ಕುಂದಾಪುರ : ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜ್ಞಾನದೊಂದಿಗೆ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಂಡರೆ ಅವರ ವ್ಯಕ್ತಿತ್ವ ವಿಕಸನವಾಗುತ್ತದೆ. ಆತ್ಮ ವಿಶ್ವಾಸ ಬೆಳೆಯುತ್ತದೆ. ವಿದ್ಯಾರ್ಥಿಗಳು ಮುಖ್ಯವಾಗಿ ತಮ್ಮ ಊರು, ಪರಿಸರ, ನಿತ್ಯ ಜೀವನ ಕ್ರಮದಲ್ಲಿ ಬರುವ ವಿಷಯಗಳು, ಸಾಧಕರ ವಿಷಯಗಳು, ನಮ್ಮ ಸಂಸ್ಕೃತಿ ಹೀಗೆ ವಿವಿಧ ವಿಚಾರಗಳ ಬಗ್ಗೆ ಜ್ಞಾನ ಪಡೆಯುತ್ತಿರಬೇಕು. ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅರಿಯುತ್ತಿರಬೇಕು” ಎಂದು ಕುಂದಾಪುರದ ಖ್ಯಾತ ಸಾಮಾಜಿಕ ಧುರೀಣ ಸುಪರ್‌ಗ್ರೇಡ್ ಇಲೆಕ್ಟಿçಕಲ್ ಕಂಟ್ರಾಕ್ಟರ್ ಕೆ. ಆರ್. ನಾಯ್ಕ್ ಹೇಳಿದರು.
ಭಂಡರ‍್ಸ್ಕಾರ‍್ಸ್ ಪ.ಪೂ.ಕಾಲೇಜು ಹಾಗೂ “ಕುಂದಪ್ರಭ” ಸಂಸ್ಥೆ ಏರ್ಪಡಿಸಿದ “ಜ್ಞಾನೋದಯ ಸ್ಪರ್ಧೆ” ಉದ್ಘಾಟಿಸಿ ಅವರು ಮಾತನಾಡಿದರು.
ಬೈಂದೂರು, ಕುಂದಾಪುರ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಭಂಡಾರ್‌ಕರ‍್ಸ್ ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಾ| ಜಿ.ಎಂ. ಗೊಂಡ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಂಡಾರ್‌ಕರ‍್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ| ಶುಭಕರಾಚಾರಿ ಹಲವು ಸಾಧಕರ ಉದಾಹರಣೆಗಳನ್ನು ನೀಡಿ ಜ್ಞಾನ ಹೆಚ್ಚಿಸಿಕೊಳ್ಳುವುದರಿಂದ ಜೀವನದಲ್ಲಿ ಆತ್ಮ ವಿಶ್ವಾಸದಿಂದ ಮುನ್ನಡೆಯಬಹುದು ಎಂದರು.
“ಕುAದಪ್ರಭ” ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ಮಾತನಾಡಿ, “ಕರ್ನಾಟಕದಲ್ಲೇ ಹಲವು ಪ್ರಮುಖ ಸಾಧನೆಗಳನ್ನು ಮಾಡಿರುವ ಕುಂದಾಪುರ ತಾಲೂಕಿನ ಕುರಿತು ವಿದ್ಯಾರ್ಥಿಗಳು ಅರಿವು ಹೊಂದಿರಬೇಕು ಎನ್ನುವ ಕಾರಣದಿಂದ ಈ “ಜ್ಞಾನೋದಯ” ಕಾರ್ಯಕ್ರಮ ಏರ್ಪಡಿಸಲಾಗಿದೆ” ಎಂದರು. ಜೀವಶಾಸ್ತç ವಿಭಾಗದ ಉಪನ್ಯಾಸಕಿ ಸರೋಜ ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಸೂರಜ್ ಭಟ್ ನಿರೂಪಿಸಿದರು. ಕಾಮರ್ಸ್ ವಿಭಾಗದ ವಿದ್ಯಾಧರ ವಂದಿಸಿದರು.