

ಶ್ರೀನಿವಾಸಪುರ : ತಾಲೂಕಿನ ಯರ್ರಂವಾಪಲ್ಲಿ ಗ್ರಾಮದಲ್ಲಿ ಜೆಜೆಎಂ ಕಾಮಾಗಾರಿ ಮುಗಿದರೋ ಸಹ ಕಾಮಗಾರಿಗಾಗಿ ತೆಗೆದ ಕಾಲುವೆಗಳು ಸರಿಯಾಗಿ ಮುಚ್ಚಿಲ್ಲ ಇದರಿಂದ ಮಕ್ಕಳು , ಮುದಕರು, ವಾಹನ ಸವಾರರಿಗೆ ಓಡಾಡಲು ತೊಂದರೆ ಯಾಗುತ್ತಿದೆ ಎಂದು ಗ್ರಾ.ಪಂ.ಸದಸ್ಯ ವೈ.ಆರ್.ಶ್ರೀನಿವಾಸರೆಡ್ಡಿ ಆರೋಪಿಸಿದ್ದಾರೆ.
ಕಾಮಗಾರಿ ಮುಗಿದು ನಾಲ್ಕೈದು ತಿಂಗಳು ಆದರೂ ಸಹ ಕಾಲುವೆಗಳನ್ನು ಗುತ್ತಿಗೆದಾರರು ಮುಚ್ಚದೆ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ ತಕ್ಷಣ ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಗುತ್ತಿಗೆದಾರರಿಗೆ ಕಾಲುವೆಗಳನ್ನು ಸರಿಯಾಗಿ ಮುಚ್ಚಲು ಸೂಚನೆ ನೀಡುವಂತ ಆಗ್ರಹಿಸಿದರು.