ಕುಂದಾಪುರ: ಪ್ರತಿಯೊಬ್ಬರಲ್ಲಿಯೂ ಪರಿಸರ ಕಾಳಜಿ ಇದ್ದಾಗ ಮಾತ್ರ ಪರಿಸರ ಸ್ನೇಹಿ ಸಮಾಜ ನಿಮಾ೯ಣ ಮಾಡಲು ಸಾಧ್ಯವಿದೆ. ಮೊದಲು ನಾವು ಬದಲಾಗಬೇಕು. ಪರಿಸರ ಪೂರಕ ವಸ್ತುಗಳ ಬಳಕೆಯಿಂದ ನಮ್ಮ ಆರೋಗ್ಯದ ಜತೆಯಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಅವಕಾಶವಿದೆ ಎಂದು ಪತ್ರಕರ್ತ ಗಣೇಶ್ ಐಶ್ವರ್ಯ ಬೀಜಾಡಿ ಹೇಳಿದರು.
ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸಕಾ೯ರಿ ಪ್ರಥಮ ದಜೆ೯ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಬಿಬಿಎ ವಿದ್ಯಾಥಿ೯ಗಳಿಂದ ಕಾಲೇಜಿನ ಸಭಾಭವನದಲ್ಲಿ ಜರುಗಿದ ಪರಿಸರ ಸ್ನೇಹಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಪರಿಸರವನ್ನು ಮಾಲಿನ್ಯ ಮತ್ತು ನಾಶಪಡಿಸುವಂತಹ ಕೆಲಸಗಳು ನಡೆಯುತ್ತಿವೆ. ಪ್ರಕೃತಿ ದತ್ತವಾದ ಸಂಪನ್ಮೂಲಗಳನ್ನು ಕಾಪಾಡಿಕೊಂಡು ಮತ್ತು ನೈಸಗಿ೯ಕ ವಸ್ತುಗಳನ್ನು ವೃದ್ಧಿಸಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ. ಶಿಕ್ಷಣ ಸಂಸ್ಥೆ ಎನ್ನುವುದು ಕೇವಲ ಪ್ರಮಾಣ ಪತ್ರಗಳನ್ನು ಉತ್ಪಾದಿಸುವ ಪ್ಯಾಕ್ಟರಿಯಾಗಬಾರದು. ವಿದ್ಯಾಥಿ೯ಗಳಲ್ಲಿ ಸಮಾಜಮುಖಿ ಚಿಂತನೆಗಳನ್ನು ಬಿತ್ತಿಸಲು ಹಾಗೂ ಪ್ರೇರಣೆ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪರಿಸರ ಸ್ನೇಹಿ ಆಟಿಕೆ ಸಾಮಾಗ್ರಿಗಳಾದ ಚೆನ್ನೆಮಣೆ, ಮಕ್ಕಳ ಮರದ ಆಟಿಕೆಗಳು, ನಗುಗೊಂಬೆ, ಅಲಂಕಾರಿಕ ವಸ್ತುಗಳಾದ ಹಾಸುಕಲ್ಲಿನ ದೀಪ, ಬಿದಿರುಕಟ್ಟಿಗೆಯ ಉತ್ಪನಗಳಾದ ಕಳಸಿಗೆ, ಹೂಬುಟ್ಟಿ, ಕಡಗೋಲು, ಮರದ ಚಮಚ, ಬಟ್ಟೆ ಚೀಲ, ಗಾಜಿನ ಲೋಟ ಸೇರಿದಂತೆ ದಿನೋಪಯೋಗಿ ವಸ್ತುಗಳು, ಸಿರಿಧಾನ್ಯ ಉತ್ಪನ್ನಗಳು, ಮಣ್ಣಿನ ಮಡಿಕೆ, ಲೋಟ, ತಟ್ಟೆ, ಪೇಪರ್ ಕಪ್, ಹಲಸಿನ ಕೊಟ್ಟೆ, ಪೇಪರ್ ಪೆನ್ ಸ್ಟ್ಯಾಂಡ್ ಹೀಗೆ ಪರಿಸರ ಸ್ನೇಹಿ ಜೀವನ ಶೈಲಿಯನ್ನು ತಿಳಿಸುವ ವಸ್ತು ಪ್ರದರ್ಶನ ಗಮನ ಸೆಳೆಯಿತು. ವಿದ್ಯುತ್ ಬೈಕ್ ಮತ್ತು ಸೈಕಲ್ ಬಳಕೆ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ಕುರಿತು ಅರಿವು ಮೂಡಿಸಿದ ವಿದ್ಯಾಥಿ೯ಗಳ ಶ್ರಮ ಮತ್ತು ಹುಮ್ಮಸ್ಸು ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
ವಿದ್ಯಾಥಿ೯ ಕ್ಷೇಮಪಾಲನಾಧಿಕಾರಿ ಡಾ.ಉಷಾದೇವಿ ಜೆ.ಎಸ್, ಉಪನ್ಯಾಸಕರಾದ ಶ್ರೀಧರ್, ವನಮಾಲ, ಧನ್ಯ, ಗಣೇಶ್ ಪೈ, ರಾಮರಾಯ ಆಚಾರ್ಯ, ನಾಗರಾಜ್, ವೆಂಕಟರಾಮ್ ಭಟ್, ರೋಹಿಣಿ, ಸುಚಿತ್ರ, ಮುನಿರತ್ನ, ರಮೇಶ್ ಮತ್ತಿತರರು ಉಪಸ್ಥಿತರಿದ್ದರು. ಬಿಬಿಎ ವಿಭಾಗದ ಮುಖ್ಯಸ್ಥೆ ಚೇತನ ಎಂ ಕಾರ್ಯಕ್ರಮ ಸಂಘಟಿಸಿ ನಿರ್ವಹಿಸಿದರು.