ಬ್ರಹ್ಮಾವರ: ಇಲ್ಲಿನ 2024-2025 ನೇ ಸಾಲಿನ ಎನ್.ಎಸ್.ಎಸ್ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮಗಳನ್ನು ಶ್ರೀಮತಿ ಸವಿತಾ ಎರ್ಮಳ್ ( ವಿಭಾಗೀಯ ಅಧಿಕಾರಿ) ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು , ಬ್ರ ಹ್ಮಾ ವರ ಇಲ್ಲಿನ ಉಪನ್ಯಾಸಕಿಯವರು ಉದ್ಘಾ ಟಿಸಿದರು. ಈ ಸಂಧರ್ಬದಲ್ಲಿ ಎನ್.ಎಸ್.ಎಸ್ ಸ್ವಯಂ ಸೇವಕರನ್ನು ಉದ್ದೇಶಿಸಿ “ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ” ಎಂಬ ಕೇಂದ್ರ ಸರಕಾರದ ಅಭಿಯಾನದ ಅಂಗವಾಗಿ ಉಡುಪಿ ಜಿಲ್ಲೆಯ ರಾಯಭಾರಿಯ ನೆಲೆಯಲ್ಲಿ ಉಪನ್ಯಾ ಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಯನ್ ಐವಾನ್ ದೊನಾತ್ ಸುವಾರಿಸ್ ರವರು ವಹಿಸಿದದರು. ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಶ್ರೀ ಪ್ರಸನ್ನ ಅಡಿಗ ಇವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿ ನಾಯಕಿ ಕುಮಾರಿ ಸ್ವಾತಿ ವಂದಿಸಿದರು. ಸಂಸ್ಕೃತ ಉಪನ್ಯಾಸಕರಾದ ಶ್ರೀ ರಾಘವೇಂದ್ರ ಐತಾಳ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಘಟಕದ ಉಪನಾಯಕ ಡಿಯಾನ್ ಎನ್ ಎಸ್ ಎಸ್ ಸ್ವಯಂಸೇವಕರು ಮತ್ತು ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.