ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ದಿನಾಂಕ 26 ಆಗಸ್ಟ್ 2024 ರಂದು ಮಹಾನ್ ಮಾನವತಾವಾದಿಯಾಗಿರುವ ಮದರ್ ತೆರೇಸಾರವರ 114ನೇ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು ಸರಿಸುಮಾರು 45 ವರ್ಷಗಳ ಕಾಲ ಬಡವರ, ರೋಗಿಗಳ, ಅನಾಥರ ಮತ್ತು ಮರಣ
ಸಂಕಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಇವರು ಒಬ್ಬ ಮಾನವತಾವಾದಿಗಳಾಗಿ ಬಡವರ, ನಿರ್ಗತಿಕರ,ರೋಗಿಗಳ, ಅನಾಥರ, ವೃದ್ಧರ ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇವರಿಗೆ ವಿಶ್ವದ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಭಾರತರತ್ನ, ಗೋಲ್ಡನ್ ಆನರ್ ಆಫ್ ದಿ ನೇಶನ್, ಪದ್ಮಶ್ರೀ, ಜವಾಹರ್ ಲಾಲ್ ನೆಹರು, ರಾಮನ್ ಮಾಗಸೆಸ್ಸೆ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ ಪುರಸ್ಕೃತರಾದ ಮಹಾನ್ ಚೇತನರ ಜನ್ಮದಿನಾಚರಣೆಯನ್ನು ದೀಪ ಪ್ರಜ್ವಲಿಸಿ ಪುಷ್ಪಾರ್ಚನೆಯೊಂದಿಗೆ ಆಚರಿಸಲಾಯಿತು ಸಂಸ್ಥೆಯ 1229 ವಿದ್ಯಾರ್ಥಿಗಳೂ ಮಹಾನ್ ಮಾನವತಾವಾದಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಸೆಪ್ಟೆಂಬರ್ ಮಾಹೆಯನ್ನು ಪೂರ್ಣವಾಗಿ ಚಾರಿಟಿ ತಿಂಗಳನ್ನಾಗಿ ಆಚರಿಸುವ ಉದ್ದೇಶದಿಂದ ಎಲ್ಲಾ ಮಕ್ಕಳಲ್ಲಿ ಪರೋಪಕಾರ, ವಾತ್ಸಲ್ಯ, ದಾನಧರ್ಮ ಮತ್ತು ಕರುಣಾ ಮನೋಭಾವವನ್ನು ಅಳವಡಿಸಿಕೊಳ್ಳುವತೆ ಪ್ರೆರೇಪಿಸಲಾಯಿತು
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳು, ಮುಖ್ಯಶಿಕ್ಷಕರು, ಉಪಾಪ್ರಾಂಶುಪಾಲರು, ಸಂಯೋಜಕರು, ಉಪನ್ಯಾಸಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು
ವಿದ್ಯಾರ್ಥಿಗಳಿಗೆ ಮದರ್ ತೆರೇಸಾ ರವರ ಭಾವಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಿ ನಂತರ ಮದರ್ ತೆರೇಸಾರವರ ಭಾವಚಿತ್ರದ ಪ್ರದರ್ಶನ ಏರ್ಪಡಿಸಲಾಯಿತು. ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.