

ಶ್ರೀನಿವಾಸಪುರ : ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಸ್ಥಳೀಯ ಗ್ರಾ,ಪಂ. ನೀತಿ ಸಂಹಿತೆ ಹೆಸರಿನಲ್ಲಿ ಮನೆಗಳ ಮೇಲೆ ಕಟ್ಟಲಾಗಿದ್ದ ಕೇಸರಿ ಧ್ವಜ ಹಾಗೂ ಶ್ರೀರಾಮನ ಕಟೌಟ್ಗಳನ್ನು ತೆರವು ಮಾಡಿದ ಪಂಚಾಯಿತಿ ಸಿಬ್ಬಂದಿ ಗ್ರಾಮದ ಕೂರೀಗೆಪಲ್ಲಿ ರಸ್ತೆಯ ತಿಪ್ಪೆಯಲ್ಲಿ, ಸ್ಮಶಾನದ ಬಳಿ ಬಿಸಾಡಿದ್ದಕ್ಕೆ ಗ್ರಾ.ಪಂ ಸದಸ್ಯ ವೇಂಪಲ್ಲಿ ವೆಂಕಟರಮಣ, ಮೊಟಮಾಕಲ ರಘು, ರೆಡ್ಡಪ್ಪ, ಯಡಗಾನಪಲ್ಲಿ ಶಿವಣ್ಣ, ವೆಂಕಟರಮಣ, ಮಲ್ಲಿಮೋರಪಲ್ಲಿ ಮದನಮೋಹನರೆಡ್ಡಿ, ಚಿಂತಪಲ್ಲಿ ಗ್ರಾಮದ ಗೋವಿಂದು, ಮಂಜುನಾಥ್, ವೆಂಕಟೇಶ್, ದಿಗವ ಚಿಂತಪಲ್ಲಿ ಬಾಲಾಜಿರೆಡ್ಡಿ ರವರು ಗ್ರಾ,ಪಂ ಸಿಬ್ಬಂದಿ ಕಾರ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕೂರಿಗೇಪಲ್ಲಿ – ಅಡ್ಡಗಲ್ ರಸ್ತೆಯಲ್ಲಿ ರಸ್ತೆ ತಡೆಮಾಡಿ ಪಿಡಿಒ ಏಜಾಜ್ಪಾಷ ವಿರುದ್ಧ ದಿಕ್ಕಾರಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಗೌನಿಪಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಪ್ರತಿಭಟನಕಾರರನ್ನು ಸಮಾದಾನಪಡಿಸಿದ ನಂತರ ರಸ್ತೆ ತಡೆಯ ಪ್ರತಿಭಟನಕಾರರನ್ನು ತೆರವುಗೊಳಿಸಿದರು.

