ಕುಂದಾಪುರ, ಜ.13: ಸ್ಥಳೀಯ ಸಂತ ಮೇರಿಸ್ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಕೊಠಡಿ ಮತ್ತು ಕ್ರೀಡಾ ಕೊಠಡಿಯ ಉದ್ಘಾಟನೆಯನ್ನು ದಾನಿಗಳಾದ ಅನಿಲ್ ಮತ್ತು ಸಿಂಥಿಯಾ ಸಿಕ್ವೇರಾ ದಂಪತಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂತ ಮೇರಿಸ್ ಪ್ರೌಢಶಾಲೆಯ ಜಂಟಿ ಕಾರ್ಯದರ್ಶಿಗಳಾದ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶುಭ ಹಾರೈಸಿದರು. ವಿದ್ಯಾರ್ಥಿಗಳಿಗೆ ಪಾಠ,ಆಟ, ಊಟ ಇವು ಮುರೂ ಕೂಡ ಮುಖ್ಯ. ಈಗ ಪಾಟದ ಜೊತೆ ಅಡುಗೆ ಕೋಣೆ ಸಿದ್ದವಾಗಿದೆ, ಇನ್ನು ಮುಂದೆ ನಿಮಗೆ ವಿದ್ಯಾರ್ಥಿಗಳಿಗೆ ರುಚಿ ಶುಚಿಯಾದ ಊಟ ದೊರಕಲಿ, ಅಡುಗೆ ಕೋಣೆಯ ಜೊತೆ ಕ್ರೀಡಾ ಕೊಠಡಿಯು ಉದ್ಘಾಟನೆಗೊಂಡಿದೆ, ವಿದ್ಯಾರ್ಥಿಗಳು ಪಾಟದ ಜೊತೆ ಒಳ್ಳೆಯ ಕ್ರೀಡಾಪಟುಗಳಾಗಬೇಕು. ಕನ್ನಡ ಮಾಧ್ಯಮದಲ್ಲಿ ಕಲಿಯುವ ನೀವು ಭಾಗ್ಯವಂತರು. ಈ ಶಾಲೆಯಲ್ಲಿ ಕಲಿತವರು ರಾಷ್ಟ್ರ, ಅಂತರಾಷ್ಟ್ರಿಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ, ನೀವು ಕೂಡ ಅಂತಹ ಸಾಧಕರಾಬೇಕು ಎಂದು ಸ್ಪೂರ್ತಿಯ ಮಾತುಗಳನ್ನಾಡುತ್ತಾ “ಇನ್ನು ಈ ಶಾಲೆಗೆ ನಮಗೊಂದು ಉತ್ತಮ ವಿಜ್ಞಾನ ಕೊಠಡಿ ಬೇಕಿದೆ, ಇದು ಕೂಡ ನಮಗೆ ದಾನಿಗಳ ಮುಖಾಂತರ ಲಭ್ಯವಾಗುವುದು” ಎಂದು ಆಶಾಭವನೆ ವ್ಯಕ್ತ ಪಡಿಸುತ್ತಾ ಅವರು ದಾನಿಗಳನ್ನು ಅಭಿನಂದಿಸಿದರು.
ಅಡುಗೆ ಕೊಠಡಿ ಕ್ರೀಡಾ ಕೊಠಡಿ ನಿರ್ಮಿಸಲು ದಾನ ನೀಡಿದ ಮುಖ್ಯದಾನಿಗಳಲ್ಲಿ ಅನಿಲ್ ಮತ್ತು ಸಿಂಥಿಯಾ ಸಿಕ್ವೇರಾ ದಂಪತಿಗಳನ್ನು ಸನ್ಮಾನಿಸಲಾಯಿತು. ಕೊಠಡಿಗಳನ್ನು ನಿರ್ಮಿಸಲು ಸಹಕರಿಸಿದ ಎಂಜಿನಿಯರ್ ವಾಲ್ಟರ್ ಡಿಸೋಜಾ, ಸಹಾಯಕ ಆಸೀಸಿ ಡಿಸೋಜಾ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರೋಜರಿ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಇತರ ದಾನಿಗಳು, ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಎಲ್ಲಾ ಮುಖ್ಯಸ್ಥರು, ಶಿಕ್ಷಕರು, ರೋಜರಿ ಚರ್ಚಿನ ಹಣಕಾಸು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸಂತ ಮೇರಿಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಅಸುಂಪ್ತಾ ಲೋಬೊ ಸ್ವಾಗತಿಸಿದರು. ಶಿಕ್ಷಕ ಭಾಸ್ಕರ ಗಾಣಿಗ ವಂದಿಸಿದರು. ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು.