ನಂದಳಿಕೆ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶತಮಾನೋತ್ಸವ ಪೂರೈಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಬೋರ್ಡ್ ಶಾಲೆ ) ನಂದಳಿಕೆಯಲ್ಲಿ ಹಳೆ ವಿದ್ಯಾರ್ಥಿ ಮಿತ್ರರ ಸಹಕಾರದಲ್ಲಿ ಶಾಲೆಯ ಮಕ್ಕಳಿಗೆ ಯಕ್ಷಗಾನ ತರಗತಿಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಶಾಲೆಯ ಅಮೃತ ಮಹೋತ್ಸವದ ಸಭಾಂಗಣದಲ್ಲಿ ನಡೆಯಿತು.
ಯಕ್ಷಗಾನ ತರಗತಿಯ ಉದ್ಘಾಟನಾ ಕಾರ್ಯಕ್ರಮವನ್ನು ನಂದಳಿಕೆ ಸರಳ ಎಸ್ ಹೆಗ್ಡೆ ನೆರವೇರಿಸಿ ಮಾತನಾಡುತ್ತಾ ಹಳೆ ವಿದ್ಯಾರ್ಥಿ ಮಿತ್ರರಿಂದ ಸಹಕಾರದಿಂದ ಇಂಥ ಹತ್ತು ಹಲವು ಕಾರ್ಯಕ್ರಮ ನೆರವೇರಿದೆ.ಯಕ್ಷಗಾನ ಕಲಿಯುವುದರಿಂದ ನಮ್ಮ ಆರೋಗ್ಯ ಲವಲವಿಕೆ ಯಿಂದ ಕೂಡಿರುತ್ತದೆ.ಶಿಕ್ಷಣದೊಂದಿಗೆ ಕಲೆಯನ್ನು ಮೈಗೂಡಿಸಿದಾಗ ಮಕ್ಕಳ ಶಿಕ್ಷಣ ಉತ್ತಮವಾಗುತ್ತದೆ ಎಂದರು.
ಶಾಲೆಯ ಮುಖ್ಯ ಶಿಕ್ಷರಾಗಿರುವ ಕರುಣಾಕರ್ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಸುಭಾಷ್ ಕುಮಾರ್ ನಂದಳಿಕೆ ವಂದಿಸಿದರು.ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಅಧ್ಯಕ್ಷರಾಗಿರುವ ವೀಣಾ ಪೂಜಾರಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಬಾಲಚಂದ್ರ ಶೆಟ್ಟಿ , ಯಕ್ಷಗಾನ ಗುರುಗಳಾದ ಸತೀಶ್ ಕಾರ್ಕಳ ,ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷರಾದ ಸತ್ಯಪ್ರಸಾದ್ ಶೆಟ್ಟಿ , ಕೋಶಾಧಿಕಾರಿ ಶ್ರೀಕಾಂತ್ ಆಚಾರ್ಯ ಉಪಸ್ಥರಿದ್ದರು.ಶಾಲೆಯ ಶಿಕ್ಷಕರಾಗಿರುವ ಸದಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.