಕ್ಷಕಿ ಭಗಿನಿ ತೆರೆಜಾ ಶಾಂತಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ಶಾಲೆಗೆ ಸಂಯೋಜಕರಾಗಿ ನಿಯುಕ್ತರಾದ ಮಾರ್ಗರೇಟ್ ಪಿಕಾರ್ಡೊ ಹಾಗೇ ನೂತನವಾಗಿ ಆಯ್ಕೆಯಾದ ಶಿಕ್ಷಕಿಯರಾದ ಭಗಿನಿ ಜುಲಿಯೆಟ್ (ಆ.ಕಾ.) ರೇನಿಷಾ ಡಿಆಲ್ಮೇಡಾ ಮತ್ತು ಸಿಲ್ವಿಯಾ ಫೆರ್ನಾಂಡಿಸ್ ಇವರನ್ನು ಪರಿಚಯಿಸಲಾಯಿತು. ಶಿಕ್ಷಕಿ ಸೆಲಿನ್ ಡಿಸೋಜಾ ಸ್ವಾಗತಿಸಿದರು, ಶಿಕ್ಷಕಿ ನೀತಾ ಡಿಸೋಜಾ ವಂದಿಸಿದರು, ಶಿಕ್ಷಕಿ ನಿಖಿತಾ ಶೆಟ್ಟಿ ನಿರೂಪಿಸಿದರು.