ಮಣಿಪಾಲಃ ನ.೧೬ಃ ತಾಳ್ಮೆಯೊಂದಿಗೆ ಕಲೆಯಲ್ಲಿ ನಿರತರಾದಾಗ ಪರಿಪಕ್ವತೆಯುಳ್ಳಂತಹ ಕಲಾಕೃತಿಯನ್ನು ರಚಿಸಲು ಸಾಧ್ಯ ಎಂದು ಮಂಗಳೂರಿನ ಹಿರಿಯ ಕಲಾವಿದರಾದ ಶ್ರೀ ಗಣೇಶ ಸೋಮಾಯಾಜಿಯವರು ಮಣಿಪಾಲ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಪರಂಪರಾ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಹೆ ಯ ನಿವೃತ್ತ ಉಪನ್ಯಾಸಕರಾದ ಶ್ರೀ ಕೆ. ಎಸ್. ಶೇರಿಗಾರ್, ಪ್ರೊ. ಮಣಿಪಾಲ ಸ್ಕೂಲ್ ಆಫ್ ಅರ್ಕಿಟಕ್ಚರ್ ಮತ್ತು ಪ್ಲಾನಿಂಗ್ನ್ ನ ಡಾ. ದೀಪಿಕಾ ಶೆಟ್ಟಿ, ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಪೂಜಾರಿ ಯವರು ತ್ರಿವರ್ಣ ಕಲಾ ಕೇಂದ್ರದ ಮಾರ್ಗದರ್ಶಕ, ಕಲಾವಿದ ಹರೀಶ್ ಸಾಗಾ ಉಪಸ್ಥಿತರಿದ್ದರು.
ಪ್ರಜ್ಞಾ ಭಟ್ ಪ್ರಾರ್ಥಿಸಿ, ಡಾ. ಜಿ. ಎಸ್. ಕೆ. ಭಟ್ ಸ್ವಾಗತಿಸಿದರು. ಉಜ್ವಲ್ ವಂದಿಸಿದ್ದರು.ಸುಲಕ್ಷಣ ರಮೇಶ್ ಕಾರ್ಯಕ್ರಮ ನಿರೂಪಿಸಿದರು.
ಚಾರ್ಕೊಲ್ ಮಿಶ್ರ ಮಾಧ್ಯಮದಲ್ಲಿ “ಪರಂಪರಾ” ಕಲಾ ಪ್ರದರ್ಶನವು ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶವನ್ನು ಬೆಳಿಗ್ಗೆ 10.00ರಿಂದ ಸಂಜೆ 7.30ರ ತನಕ ದಿನಾಂಕ 18.11.2024ರ ವರೆಗೆ ಕಲ್ಪಿಸಲಾಗಿದೆ.